fbpx
ದೇವರು

ಇಲ್ಲಿನ ಮಹಿಮಯುತ ದೇವಿಗೆ ಹಾಲು ಮತ್ತು ನೀರು ಅರ್ಪಿಸಿದರೆ ಸಾಕಂತೆ ಯಾವುದೇ ಚರ್ಮರೋಗವಿದ್ದರೂ ಪಟ್ ಅಂತ ಮಾಯವಾಗುತ್ತಂತೆ

ಇಲ್ಲಿನ ಶಿಲಾಮಾತಾ ದೇವಿಯನ್ನು ಇಂದೂ, ಮುಸ್ಲಿಮ್, ಸಿಕ್ಕರೂ ಕೂಡ ಆರಾಧಿಸುತ್ತಾರಂತೆ. ಈ ಶಿಲಾಮಾತ ದೇವಿಗೆ ಹಾಲು ಮತ್ತು ನೀರು ಅರ್ಪಿಸಿದರೆ ಸಾಕು ಎಂತಹ ಚರ್ಮರೋಗವಿದ್ದರೂ ಸಹ ಮಾಯವಾಗುತ್ತದೆ.
ಶ್ರೀಮಂತ ಹಾಗೂ ಭವ್ಯ ಪರಂಪರೆಯನ್ನು ಹೊಂದಿರುವ ರಾಜಸ್ಥಾನವು ತನ್ನದೇ ಆದ ವೈಶಿಷ್ಟ್ಯತೆಯಿಂದ ವಿಶ್ವವಿಖ್ಯಾತವಾಗಿದೆ. ಶತಶತಮಾನಗಳಿಂದಲೂ ರಾಜಸ್ಥಾನದ ಕೋಟೆಗಳು ಮರುಭೂಮಿ ರಾಜ್ಯದಲ್ಲಿನ ಅದ್ಭುತವಾದಂತಹ ಪ್ರವಾಸಿ ತಾಣಗಳಾಗಿವೆ. ಬೃಹತ್ ಕೋಟೆಗಳು. ದುರಂತ, ತ್ಯಾಗ ,ಕಲೆ ಮತ್ತು ವಾಸ್ತು ಶಿಲ್ಪಗಳನ್ನು ಕೋಟೆಗಳಿಂದ ಸಾರಿ ಸಾರಿ ಹೇಳುತ್ತವೆ.

ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿರುವ ಈ ಕೋಟೆಗಳು ರಾಜಸ್ಥಾನದಲ್ಲಿರುವ ಭವ್ಯವಾದ ಪರಂಪರೆಯನ್ನು ಸಂಸ್ಕೃತಿಯನ್ನು ನಮ್ಮ ಭಾರತ ದೇಶದ ಹಿರಿಮೆಯನ್ನು ಜನರಿಗೆ ಸಾರುತ್ತದೆ. ರಾಜಸ್ಥಾನ ಎಂದರೆ ಬರೀ ಜೇಸಮಲೀರ್, ಬಿಕಾನೀರ್ ,ಜೈಪುರ್, ಅಜ್ಮೀರ್, ಮುಂತಾದವುಗಳನ್ನು ಸುತ್ತಾಡಲು ಮಾತ್ರ ಅಲ್ಲ , ಅಲ್ಲಿನ ವಸ್ತು ಸಂಗ್ರಹಾಲಯಗಳಲ್ಲಿ ಇರಿಸಲಾಗಿರುವ ಹೆಚ್ಚಿನ ಪ್ರಾಚೀನ ಕಲಾಕೃತಿಗಳ ಮೇಲೆ ಕಣ್ಣು ಹಾಯಿಸಬೇಕಾಗುತ್ತದೆ.ರಾಜಸ್ಥಾನದ ಇತಿಹಾಸವನ್ನು ನೋಡಬೇಕು ಎಂದರೆ ಇಲ್ಲಿನ ಹನುಮಾನ್ ಗಡ್ ಗೆ ಬೇಟಿ ನೀಡಬೇಕು. ಹನುಮಾನ್ ಗಡ್ ಒಂದು ವಿಶೇಷ ಸ್ಥಳವಾಗಿದ್ದು, ಇಲ್ಲಿ ಎಲ್ಲ ಧರ್ಮದವರಿಗೂ ಬೇಟಿ ನೀಡುವ ಅವಕಾಶವಿದೆ. ನೀವು ಮುಂದೆ ಎಂದಾದರೂ ರಾಜಸ್ಥಾನಕ್ಕೆ ಭೇಟಿ ನೀಡುವುದಾದರೆ, ಈ ಕಡೆ ಒಂದು ಬಾರಿ ಬಂದು ಹೋಗಿ .

 

 

 

ಹನುಮಾನ ಗಡದಲ್ಲಿ ಗಗ್ಗಾರ ನದಿ ತೀರದಲ್ಲಿ ಬಿಕಾನೀರ್ ನ ರಾಜ ರಾಮ್ ಸಿಂಗ್ ದೇವಾಲಯವನ್ನು ನಿರ್ಮಿಸಿದ್ದನಂತೆ . ದೇಶದಲ್ಲಿ ಅತ್ಯಂತ ಹಳೆಯ ಕಾಳಿ ಮಂದಿರಗಳಲ್ಲಿ ಇದು ಕೂಡ ಒಂದಾಗಿರುವ ಈ ದೇವಾಲಯ ರಾಜಸ್ಥಾನ ,ಹರಿಯಾಣ ,ಪಂಜಾಬ್ ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ.ನವರಾತ್ರಿಯ ಸಂದರ್ಭದಲ್ಲಿ ಈ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಕ್ತರು ಕಾಳಿಮಾತೆಯನ್ನು ದರ್ಶನ ಮಾಡುತ್ತಾರೆ. ಇದು ಪಿಲಿ ಬಾಂಬ ತಾಶೀಲನಲ್ಲಿ ಸೂರತ್ ಗಡ್ ಮತ್ತು ಹನುಮಾನ್ ಗಡ್ ನಡುವೆ ನೆಲೆಗೊಂಡಿರುವ ಒಂದು ಐತಿಹಾಸಿಕ ತಾಣವಾಗಿದ್ದು, ರಾಜಸ್ಥಾನದಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳದಲ್ಲಿ 1961 ರಿಂದ 1969 ನಡುವೆ ನೆಲಹಾಸು, ಮರದ ಹೊಕ್ಕು, ಬೆಂಕಿಯ ಬಲಿ ಪೀಠಗಳು, ಮತ್ತು ಒಂಟೆಗಳ ಮೂಳೆಗಳು ನಾಣ್ಯಗಳು, ಆಭರಣಗಳು ಮತ್ತು ಇನ್ನಿತರ ವಸ್ತುಗಳನ್ನು ಪತ್ತೆ ಮಾಡಲಾಗಿತ್ತಂತೆ.

ಈ ಪುರಾತನ ಖಜಾನೆಗಳನ್ನು ಕಾಲಿಭಂಗನ್ ಮ್ಯೂಸಿಯಂ ಮತ್ತು ನವದೆಹಲಿಯ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಲಾಗಿದೆ. ಹನುಮಾನ್ ಗಡ್ ನಲ್ಲಿರುವ ಶಿಲಾಮಾತ ದೇವಸ್ಥಾನವು ಎಲ್ಲ ಧರ್ಮಗಳ, ಜಾತಿಗಳ ,ಮತಗಳ ಮತ್ತು ಪಂಗಡಗಳ ಭಕ್ತರನ್ನು ತನ್ನೆಡೆಗೆ ವಿಶೇಷವಾಗಿ ಸ್ವಾಗತಿಸುತ್ತದೆ.ತನ್ನೆಡೆಗೆ ವಿಶೇಷವಾಗಿ ಆಕರ್ಷಿಸುತ್ತದೆ. ಚರ್ಮಕ್ಕೆ ಸಂಬಂಧಪಟ್ಟ ರೋಗ ಇರುವವರು ಈ ದೇವಸ್ಥಾನಕ್ಕೆ ಹೆಚ್ಚಾಗಿ ಭೇಟಿ ನೀಡಿ ದೇವರಿಗೆ ಹಾಲು ಹಾಗು ನೀರನ್ನು ಅರ್ಪಿಸಿ ಪ್ರಾರ್ಥಿಸಿಕೊಳ್ಳುತ್ತಾರೆ. ಇಂದೂಗಳು ಹಾಗೂ ಸಿಕ್ಕರೂ ಈ ದೇವತೆಯನ್ನು ಶಿಲಾ ಮಾತಾ ಎಂದು ಕರೆಯುತ್ತಾರೆ . ಮುಸ್ಲಿಮರು ಶಿಲಾ ಪೀರ್ ಎಂದು ಕರೆಯುತ್ತಾರೆ. ಪ್ರತಿ ಗುರುವಾರ ಈ ದೇವಸ್ಥಾನದಲ್ಲಿ ವಿಶೇಷವಾದಂತಹ ಪೂಜೆಗಳು ಜರುಗುತ್ತವೆ.ಬಟನಾರ್ ಕೋಟೆಗೆ ಭೇಟಿ ನೀಡದೆ, ಹನುಮಾನ್ ಗಡ್ ಪ್ರವಾಸ ಪೂರ್ಣಗೊಳ್ಳುವುದಿಲ್ಲ. ಹನುಮಾನ್ ಗಡ್ ಮಧ್ಯದಲ್ಲಿರುವ ಈ ಕೋಟೆಯು ಒಂದು 1700 ವರ್ಷ ಹಳೆಯದಾಗಿದೆ. ಇದನ್ನು ಬಿಕಾನೀರ್ ನ ರಾಜ ಮಹಾರಾಜ ಸೂರತ್ ಸಿಂಗ್ ರಾಥೋಡ್ ನಿರ್ಮಿಸಿದ್ದನಂತೆ. ಸಿಕ್ಕರ ಧಾರ್ಮಿಕ ಕ್ಷೇತ್ರ ಇದಾಗಿದೆ. ಇದನ್ನು 18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಪ್ರತಿ ಅಮಾವಾಸ್ಯೆಯಂದು ಗುರುದ್ವಾರವು ತನ್ನ ಭಕ್ತರಿಗೆ ಹಾಗೂ ಪ್ರವಾಸಿಗರಿಗಾಗಿ ಜೋಡು ಮೇಳವನ್ನು ಆಯೋಜಿಸುತ್ತದೆ. ರಾಜಸ್ಥಾನದಲ್ಲಿ ಭೇಟಿ ನೀಡಲು ಅತ್ಯುತ್ತಮವಾದ ಕೋಟೆಗಳಲ್ಲಿ ಇದು ಸಹ ಒಂದಾಗಿದೆ. ಇದೊಂದು ಅತ್ಯದ್ಭುತವಾದಂತಹ ಕೋಟೆ ಇಲ್ಲಿ ಹಲವಾರು ಚಿತ್ರಕಲೆಗಳನ್ನು ಒಳಗೊಂಡಂತಹ ವಸ್ತು ಸಂಗ್ರಹಾಲಯ ಕೂಡ ಇದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top