fbpx
ದೇವರು

ಸೀತಾನ್ವೇಷಣೆಯ ಕಾರ್ಯದಲ್ಲಿ ಮಹತ್ವದ ಸುಳಿವು ನೀಡಿ ತನ್ನ ಶಾಪದಿಂದ ಮುಕ್ತಿ ಹೊಂದಿದ ಸಂಪಾತಿಯಯ ಕುತೂಹಲಕಾರಿ ಕಥೆ ಬಗ್ಗೆ ನಿಮಗೆ ಗೊತ್ತಾ

ಸೀತಾನ್ವೇಷಣೆಯ ಕಾರ್ಯದಲ್ಲಿ ತೊಡಗಿರುವಾಗ ಸಂಪಾತಿಯು ಸೀತೆಯು ಎಲ್ಲಿ ಇದ್ದಾಳೆ ಎಂದು ಮಹತ್ವದ ಸುಳಿವು ನೀಡಿತ್ತು. ಆಗ ಸಂಪಾತಿಯು ಕೂಡ ಶಾಪದಿಂದ ಮುಕ್ತಿಯಾಯಿತು.
ಸೀತಾನ್ವೇಷಣೆಯ ಕಾರ್ಯ ವಾನರರಿಂದ ಆರಂಭವಾದಾಗ 4 ಗುಂಪುಗಳಾಗಿ ವಿಭಜಿಸಿಕೊಂಡು ಒಂದೊಂದು ಗುಂಪು ಒಂದೊಂದು ದಿಕ್ಕಿನ ಕಡೆಗೆ ಸೀತೆಯನ್ನು ಹುಡುಕಲು ಹೊರಡುತ್ತದೆ. ಆಗ ದಕ್ಷಿಣ ದಿಕ್ಕಿಗೆ ಜಾಂಬುವಂತ, ಅಂಗದ, ತಾರಾ, ಹನುಮಂತ ಮುಂತಾದವರು ಹೊರಟಿದ್ದರು.ವಿಂಧ್ಯಪರ್ವತವನ್ನು ದಾಟಿ, ನರ್ಮದಾ, ಗೋದಾವರಿ, ಕೃಷ್ಣಾ ವರದಾ ನದಿಗಳನ್ನು ದಾಟಿ ಆಂಧ್ರ, ಚೋಳ , ಪುಂಡ್ರ, ಮುಂತಾದ ದೇಶಗಳನ್ನು ಸಹ ಹುಡುಕಿದರು.ತಿಳಿ ನೀರಿನ ಕಾವೇರಿ ನದಿಯ ತೀರದಲ್ಲಿ ಸುಂದರ ಬೆಟ್ಟ ಗುಡ್ಡಗಳಲ್ಲಿ ಅನ್ವೇಷಣೆ ನಡೆಸಿದರು. ಮರ ಗಿಡಗಳು ಬೋಳು ಬೋಳಾಗಿದ್ದವು. ಸರೋವರಗಳಲ್ಲಿ ನೀರು ಇರಲಿಲ್ಲ. ಆ ಪ್ರದೇಶದಲ್ಲಿ ಇವರಿಗೆ ವಿಚಿತ್ರ ಸ್ಥಿತಿಯ ಕಾರಣ ತಿಳಿಯಿತು.

ಹಿಂದೆ ಈ ಪ್ರದೇಶದಲ್ಲಿ ಒಬ್ಬ ಸನ್ಯಾಸಿ ಇದ್ದನು. ಅವನ ಮಗನು ಒಮ್ಮೆ ಕಾಣದಾದನು. ಮಗ ಸತ್ತನೆಂದು ತಿಳಿದ ಮುನಿ ಗಿಡಮರ ಒಣಗಲಿ, ನೀರಿಲ್ಲದಾಗಲಿ ಎಂದು ಶಾಪ ಕೊಟ್ಟನು. ಅಂದಿನಿಂದಲೂ ಆ ಪ್ರದೇಶವು ನಿರ್ಜನವಾಗಿಯೇ ಇತ್ತು.ವಾನರರು ಸೀತೆಯನ್ನು ಹುಡುಕುತ್ತಾ ಒಂದು ದೊಡ್ಡ ಪ್ರವೇಶಿಸಿದರು. ಅಲ್ಲಿ ಒಬ್ಬ ರಾಕ್ಷಸನಿದ್ದನು.ಅವನೇ ಸೀತೆಯನ್ನು ಕದ್ದಿರಬೇಕೆಂದು ತಿಳಿದು ಅವನನ್ನು ಕೊಂದರು. ಆದರೆ ಸೀತೆ ಇರಲಿಲ್ಲ. ವಾನರರಿಗೆ ನಿರಾಸೆಯಾಗಿತ್ತು. ಸೀತೆಯನ್ನು ಕಾಣಲಾರೆವು ಎಂದು ಅವರಿಗೆ ಅನಿಸಿತು. ಧೈರ್ಯ ಕಳೆದುಕೊಳ್ಳದೇ ವಿಂದ್ಯ ಪರ್ವತದಲ್ಲೆಲ್ಲಾ ಹುಡುಕಿದರು. ಹೀಗೆ ಒಂದು ಪರ್ವತದ ಗುಹೆಯಲ್ಲಿ ಪ್ರವೇಶಿಸಿದರು.ಆ ಗುಹೆಯ ಹೆಸರು ಋಕ್ಷ ಬಿಲ. ಮಯನು ತನ್ನ ಪತ್ನಿ ಹೇಮಾಳಿಗಾಗಿ ನಿರ್ಮಿಸಿದ ಗುಹೆ ಅದು . ಆ ಗುಹೆಯಲ್ಲಿ ಒಂದು ಸರೋವರ, ಹೂವು, ಹಣ್ಣುಗಳ ತೋಟ ಎಲ್ಲವೂ ಇತ್ತು. ಅಲ್ಲಿ ಒಬ್ಬಳು ತಾಪಸಿ ಇದ್ದಳು. ಅವಳ ಹೆಸರು ಸ್ವಯಂಪ್ರಭೆ. ಅವಳು ಹೇಮಾಳ ಗೆಳತಿ . ಹನುಮಂತನು ಅವಳಿಗೆ ತಾವು ಬಂದ ಕಾರ್ಯವನ್ನು ತಿಳಿಸಿದನು.

 

 

 

ಈ ಗುಹೆಯೊಳಗೆ ಬಂದವರು ಹೊರಗೆ ಹೋಗುವುದಿಲ್ಲ. ಆದರೆ ನೀವು ಸತ್ಕಾರ್ಯದಲ್ಲಿ ತೊಡಗಿದ್ದೀರಿ ಎಂದು ಹಣ್ಣು ನೀರುಗಳನ್ನು ಕೊಟ್ಟು ಸತ್ಕರಿಸಿ ಹೊರಗೆ ತಂದು ಬಿಟ್ಟಳು. ಯಶಸ್ಸು ಸಿಗಲಿ ಎಂದು ಹಾರೈಸಿದಳು. ಅವರೆಲ್ಲರೂ ಸುಸ್ತಾಗಿ ವಿಶ್ರಾಂತಿ ಪಡೆಯುತ್ತಿದ್ದಾಗ ಒಂದು ದೊಡ್ಡ ಹದ್ದು ಅಲ್ಲಿಗೆ ಬಂದಿತ್ತು. ಅದರ ಹೆಸರು ಸಂಪಾತಿ. ಜಟಾಯುವಿನ ಅಣ್ಣನೆಂದು ತಿಳಿಯದೇ ಕಪಿಗಳು ಭಯಭೀತರಾದರು. ಒಂದು ಹದ್ದು ರಾಮನಿಗೆ ಸಹಾಯ ಮಾಡಿದರೆ ಇನ್ನೊಂದು ರಾಮ ಕಾರ್ಯಕ್ಕೆ ವಿಜ್ಞ ಮಾಡುವುದು ಎಂದು ಮಾತಾಡಿದರು. ಜಟಾಯುವು ರಾವಣನೊಂದಿಗೆ ಹೋರಾಡಿ ಸತ್ತಿತ್ತು . ಆದರೆ ಅದು ನಮ್ಮನ್ನು ಸಾಯಿಸಲು ಬರುತ್ತಿದೆ ಎಂದು ಅವರು ಮಾತನಾಡುತ್ತಿರುವಾಗ ಅವರ ಮಾತುಗಳನ್ನು ಕೇಳಿ ಜಟಾಯು ಸತ್ತಿದ್ದನ್ನು ತಿಳಿದು ದುಃಖಿತವಾಯಿತು. ಇವರನ್ನೇ ವಿಚಾರಿಸುತ್ತೇನೆ ಎಂದು ಬಯಸಿ ಅವರನ್ನು ಕರೆದು , “ನೀವು ಯಾರು ? ಎಲ್ಲಿಂದ ಬಂದಿರಿ ?ನನ್ನ ತಮ್ಮ ಜಟಾಯುವಿಗೆ ಏನಾಯಿತು ? ಹೇಳಿರಿ” ಎಂದು ಕೇಳಿತು ಸಂಪಾತಿ.

ಅಂಗದನು ಅವರನ್ನೆಲ್ಲ ತಡೆದು ಸಂಪಾತಿಯೊಂದಿಗೆ ಮಾತನಾಡಿದನು. ಸಂಪಾತಿಯು ಲಂಕಾ ದೇಶದ ಬಗ್ಗೆ ವಿವರಣೆ ನೀಡಿತ್ತು. “ಲಂಕಾ ದ್ವೀಪದ ಸುತ್ತಲೂ ನೀರು ಇದೆ. ಸಮುದ್ರದ ಮಧ್ಯದಲ್ಲಿರುವ ದ್ವೀಪಕ್ಕಾಗಿ ಇನ್ನು ದಕ್ಷಿಣಕ್ಕೆ ಹೋಗಬೇಕು. ನೀವು ಲಂಕೆಗೆ ಹೋಗಿ ರಾವಣನನ್ನು ಕೊಂದು ಸೀತೆಯನ್ನು ತನ್ನಿರಿ. ಶುಭವಾಗಲಿ ಎಂದು ಹರಸಿತು” ಆಗ ಕಪಿಗಳಿಗೆ ಸಂಪಾತಿಯ ರೆಕ್ಕೆಗಳು ಸುಟ್ಟುಹೋದ ಸಂಗತಿಯನ್ನು ತಿಳಿಯಬೇಕು ಎನಿಸಿತ್ತು. ಸಂಪಾತಿಯನ್ನು ಅಂಗದನು ಹಿಂದಿನ ವಿಚಾರವನ್ನು ತಿಳಿಸಲು ಕೇಳಿದನು.
ಹಿಂದೆ ನಾನು ಮತ್ತು ಜಟಾಯು ಸೂರ್ಯನೊಂದಿಗೆ ಸ್ಪರ್ಧೆ ನಡೆಸಿ ಪೂರ್ವದಿಂದ ಪಶ್ಚಿಮಕ್ಕೆ ಹಾರಿದೆವು. ಸೂರ್ಯನ ಉಗ್ರ ಕಿರಣಗಳಿಂದ ಜಟಾಯುವಿಗೆ ತೊಂದರೆಯಾಗಿ ಅವನು ಬೀಳಲಾರಂಭಿಸಿದಾಗ, ನಾನು ನನ್ನ ರೆಕ್ಕೆಯಿಂದ ಅವನನ್ನು ಮುಚ್ಚಿದೆನು. ಸೂರ್ಯನು ನನ್ನ ರೆಕ್ಕೆಗಳನ್ನು ಸುಟ್ಟು ಬಿಟ್ಟನು.ಸೀತಾ ದೇವಿಯು ಇರುವ ಸ್ಥಳಗಳನ್ನು ತಿಳಿಸಿದರೆ ನನ್ನ ರೆಕ್ಕೆಗಳು ಮತ್ತೆ ಬರುತ್ತವೆ ಎಂದು ಒಬ್ಬ ಋಷಿಗಳು ತಿಳಿಸಿದ್ದರು. ಅವರು ಮಾತನಾಡುತ್ತಿರುವಾಗಲೇ ಸಂಪಾತಿಯ ರೆಕ್ಕೆಗಳು ಮತ್ತೆ ಬಂದವು.
ಅವರೆಲ್ಲರೂ ಮಾತನಾಡುತ್ತಿದ್ದಾಗ ಮುಂದೆ ಸಮುದ್ರವನ್ನು ದಾಟಿ ಲಂಕೆಗೆ ಹೋಗುವುದು ಮುಖ್ಯ ವಿಷಯವಾಯಿತು. ಸಮುದ್ರದಲ್ಲಿ ವಿಷ ಜಂತುಗಳು, ತಿಮಿಂಗಿಲಗಳು ಬಹಳವಿದ್ದವು. ಸಮುದ್ರವನ್ನು ದಾಟುವುದು ಹೇಗೆ ಎಂದು ಕಪಿ ವೀರರೆಲ್ಲರೂ ಕುಳಿತು ಆಲೋಚಿಸಿದರು. ನೂರು ಯೋಜನೆ ದೂರವಿರುವ ಸಮುದ್ರವನ್ನು ಯಾರು ತಾನೆ ಜಿಗಿದು ದಾಟುವರು ? ಸುಗ್ರೀವನಿಗೆ ಸಂತಸ ತರುವಂತೆ ಮಾಡುವರು ಯಾರು ? ಎಂಬ ಚಿಂತೆ ಕಪಿಗಳಿಗಾಯಿತು.

 

 

 

ಕಪಿಗಳು ತಮ್ಮ ಶಕ್ತಿಯ ಬಗ್ಗೆ ಮಾತಾಡಿದರು. ಗವಾಕ್ಷನು 20 ಯೋಜನ, 50 ಯೋಜನ ಜಿಗಿಯುವುದಾಗಿ ತಿಳಿಸಿದರು. ಮೈಂದನು 60 ದ್ವಿವಿದನು 70, ಸುಶೇಣ 80 ಯೋಜನ ಹಾರುವುದಾಗಿ ತಿಳಿಸಿದರು. ಜಾಂಬವಂತನು ಹನುಮಂತನ ಬಳಿಗೆ ಬಂದು ಸುಮ್ಮನೆ ಕಡಲನ್ನೇ ನೋಡುತ್ತಿದ್ದ ಹನುಮಂತನಿಗೆ ಅವನ ಶಕ್ತಿಯನ್ನು ನೆನಪಿಸಿದನು. ಜಾಂಬವಂತನು ಮೇಧಾವಿ ಜಾಣ ,ಹಿರಿಯ ಮತ್ತು ಪರಾಕ್ರಮಿಯೇ ಆಗಿದ್ದನು. ಕಪಿ ವೀರರಿಗೆ ಹನುಮನು ನೂರು ಯೋಜನ ಸಮುದ್ರವನ್ನು ಜಿಗಿಯುವುದಾಗಿ ತಿಳಿಸಿದನು. ಬಾಲ್ಯದಲ್ಲಿ ಸೂರ್ಯನನ್ನೇ ಹಿಡಿಯಲು ಹೊರಟಿದ್ದನ್ನು ನೆನಪಿಸಿದನು. ರಾಮನ ಪತ್ನಿಯಾದ ಸೀತೆಯನ್ನು ಹುಡುಕಿ ಬಾ ಎಂದು ಹನುಮಂತ ನೆನ್ನೆ ಹರಸಿದನು. ಎಲ್ಲಾ ಕಪಿಗಳು ಜಯ ಘೋಷಿಸಿದರು. ಅವನು ತನ್ನ ದೇಹವನ್ನು ಬೆಳೆಸಿದನು. ನಾನು ಸೀತೆಯನ್ನು ಹುಡುಕಿ ಬರುತ್ತೇನೆಂದು ಹೇಳಿ ಸಮುದ್ರವನ್ನು ದಾಟುವುದಕ್ಕಾಗಿ ಜಿಗಿದನು. ಆಕಾಶದಲ್ಲಿ ತೇಲಿಕೊಂಡು ಹನುಮಂತನು ತೇಲುತ್ತಾ ಹೋಗ ತೊಡಗಿದನು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top