ದೇವರು

ನವರಾತ್ರಿಯಲ್ಲಿ ಯಾವ ಯಾವ ದಿನ ಯಾವ ಯಾವ ದೇವಿಯನ್ನ ಪೂಜಿಸಬೇಕು,ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ದಸರಾ ನಮ್ಮ ನಾಡ ಹಬ್ಬ. ಈ ಹಬ್ಬದಲ್ಲಿ ನವರಾತ್ರಿಗಳಂದು ನವ ದುರ್ಗೆಯರನ್ನ ಪೂಜಿಸಿದರೆ ಸಕಲ ಇಷ್ಟಾರ್ಥ ಸಿದ್ದಿಸುವುದು ಎಂದು ನಂಬಿಕೆ.ಆದರೆ ಯಾವ ಯಾವ ದಿನ ಯಾವ ದೇವಿ ಪೂಜೆ ಮಾಡಬೇಕು??

ನವ ಎಂದರೆ ಒಂಬತ್ತು ಮತ್ತು ಹೊಸತು ಎಂದರ್ಥ . ಈ ಒಂಬತ್ತರ ಸಂಖ್ಯೆಯಲ್ಲಿ ಒಂದು ವಿಶೇಷತೆ ಇದೆ, ಅದೇನೆಂದರೆ 9 ಗುಣಾಕಾರದಲ್ಲಿ ಗುಣಾಕಾರವನ್ನು ಮಾಡಿದರೆ,9 ಎನ್ನುವ ಸಂಖ್ಯೆಯನ್ನು ಪರಸ್ಪರ ಕೂಡಿಸುತ್ತ ಬಂದರೆ ಕೊನೆಯಲ್ಲಿ 9 ಬರುತ್ತದೆ. ಈ ಸಂಖ್ಯೆಯಲ್ಲಿ ಪರಿಪೂರ್ಣತೆ ಇದೆ ಎಂದು ಶಾಸ್ತ್ರಕಾರರು ಹೇಳುತ್ತಾರೆ. ಅಂದರೆ ದೇವಿಯು ಎಷ್ಟೇ ಅವತಾರ ತಾಳಿದರು ಕೊನೆಯಲ್ಲಿ ಆದಿಶಕ್ತಿಯಾಗಿ ಉಳಿಯುತ್ತಾಳೆ ಎಂದು ಅದರರ್ಥ. ಇಂತಹ ದೇವಿಯನ್ನು ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಆರಾಧಿಸಿ ಪೂಜಿಸುತ್ತಾರೆ.

 

 

 

ಮೊದಲ ದಿನ ಅಂದರೆ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ.ಮೊದಲನೆ ದಿನ ಯೋಗ ನಿದ್ರೆಯಲ್ಲಿರುವಂತಃ ದುರ್ಗೆಯನ್ನು ಆರಾಧಿಸಬೇಕು.ಎರಡನೇ ದಿನ ಆಂದರೆ ಬಿದಿಗೆ ದಿನ ದೇವಜಾತ ದುರ್ಗಾಪೂಜೆ ಮಾಡಬೇಕು.
ಮೂರನೇ ದಿನ ತದಿಗೆ – ಮಹಿಷಾಸುರ ಮರ್ಧಿನಿ ದುರ್ಗಾಪೂಜಾ.ಮೂರನೆ ದಿನ ಮಹಿಷ ಮರ್ಧಿನಿಯಾದಂತ ಚಾಮುಂಡೇಶ್ವರಿಯ ಪೂಜೆ.ನಾಲ್ಕನೇ ದಿನ ಚತುರ್ದಶಿ – ಶೈಲ ಜಾತಾ ದುರ್ಗಾಪೂಜೆ ನಡೆಯುತ್ತದೆ.ಐದನೇ ದಿನ ಪಂಚಮಿ – ದೂಮೃಹಾ ದುರ್ಗಾಪೂಜೆ ಮಾಡಬೇಕು.ಆರನೇ ದಿನ ಶಷ್ಠಿ – ಚಂಡ-ಮುಂಡ ಹಾ ದುರ್ಗಾಪೂಜೆಯನ್ನು ನೆರವೇರಿಸಬೇಕು.ಏಳನೇ ದಿನ ಸಪ್ತಮಿ – ರಕ್ತ ಬೀಜ ಹಾ ದುರ್ಗಾಪೂಜೆಯನ್ನು ಮಾಡಬೇಕು,ಎಂಟನೇ ದಿನ ಅಷ್ಟಮಿ – ನಿಶುಂಭ ಹಾ ದುರ್ಗಾಪೂಜಾ. ಅಂದೇ ನಾವು ಆಯುಧಗಳನ್ನು ಪೂಜೆ ಮಾಡುವುದು ಪ್ರತೀತಿ(ದುರ್ಗಾಷ್ಠಮಿ)ಒಂಭತ್ತನೇ ದಿನ ಮಹಾನವಮಿ -ಶುಂಭ ಹಾ ದುರ್ಗಾಪೂಜಾ. ಇದು ವಿಜಯದಶಮಿಯ ದಿನ ಶತ್ರುಗಳ ವಿರುದ್ಧ ವಿಜಯ ಸಾಧಿಸಿದ ದುರ್ಗೆಯ ಪೂಜೆ..ಅಂದೇ ನಮ್ಮ ರಾಜ್ಯದ ಮೈಸೂರು ಹಾಗೂ ಇನ್ನು ಕೆಲವು ಭಾಗಗಳಲ್ಲಿ ಅಂಬಾರಿ ಮೆರವಣಿಗೆ ಸಾಗುವುದು ವಿಶೇಷ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top