fbpx
ಮನೋರಂಜನೆ

ಸ್ಯಾಂಡಲ್​ಪುಡ್ ಸಿಂಗರ್​ ಆಗಿ ಬದಲಾಗ ಖಡಕ್ ಅಧಿಕಾರಿ ಡಿಐಜಿ ರೂಪಾ

ದಕ್ಷ ಹಾಗು ಖಡಕ್ ಅಧಿಕಾರಿ ಎಂದೇ ಹೆಸರುವಾಸಿ ಆಗಿರುವ ಐಪಿಎಸ್ ಅಧಿಕಾರಿ ಡಿಐಜಿ ಡಿ ರೂಪ ಅವರ ಹೆಸರು ಎಲ್ಲರಿಗು ಚಿರಪರಿಚಿತ. ಈ ಹಿಂದೆ ರೂಪ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಸಾಕ್ಷಿ ಸಮೇತ ಬಯಲಿಗೆಳೆದು ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿದ್ದರು. ಈಗ ಅವರು ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಖಾಕಿ ಸಮವಸ್ತ್ರ ಧರಿಸಿ ಡ್ಯೂಟಿ ಮಾಡುತ್ತಿದ್ದ ಡಿ. ರೂಪಾ ಹಿಂದೆ ಫ್ಯಾಷನೇಬಲ್​ ಗೌನ್​ ಧರಿಸಿ ಫೋಟೋ ಶೂಟ್​ ಮಾಡಿಸಿ ರೂಪ ಓರ್ವ ಸಬಲೀಕೃತ ಮಹಿಳೆಯೂ ಫ್ಯಾಷನೇಬಲ್​ ಆಗಿ ಇರಬಲ್ಲಳು. ಸಾಮಾನ್ಯ ಮಹಿಳೆಯರೂ ಸ್ಟೈಲಿಷ್ ಐಕಾನ್​ ಆಗಬಲ್ಲರು ಎಂಬ ಸಂದೇಶ ನೀಡಬೇಕೆಂದು ನಾನು ಸೇರಿದಂತೆ ಇನ್ನೂ ಮೂರು ನಾಲ್ಕು ಮಂದಿಯಿಂದ ಹೀಗೆ ಫೋಟೋ ಶೂಟ್​ ಮಾಡಿಸಿದ್ದಾರೆ ಎಂದು ಹೇಳಿದರು ,ಒಂದ್ಸಲ ಮಾಡೆಲ್ ಆಗಿ ಬದಲಾಗಿದೆ ರೂಪ ಈಗ ಸಿಂಗರ್ ಆಗಿ ಬದಲಾಗಿದ್ದಾರೆ .
ಹೌದು ಕನ್ನಡದ ಜನಪ್ರಿಯ ಬರಹಗಾರ ಹಾಗೂ ನಿರ್ದೇಶಕರಾಗಿರುವ ಬರಗೂರ ರಾಮಚಂದ್ರಪ್ಪನವರ ‘ಬಯಲಾಟದ ಭೀಮಣ್ಣ’ ಚಿತ್ರ ತೆರೆಗೆ ಬರಲು ಸಿದ್ಧವಾಗ್ತಿದೆ. ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸುತ್ತಿರವ ಶಮಿತಾ ಮಲ್ನಾಡ್​ ಡಿಐಜಿ ರೂಪಾ ಅವರನ್ನು ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

 

 

 

ಈ ಹಿಂದೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಒಂದು ಹಾಡನ್ನು ಹಾಡಿದ್ದರು ಅದನ್ನು ಕೇಳಿದ ಬರಗೂರು ರಾಮಚಂದ್ರಪ್ಪ, ರೂಪಾ ಅವರಿಂದ ಚಿತ್ರಕ್ಕೆ ಹಾಡು ಹಾಡಿಸಿ ಎಂದು ಶಮಿತಾ ಅವರಿಗೆ ಹೇಳಿದ್ದರಂತೆ ಆ ಮಾತಿನಂತೆ ಶಮಿತಾ ರೂಪರವರನ್ನು ಕರೆದು ಹಾಡಿನ ರೆಕಾರ್ಡಿಂಗೆ ಮುಗಿಸಿದರಂತೆ ಇದರ ಜೊತೆಗೆ ಶಮಿತಾ ಮಲ್ನಾಡ್​ ಕುರಿಕಾಯುವ ಹನುಮಂತಪ್ಪ ಬಟ್ಟೂರು, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹಾಗೂ ಹಿರಿಯ ನಟ ಸುಂದರ್ ರಾಜ್ ಅವರಿಂದಲೂ ಈ ಚಿತ್ರದಲ್ಲಿ ಹಾಡು ಹಾಡಿಸಿದ್ದಾರೆ.
‘ಬಯಲಾಟದ ಭೀಮಣ್ಣ’ ಚಿತ್ರ ಬಯಲಾಟ ಆಡುವ ವ್ಯಕ್ತಿಯ ಕಥೆಯನ್ನು ಹೇಳುತ್ತಾ, ಇಂದಿನ ಕಲಾವಿದರ ಪರಿಸ್ಥಿತಿಯನ್ನು ಅನಾವರಣ ಮಾಡುತ್ತದೆಯಂತೆ .ಡಿಐಜಿ ರೂಪ ಹೆಣ್ಣು ಮಕ್ಕಳು ಮನಸು ಮಾಡಿದ್ರೆ ಏನ್ ಬೇಕಾದ್ರೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top