fbpx
ದೇವರು

ಕರ್ನಾಟಕದಲ್ಲಿ ನೋಡಲೇ ಬೇಕಾದ ಶಕ್ತಿಯುತ ಲೋಕ ಪ್ರಸಿದ್ಧಿ ಪುಣ್ಯಕ್ಷೇತ್ರಗಳು ಯಾವುವು ಗೊತ್ತಾ,ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ರೆ ಸಕಲ ಇಷ್ಟಾರ್ಥ ಪ್ರಾಪ್ತಿಯಾಗಿ ಪಾಪಗಳು ತೊಳೆದುಹೋಗುತ್ತೆ

ನಮ್ಮ ಕರ್ನಾಟಕದ ಕರಾವಳಿ ತೀರದಲ್ಲಿ ನೋಡಲೇಬೇಕಾದ ಮತ್ತು ಪ್ರಸಿದ್ಧಿ ಪಡೆದಿರುವ ದೇವಾಲಯಗಳ ಬಗ್ಗೆ ವಿವರಗಳು.
ಕರ್ನಾಟಕದ ಕರಾವಳಿ ತೀರದಲ್ಲಿ ಬೇಕಾದಷ್ಟು ದೇವಾಲಯಗಳಿವೆ. ಅವುಗಳಲ್ಲಿ ಕೆಲವು ಚಿಕ್ಕ ಚಿಕ್ಕ ದೇವಾಲಯಗಳಿವೆ. ಆದರೆ ಇನ್ನೂ ಕೆಲವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವಂತಹ ದೇವಾಲಯಗಳು ಇವೆ. ಉಡುಪಿ, ಮಂಗಳೂರಿನಲ್ಲಿ ದೇವಾಲಯಗಳಿದ್ದರೆ ಇನ್ನು ಕೆಲವು ಪಶ್ಚಿಮಘಟ್ಟಗಳಲ್ಲಿ ಇವೆ. ಬನ್ನಿ ನಾವು ನಮ್ಮ ಕರ್ನಾಟಕದಲ್ಲಿ ಯಾವೆಲ್ಲಾ ದೇವಾಲಯಗಳು ಇವೆ ಎನ್ನುವುದನ್ನು ತಿಳಿದುಕೊಳ್ಳೋಣ.

ಧರ್ಮಸ್ಥಳ:ಧರ್ಮಸ್ಥಳದ ಮಂಜುನಾಥ ಸ್ವಾಮಿಯು ನೇತ್ರಾವತಿ ನದಿಯ ತಟದಲ್ಲಿರುವ ಪ್ರಸಿದ್ಧ ದೇವಾಲಯ. ಧರ್ಮಸ್ಥಳದ ಮಂಜುನಾಥ ಸ್ವಾಮಿ ಐತಿಹಾಸಿಕ ಹಿನ್ನೆಲೆಯ ಜೊತೆಗೆ ಬಹಳ ಪ್ರಖ್ಯಾತಿಯನ್ನು ಹೊಂದಿರುವ ದೇವಾಲಯವಾಗಿದೆ. ಶ್ರೀ ವೀರೇಂದ್ರ ಹೆಗ್ಗಡೆಯವರು ಇಲ್ಲಿನ ಧರ್ಮ ದರ್ಶಿಗಳಾಗಿದ್ದು, ಅಧಿಕಾರಿಗಳಾಗಿದ್ದಾರೆ.
ಶ್ರೀ ಕೊಲ್ಲೂರು ಮೂಕಾಂಬಿಕೆ:ಕೊಲ್ಲೂರು ಮೂಕಾಂಬಿಕೆ ದೇವಿಗಾಗಿ ಸಮರ್ಪಿತವಾಗಿರುವ ಮೂಕಾಂಬಿಕೆ ದೇವಸ್ಥಾನ ಮಂಗಳೂರಿನಿಂದ 130 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ 440 ಕಿಲೋಮೀಟರ್ ದೂರದಲ್ಲಿದೆ. ಇದೊಂದು ಧಾರ್ಮಿಕ ಸ್ಥಳದ ಜೊತೆಗೆ ಒಂದು ಪ್ರವಾಸಿ ಕೇಂದ್ರವೂ ಹೌದು.
ಉಡುಪಿಯ ಶ್ರೀ ಕೃಷ್ಣ ಮಠ:ಉಡುಪಿಯ ಶ್ರೀ ಕೃಷ್ಣನ ಮಠಕ್ಕೆ ಪ್ರಸಿದ್ಧಿಯಾಗಿದೆ. ಈ ಮಠವನ್ನು 13ನೇ ಶತಮಾನದಲ್ಲಿ ಮದ್ವಾಚಾರ್ಯರು ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ. ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿಕೊಳ್ಳಬಹುದು.
ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ:ಇದು ಮಂಗಳೂರಿನಿಂದ ಕೇವಲ ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ .ಕಟೀಲುನಲ್ಲಿರುವ ಈ ದೇವಸ್ಥಾನವು ದುರ್ಗಾಪರಮೇಶ್ವರಿ ದೇವಿಗೆ ಸಮರ್ಪಿತವಾಗಿದೆ.
ಶೃಂಗೇರಿ:ಶೃಂಗೇರಿ ಶಾರದಾ ದೇವಾಲಯ ಮಂಗಳೂರಿನಿಂದ 100 ಕಿಲೋಮೀಟರ್ ಹಾಗೂ ಬೆಂಗಳೂರಿನಿಂದ 330 ಕಿಲೋಮೀಟರ್ ದೂರದಲ್ಲಿದೆ. ಈ ದೇವಾಲಯ ಶಾರದಾಂಬೆಗೆ ಸಮರ್ಪಿತವಾಗಿದೆ ಇದನ್ನು ಶೃಂಗೇರಿ ಶಾರದಾ ಪೀಠ ಎಂದು ಕರೆಯಲಾಗುತ್ತದೆ.
ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ:ಈ ದೇವಾಲಯ ಶ್ರೀ ಅನ್ನಪೂರ್ಣೇಶ್ವರಿ ಮಾತೆಗೆ ಸಮರ್ಪಿತವಾಗಿದೆ. ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಇದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಮೀಪದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯಿಂದ 100 ಕಿಲೋಮೀಟರ್ ದೂರದಲ್ಲಿದೆ.

 

 

 

ಇಡುಗುಂಜಿ ಗಣಪತಿ:ಇಡಗುಂಜಿ ಗಣೇಶ ಸ್ಥಾನವು ಗಣಪತಿಗೆ ಸಮರ್ಪಿತವಾಗಿರುವ ದೇವಾಲಯವಾಗಿದ್ದು, ಇದು ಉತ್ತರ ಕರ್ನಾಟಕದ ಇಡಗುಂಜಿ ಎನ್ನುವ ಸ್ಥಳದಲ್ಲಿ ಬಹಳ ಪ್ರಸಿದ್ಧವಾದ ದೇವಾಲಯವಾಗಿದೆ. ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತಿದೆ . ಪಶ್ಚಿಮ ಘಟ್ಟದಲ್ಲಿರುವ ಗಣೇಶನ ಪ್ರಸಿದ್ದ ದೇವಾಲಯ ಇದಾಗಿದ್ದು, ಇದು ಹೊನ್ನಾವರದಿಂದ 14 ಕಿಲೋ ಮೀಟರ್ ದೂರದಲ್ಲಿದೆ.
ಗೋಕರ್ಣ:ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವು ಕುಮಟಾ ತಾಲೂಕು ಉತ್ತರ ಕರ್ನಾಟಕದಲ್ಲಿದೆ. ಈ ದೇವಾಲಯವು ಈಶ್ವರನಿಗೆ ಸಮರ್ಪಿತವಾಗಿದ್ದು, ಶಿವನನ್ನು ಮಹಾಬಲೇಶ್ವರ ಎಂದು ಹೇಳಲಾಗುತ್ತದೆ.
ಹಟ್ಟಿ ಅಂಗಡಿ ಗಣಪತಿ:ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳಲ್ಲಿ ಇದು ಕೂಡ ಒಂದು . ಈ ದೇವಾಲಯವು ಉಡುಪಿ , ಕುಂದಾಪುರ ತಾಲೂಕಿನಲ್ಲಿದೆ.ಇಲ್ಲಿನ ಗರ್ಭ ಗುಡಿಯಲ್ಲಿರುವ ಶ್ರೀ ವಿನಾಯಕನ ವಿಗ್ರಹವು ಪೂರ್ವಾಭಿಮುಖವಾಗಿ ಪ್ರತಿಷ್ಠಾಪನೆಗೊಂಡಿದೆ. ಕುಂದಾಪುರದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿದೆ.
ಮುರುಡೇಶ್ವರ:ಮುರುಡೇಶ್ವರದಲ್ಲಿರುವ ಶಿವನ ವಿಗ್ರಹವು ಎರಡನೇ ಅತ್ಯಂತ ದೊಡ್ಡ ಶಿವನ ವಿಗ್ರಹವಾಗಿದೆ. ಎಷ್ಟೇ ದೂರದಿಂದಲೂ ಸಹ ಇದನ್ನು ನಾವು ಕಾಣಬಹುದು. ಶಿವನ ದೇವಾಲಯ ಉತ್ತರ ಕರ್ನಾಟಕ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಈ ದೇವಸ್ಥಾನದ ಜೊತೆಗೆ ಬೀಚ್ ನ ಆನಂದವನ್ನು ಕೂಡ ಪಡೆದುಕೊಳ್ಳಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top