fbpx
ಮನೋರಂಜನೆ

ನಟಿ ಖುಷ್ಬೂಗೆ ‘ಅನ್ನಕ್ಕೂ ಗತಿಯಿಲ್ಲದೆ ಭಿಕ್ಷೆ ಬೇಡು’ ಅಂತ ಶಾಪ ಹಾಕಿದ್ದ ಆ ವ್ಯಕ್ತಿ ಯಾರು ಗೊತ್ತಾ ,ಆಗ ಈ ನಟಿ ಮಾಡಿದಾದ್ರು ಏನ್ ಗೊತ್ತಾ

ಮನೆಯಿಂದ ಹೊರಗಡೆ ಹೋಗಿ ಭಿಕ್ಷೆ ಬೇಡುವೆಯಾ ಎಂದು ಹಿಯ್ಯಾಳಿಸಿ ಮಾತನಾಡಿದ ವ್ಯಕ್ತಿ ಮುಂದೆ ಬೆಳೆದುನಿಂತ ನಟಿ ಖುಷ್ಬೂ

ಕನ್ನಡ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದ ನಟಿ ಖುಷ್ಬೂ ರವರ ಜೀವನ ಯಾನ :
ಖುಷ್ಬೂ ಎಂದರೆ ನಮಗೆ ನೆನಪಿಗೆ ಬರುವುದು ದುಂಡಾದ ನಗುಮೊಗದ ಚೆಲುವೆ .ಖುಷ್ಬೂ ಹುಟ್ಟಿದು 29 ಸೆಪ್ಟೆಂಬರ್ 1970 ,ಮುಂಬೈನಲ್ಲಿ ,ಬೆಳೆದದ್ದು ಚೆನ್ನೈನಲ್ಲಿ , ಇವರ ನಿಜ ನಾಮ ನಖತ್ ಖಾನ್.ಇವರು ಮಧ್ಯವರ್ಗದ ಕುಟುಂಬದಲ್ಲಿ ಮೊದಲ ಮಗಳಾಗಿ ಹುಟ್ಟಿದರು .ಇವರ ತಂದೆ ತುಂಬಾ ಕೆಟ್ಟ ಮನುಷ್ಯ ದಿನ ಕುಡಿದು ಬಂದು ಇವರ  ತಾಯಿಗೆ ಕೆಟ್ಟ ಕೆಟ್ಟ ಮಾತುಗಳಿಂದ ನಿಂದಿಸುತ್ತಿದ್ದನಂತೆ  ಇದರಿಂದ ಬೇಸತ್ತಾ ಖುಷ್ಬೂ ಅವರ ತಂದೆಯ ಹಿಂಸೆಯಿಂದ ಹೊರಬರಲು ತನ್ನ ತಾಯಿ ಮತ್ತು ತಂಗಿಯನ್ನು ಕರೆದುಕೊಂಡು ಮನೆ ಬಿಟ್ಟು ಹೋಗುವುದಕ್ಕೆ ನಿರ್ಧಾರ ಮಾಡುತ್ತಾರೆ ,ಇದನ್ನು ಕಂಡ ಅವರ ತಂದೆ ಮನೆಯಿಂದ ಹೊರಗಡೆ ಹೋಗಿ ಭಿಕ್ಷೆ ಬೇಡುವೆಯಾ ಎಂದು ಇಯಾಳಿಸಿ ಮಾತನಾಡಿದರಂತೆ .ಈ ಮಾತನ್ನು ಸವಾಲಾಗಿ ಸ್ವೀಕರಿಸಿದ ಖುಷ್ಬೂ ಬೇಕಾದ್ರೆ ವಿಷ ಕುಡಿದು ಸಾಯುತ್ತೇವೆ ಆದರೆ ಯಾವತ್ತು  ಭಿಕ್ಷೆ ಬೇಡುವುದಿಲ್ಲ  ಎಂದು ಹೇಳಿ ತನ್ನ ತಾಯಿ ಮತ್ತು ತಂಗಿಯ ಜೊತೆ ಮನೆಯಿಂದ ಹೊರಬಂದು ದೊಡ್ಡ ನಟಿಯಾಗಿ ನಿಂತ ಛಲಗಾತಿ .

 

 

 

ನಟಿ ಖುಷ್ಬೂ ಸಿನಿಮಾ ಜೀವನ :
ಇವರ ಸಿನಿಮಾ ಬದುಕು ಶುರುವಾಗಿದು ಬಾಲನಟಿಯಾಗಿ ನಂತರ ನಾಯಕ ನಟಿಯಾಗಿ ಇವರು ಕನ್ನಡ ಸೇರಿದಂತೆ ತೆಲುಗು ,ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವರು .ಇವರು ಮಾಡಿರುವ ಚಿತ್ರಗಳ ಸಂಖ್ಯೆ 200  ಕ್ಕೂ ಹೆಚ್ಚು .ಇವರು ನಟಿಸಿರುವ ಕನ್ನಡ ಚಿತ್ರಗಳು ರಣಧೀರ ,ಅಂಜದ ಗಂಡು ,ಯುಗ ಪುರುಷ ,ಪ್ರೇಮಾಗ್ನಿ,ಹೃದಯ ಗೀತೆ ,ಜೀವನದಿ ,ಶಾಂತಿ ಕ್ರಾಂತಿ,ಚಾಮುಂಡಿ ಇನ್ನು ಹಲವು .ಇವರ ನಟನೆಗೆ ಸೋತ ಪ್ರೇಕ್ಷಕ ವರ್ಗ ಇವರನ್ನು ಒಂದು ದೇವತೆಯಂತೆ ಪೂಜಿಸತೊಡಗಿದರು .ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಖುಷ್ಬೂರವರ ಅಭಿಮಾನಿಗಳು ಖುಷ್ಬೂರವರ ದೇವಸ್ಥಾನ ಕಟ್ಟಿಸಿದ್ದರು .ಇವರಿಗೆ  ಇದ್ದ ಪ್ರೇಕ್ಷಕ ಸಂಖ್ಯೆಯ ಹಾಗೆಯೇ ಇವರ ಮೇಲೆ ಇದ್ದ ವಿವಾದಗಳು ಹೆಚ್ಚು.

ಖುಷ್ಬೂರವರು ತೆಲುಗು-ತಮಿಳಿನ ನಾಯಕ ನಟನಾದ ಪ್ರಭುರವರು ಒಂದು ಕಾಲದಲ್ಲಿ ಪ್ರೀತಿಸುತ್ತಿದ್ದರು ಮತ್ತು ಮದುವೆ ಆಗಬೇಕು ಎಂದು ಕೂಡ ಅಂದುಕೊಂಡಿದ್ದರೆ ಆದರೆ ಖುಷ್ಬೂರವರು ಬೇರೆ ಜಾತಿಯವರಾದರಿಂದ  ಪ್ರಭುರವರ ಮನೆಯಲ್ಲಿ ಇವರ ವಿವಾಹಕ್ಕೆ ಸಮತಿ ದೊರೆಯುವುದಿಲ್ಲ .ಈ ಸಮಯಲ್ಲಿ ಪ್ರಭುರವರಿಗೆ ಬೇರೆ ಹುಡುಗಿಯ ಜೊತೆ ಮದುವೆ ಆಗಿಬಿಡತ್ತದೆ ನಂತರ  1997 ರಲ್ಲಿ ಇವರಿಗೆ    ಸುಂದರ್  ಸಿ ಎಂಬುವವರ ಜೊತೆ ಮದುವೆಯಾಗುತ್ತದೆ .ಮದುವೆಯ ನಂತರ ಕೆಲ ಕಾಲ ಚಿತ್ರರಂಗದಿಂದ  ದೂರ ಉಳಿಯುತ್ತಾರೆ ಖುಷ್ಬೂ ,ನಂತರ ಇವರು ಅನೇಕ ವಿವಾದಗಳಲ್ಲಿ ಸಿಲುಕುತ್ತಾರೆ .

 

 

 

2005 ರಲ್ಲಿ ಇವರು ಏಡ್ಸ್ ಜಾಗ್ರತಿ ಕಾರ್ಯಕ್ರಮದಲ್ಲಿ ಕೊಟ್ಟ ಹೇಳಿಕೆ ವಿವಾದದ ಕಡೆ ಗುರಿಮಾಡುತ್ತದೆ ಅದು ಏನು ಎಂದರೆ ಹುಡುಗಿಯರು ಮದುವೆಗೆ ಮುನ್ನ ಲೈಂಗಿಕ ಕಾರ್ಯದಲ್ಲಿ ತೊಡಗುವುದರಲ್ಲಿ ಯಾವು ತಪ್ಪು ಇಲ್ಲ ಆದರೆ  ಏಡ್ಸ್ ಮತ್ತು ಇತರ ಸೋಂಕು ತಾಗದಂತೆ  ಬೇಕಾದ ಎಚ್ಚರಿಕ್ಕೆ ಕ್ರಮಗಳನ್ನೂ ಕೈ ಗೊಳ್ಳಬೇಕು ಎಂದು ಹೇಳಿದ್ದರು  ಇದು ಒಂದು ವಿವಾದವನೇ ಸೃಷ್ಟಿ ಮಾಡಿತ್ತು ಮತ್ತು ಕಾನೂನಿನ ರೀತಿ ಈ ವಿಷಯ ತುಂಬಾ ವರ್ಷಗಳ ಕಾಲ ಚರ್ಚೆಯಲ್ಲಿ ಇತ್ತು .
ಹಾಗೇ 2006 ರಲ್ಲಿ ಒಂದು ಮ್ಯಾಗಝಿನ್ನ ಕವರ್ ಫೋಟೋದಲ್ಲಿ ಬಿಡುಗಡೆಯಾದ   ಖುಷ್ಬೂ ರವರ ಬೆತ್ತಲೆ ಚಿತ್ರ ಇನ್ನೊಂದು ದೊಡ್ಡ ವಿವಾದವನೇ ಹುಟ್ಟುಹಾಕಿತ್ತು ನಂತರ ಖುಷ್ಬೂರವರು ಆ ಮ್ಯಾಗಝಿನ್ನ ಸಂಬಂಧ ಪಟ್ಟವರ ಮೇಲೆ ದೂರು ನೀಡಿದರು ಇದರಿಂದ ಅವರಿಗೆ ಕಾನೂನಿನ ರೀತಿಯಲ್ಲಿ ಶಿಕ್ಷೆ ನೀಡಲಾಗಿತ್ತು .

ಈ ಎಲ್ಲ ವಿವಾದಗಳಿಂದ ಮುಕ್ತಿ ಹೊಂದಿದ ಖುಷ್ಬೂ,14 ಮೇ 2010 ತಮಿಳುನಾಡಿನ ಡಿ ಎಮ್ ಕೆ  ಪಕ್ಷ ಸೇರುವುದರ ಮೂಲಕ ರಾಜಕೀಯ ಪ್ರವೇಶ ಮಾಡುತ್ತಾರೆ 16 ಜೂನ್  2014   ರಂದು ಆ ಪಕ್ಷದಿಂದ ಹೊರಬರುತ್ತಾರೆ ಮತ್ತೆ 26 ನವೆಂಬರ್,2014  ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ  ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ .ಈಗ ಚೆನ್ನೈ ನಲ್ಲಿ ಅವಂತಿಕಾ, ಆನಂದಿತಾ  ಎಂಬ ತನ್ನ ಮಕ್ಕಳು ಮತ್ತು ಅವರ ಪತಿಯ ಜೊತೆ ಸಂತೋಷದಿಂದ ಜೀವನ ಮಾಡುತ್ತಾ ,ಕೆಲವು   ಧಾರಾವಾಹಿಗಳಲ್ಲಿ ನಟಿಸುತ್ತಾ , ರಾಜಕೀಯದಲ್ಲಿ ಅವರನ್ನು ತೊಡಗಿಸಿಕೊಂಡು ಖುಷಿ ಖುಷಿಯ ಜೀವನ ನಡೆಸುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top