fbpx
ದೇವರು

ಶ್ರೀ ಗುರು ರಾಯರ ಸನ್ನಿಧಿಯಲ್ಲಿ ನೀಡುವ ಪವಿತ್ರ ಮಂತ್ರಾಕ್ಷತೆಯನ್ನು ಏನು ಮಾಡಬೇಕು,ಮಂತ್ರಾಕ್ಷತೆಯನ್ನು ತಲೆಯ ಮೇಲೆ ಯಾಕೆ ಹಾಕಿ ಕೊಳ್ಳುತ್ತಾರೆ ಗೊತ್ತಾ

ಧಾರ್ಮಿಕ ವಿಧಿ ವಿಧಾನಗಳಲ್ಲಿ ಬಳಸಲ್ಪಡುವ ಮಂತ್ರಾಕ್ಷತೆಗೆ ವಿಶಿಷ್ಟ ಅರ್ಥವಿದೆ. ಶ್ರೇಯಸ್ಸು,ಆಶೀರ್ವಾದದ ಪ್ರತೀಕ ಈ ಮಂತ್ರಾಕ್ಷತೆ ಎನ್ನಲಾಗುತ್ತದೆ.ಗುರು ರಾಘವೇಂದ್ರರ ದೇವಾಲಯದಲ್ಲಿ ಮಂತ್ರಾಕ್ಷತೆಯನ್ನು ನೀಡುವ ಪ್ರಾಮುಖ್ಯತೆ ಅರಿವಿಗೆ ಬರುತ್ತದೆ. ಇದೆ ರೀತಿ ಹಲವಾರು ಸ್ಥಳಗಳಲ್ಲಿ ಮಂತ್ರಾಕ್ಷತೆಯನ್ನು ಬಳಸಲಾಗುತ್ತದೆ. ಆದರೆ ಇದರ ಒಳ ಅರ್ಥ ಮಾತ್ರ ಇಂದಿನ ಯುವ ಪೀಳಿಗೆಯ ಜನರಿಗೆ ತಿಳಿದಿಲ್ಲ.ಗುರು ಶಿಷ್ಯರ ಬಾಂಧವ್ಯದ ಸಂಕೇತವೂ ಆಗಿರುವ ಮಂತ್ರಾಕ್ಷತೆ ಮಠಕ್ಕೆ ಬರುವ ಶಿಷ್ಯರು ಗುರುಗಳಿಂದ ಆಶೀರ್ವಚನ ,ಆಶೀರ್ವಾದ ಪಡೆದು ಮಂತ್ರಾಕ್ಷತೆಯೊಂದಿಗೆ ತೆರಳುವುದರಿಂದ ಬರಿಗೈಯಲ್ಲಿ ಹೋಗುವುದಿಲ್ಲ ಎನ್ನುವ ವಾಡಿಕೆ ಇದೆ.

 

 

 

ಬರುವಾಗ ಫಲ ತಾಂಬೂಲವನ್ನು ತರುವ ಶಿಶ್ಯರು ಮಠದ ಗುರುಗಳಿಂದ ಮಂತ್ರಾಕ್ಷತೆಯನ್ನು ಪಡೆದಿಕೊಳ್ಳುವುದು ಇಲ್ಲಿನ ಸಂಪ್ರದಾಯ.ಮೂಲತಃ ಮಂತ್ರಾಕ್ಷತೆ ಎನ್ನುವ ಪದ ಮಂತ್ರ ಮತ್ತು ಅಕ್ಷತೆ ಎರಡು ಪದಗಳಿಂದ ಮೂಡಿರುವಂಥದ್ದು.ಅಕ್ಷತ ಎಂದರೆ ಅಖಂಡ ವೆಂದು ಅರ್ಥ.ತುಂಡು ಇಲ್ಲದ ಒಂದು ಪರಿಪೂರ್ಣದ ಸಂಕೇತ.ಮನುಷ್ಯನಿಗೆ ಜೀವನದಲ್ಲಿ ಪರಿಪೂರ್ಣತೆ ಬೇಕು.ಆರೋಗ್ಯ, ಆಯುಷ್ಯ,ರೂಪವಿರಬೇಕು ಆಗಲೇ ಪೂರ್ಣ .ಯಾವುದನ್ನು ಮನನ ಮಾಡುವುದರಿಂದ ಅದು ನಮ್ಮನ್ನು ರಕ್ಷಿಸುತ್ತದೆಯೋ ಅದು ಮಂತ್ರ.ಶಿಷ್ಯ ಅಥವಾ ಭಕ್ತರ ಕ್ಷೇಮಕ್ಕಾಗಿ,ಶ್ರೇಯಸ್ಸಿಗಾಗಿ, ಗುರು ಮನಸ್ಸಿನಲ್ಲಿ ಮನನ ಮಾಡಿ ಅನುಗ್ರಹಿಸುವುದನ್ನು ಮಂತ್ರ ಎನ್ನಲಾಗುತ್ತದೆ.ಹಾಗಾಗಿ ಇವೆರಡರಿಂದ ಶ್ರೇಯಸ್ಸು ಲಭ್ಯವಾಗುತ್ತದೆ.
ಮಂತ್ರಾಕ್ಷತೆಯ ಫಲ:ನಮ್ಮಲ್ಲಿ ಭಕ್ತಿ, ಭಾವ ಎಷ್ಟಿದೆಯೋ ಅಷ್ಟು ಫಲ ನೀಡುತ್ತದೆ.ಈ ಮಂತ್ರಾಕ್ಷತೆಯನ್ನು ನಂಬಿದವರಿಗೆ ಸೋಲಿಲ್ಲ ಎಂದು ಹೇಳಲಾಗುತ್ತದೆ.ಗುರು ಪ್ರೀತಿಯ ಪ್ರತೀಕವಾದ ಈ ಮಂತ್ರಾಕ್ಷತೆ ನಮ್ಮ ಸಂಪ್ರದಾಯದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದೆ.ಇದರ ಅರ್ಥ ವ್ಯಾಪ್ತಿ ತಿಳಿದ ಇದನ್ನು ನಾವು ಬದುಕಿನ ಅವಿಭಾಜ್ಯ ಅಂಗವೆನಿಸುವುದು.

 

 

 

ಭಾವವಿರಲಿ,ಭಕ್ತಿಯಿರಲಿ, ಜೀವನದಲ್ಲಿ ಇದಕ್ಕೆ ಔಷಧಿ ಎಂದರೆ ಮಂತ್ರಾಕ್ಷತೆ ಒಂದೇ. ಬದುಕಿನ ಎಲ್ಲಾ ಉದ್ದೇಶಗಳು ಮತ್ತು ಪ್ರಶ್ನೆಗಳಿಗೆ ಉತ್ತರಿಸುತ್ತಾ ಭವ ಸಾಗರವನ್ನು ಮಂತ್ರಾಕ್ಷತೆ ದಾಟಿಸುತ್ತದೆ.ಮಂತ್ರಾಕ್ಷತೆ ಎಂದಿಗೂ ನಿಮ್ಮ ಶಿರದ ಮೇಲಿರಲಿ.ಮದುವೆ ಮತ್ತು ಇನ್ನಿತರ ಶುಭ ಸಮಾರಂಭಗಳಲ್ಲಿ ಆರೈಕೆಯ ಸಂಕೇತವಾಗಿಯೂ ಹಿರಿಯರು ಅಕ್ಷತೆಯನ್ನು ಹಾಕುತ್ತಾರೆ.ದೇವರಲ್ಲಿ ಪ್ರಾರ್ಥಿಸಿ ಹಾಕುವ ಮಂತ್ರಾಕ್ಷತೆಗೆ ವಿಶಿಷ್ಟ ಸ್ಥಾನವಿದೆ.ಎಲ್ಲರ ಒಳಿತಿಗಾಗಿ ದೇವರ ಮೊರೆ ಹೋಗುವುದು ವಿಶೇಷ.
ರಾಯರ ಮಠದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ನೀವು ತಲೆಯ ಮೇಲೆ ಹಾಕಿಕೊಳ್ಳುತ್ತೀರ ಮತ್ತು ಅದು ಕೆಲವು ನಿಮಿಷಗಳಲ್ಲೇ ಕೆಳಗೆ ಉರುಳಿ ಹೋಗುತ್ತದೆ.ಮಂತ್ರಾಕ್ಷತೆಯ ಶಕ್ತಿ ಅಪಾರ.ಅದನ್ನು ನೀವುಬೆ ರೀತಿಯಾಗಿ ಉಪಯೋಗಿಸಿದ್ದೆ ಆದರೆ ನಿಮ್ಮ ಸಕಲ ಕೆಲಸಗಳು ಯಾವುದೇ ಅಡ್ಡಿ ಇಲ್ಲದೆ ಸಾಗುತ್ತದೆ.ಮತ್ತು ಆರೋಗ್ಯದ ಸಮಸ್ಯೆ ಕೂಡ ನಿಮಗೆ ಭಾಧಿಸುವುದಿಲ್ಲ ಮತ್ತು ನಿಮಗೆ ಮನಃಶಾಂತಿ ಲಭಿಸುತ್ತದೆ.

ಮಠದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ನೀವು ಒಂದು ಬಿಳಿ ಬಣ್ಣದ ವಸ್ತ್ರದಲ್ಲಿ ಹಾಕಿ ಅದನ್ನು ನಿಮ್ಮ ಬಲ ಭಾಗದಲ್ಲಿ ಇಟ್ಟುಕೊಳ್ಳಿ. ನಂತರ ಮನೆಗೆ ತೆರಳಿ ಅದಕ್ಕೆ ಶ್ರೀಗಂಧವನ್ನು ನೀರಿನಲ್ಲಿ ಕಲಸಿ ಅದಕ್ಕೆ ತುಳಸಿಯನ್ನು ಹಾಕಿ ಮಂತ್ರಾಕ್ಷತೆಯನ್ನು ಬೆರೆಸಿ ಆದರ ತೀರ್ಥವನ್ನು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಂಡು ಗುರೂರಾಯರನ್ನು ನೆನೆಯುತ್ತಾ ನಿಮ್ಮ ಕಾರ್ಯವನ್ನು ಮಾಡಿ ಆಗ ನಿಮ್ಮ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಆಗ ಯಾವುದೇ ದುಷ್ಟ ಶಕ್ತಿಯಿಂದ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಮನಃಶಾಂತಿ ಕೂಡ ದೊರೆಯುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top