ಅರೋಗ್ಯ

ಪ್ಲಾಸ್ಟಿಕ್ ವಾಟರ್ ಬಾಟೆಲ್ ಖರೀದಿಸುತ್ತೀರಾ? ಹಾಗಾದ್ರೆ ಕೊಂಡುಕೊಳ್ಳೋ ಮುನ್ನ ಈ ಅಂಶಗಳನ್ನ ಪರೀಕ್ಷಿಸಿಕೊಳ್ಳಿ.

ಎಲ್ಲಿಗಾದರೂ ಪ್ರಯಾಣ ಮಾಡುವಾಗ, ಹೊರಗಡೆ ತಿಂಡಿಗಳನ್ನ ತಿನ್ನುವಾಗ ಸಾಮಾನ್ಯವಾಗಿ ಎಲ್ಲರೂ ನೀರಿನ ಬಾಟಲ್ಲುಗಳನ್ನ ಕೊಂಡುಕೊಳ್ಳುತ್ತಾರೆ, ಇನ್ನೂ ಕೆಲವರಿಗೆ ವಾಟರ್ ಬಾಟಲಿನಲ್ಲೇ ನೀರು ಕುಡಿಯೋ ಚಟವಿರುತ್ತದೆ.. ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರನ್ನು ಕೊಂಡುಕೊಂಡು ಕುಡಿಯುವುದು ಒಳ್ಳೆಯದೇ ಆದರೆ ನೀವು ಖರೀಧಿಸುವ ಪ್ಲಾಸ್ಟಿಕ್ ಬಾಟಲ್ಲುಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೌದು, ಪ್ಲಾಸ್ಟಿಕ್ ವಾಟರ್ ಬಾಟಲ್ ಖರೀದಿಸುವಾಗ ಕೆಲವೊಂದು ವಿಷಯಗಳನ್ನ ನೀವು ಗಮನಿಸಲೇಬೇಕು.

 

 

ನೀವು ಬಾಟಲ್ಅನ್ನು ಕೊಂಡುಕೊಂಡ ನಂತರ ಅದರ ತಳಭಾಗವನ್ನೊಮ್ಮೆ ಗಮನಹರಿಸಿ,, ಅಲ್ಲಿ PP,, HDPE,,HDP,,PET,,PVC,,LDPE ಹೀಗೆ ಮುಂತಾದ ಕೆಲವು ಇಂಗ್ಲಿಷ್ ಅಕ್ಷರಗಳನ್ನು ಬರೆಯಲಾಗಿರುತ್ತದೆ.. ಈ ಅಕ್ಷರಗಳು ಆ ವಾಟರ್ ಬಾಟಲನ್ನು ತಯಾರಿಸಲು ಉಪಯೋಗಿಸಲಾದ ಪ್ಲಾಸ್ಟಿಕ್ ಅಂಶಗಳನ್ನ ತಿಳಿಸುತ್ತದೆ..
ವಿವಿಧ ರೀತಿಯ ಪ್ಲಾಸ್ಟಿಕ್ ಗಳಿದ್ದರೂ ಆರೋಗ್ಯದ ದೃಷ್ಟಿಯಿಂದ ನೀವು ಖರೀದಿಸಿದ ಬಾಟಲ್ ಯಾವ ರೀತಿಯ ಪ್ಲಾಸ್ಟಿಕ್ ನಿಂದ ತಯಾರಿಸಲಾಗಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

PETE ಅಥವಾ PET-
ನೀರಿನ ಬಾಟಲ್ ತಳಭಾಗದಲ್ಲಿ PETE ಅಥವಾ PET ಎಂಬ ಅಕ್ಷರಗಳನ್ನು ಮುದ್ರಿಸಿದ್ದರೆ ಎಚ್ಚರವಹಿಸಬೇಕು. ಯಾಕೆಂದರೆ, ಈ ವಿಧದ ಪ್ಲಾಸ್ಟಿಕ್ ನಿಂದ ತಯಾರಿಸಲಾದ ಬಾಟಲ್ ಗಳಲ್ಲಿ ನೀರು ಇದ್ದರೇ, ಆ ನೀರಿನೊಳಗೆ ಅಪಾಯಕಾರಿಯಾದ ವಿಷ ಅಂಶಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಆ ನೀರನ್ನು ಕುಡಿಯುವುದು ಅಷ್ಟೊಂದು ಆರೋಗ್ಯದಾಯಕವಾಗಿರುವುದಿಲ್ಲ.

HDPE ಅಥವಾ HDP-
ನೀರಿನ ಬಾಟಲ್ ತಳಭಾಗದಲ್ಲಿ HDPE ಅಥವಾ HDP ಎಂಬ ಅಕ್ಷರಗಳನ್ನು ಮುದ್ರಿಸಿದ್ದರೆ ನಿಷ್ಚಿಂತೆಯಿಂದ ಅದರಲ್ಲಿನ ನೀರನ್ನು ಕುಡಿಯಬಹುದು,. ಯಾಕೆಂದರೆ ಆ
ವಿಧದ ಪ್ಲಾಸ್ಟಿಕ್ ನಿಂದ ತಯಾರಾದ ಬಾಟಲ್ಲುಗಳಲ್ಲಿ ನೀರು ತುಂಬಿದ್ದರೇ ನೀರಿನಲ್ಲಿ ಯಾವುದೇ ರೀತಿಯ ಅಪಾಯಕಾರಿ ಪದಾರ್ಥಗಳು ಬಿಡುಗಡೆಯಾಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದಲೂ ಆ ನೀರು ಸಂಪೂರ್ಣ ಸುರಕ್ಷಿತವಾಗಿರುತ್ತದೆ.

PVC ಅಥವಾ 3V-
ನೀರಿನ ಬಾಟಲ್ ತಳಭಾಗದಲ್ಲಿ PVC ಅಥವಾ 3V ಎಂಬ ಅಕ್ಷರಗಳನ್ನು ಮುದ್ರಿಸಿದ್ದರೆ ಎಚ್ಚರವಹಿಸಬೇಕು. ಯಾಕೆಂದರೆ, ಈ ವಿಧದ ಪ್ಲಾಸ್ಟಿಕ್ ನಿಂದ ತಯಾರಿಸಲಾದ ಬಾಟಲ್ ಗಳಲ್ಲಿ ನೀರು ಇದ್ದರೇ, ಆ ನೀರಿನೊಳಗೆ ಅಪಾಯಕಾರಿಯಾದ ವಿಷ ಅಂಶಗಳು ಉತ್ಪತ್ತಿಯಾಗುತ್ತವೆ.. ಇದು ಆರೋಗ್ಯಕ್ಕೆ ಮಾರಕ ಮತ್ತು ಈ ನೀರಿನಿಂದ ಹಾರ್ಮೋನುಗಳು ಏರುಪೇರಾಗುವ ಸಾಧ್ಯತೆಗಳಿರುತ್ತವೆ.

LDPE ಅಥವಾ PS
ನೀರಿನ ಬಾಟಲ್ ತಳಭಾಗದಲ್ಲಿ LDPE ಎಂಬ ಅಕ್ಷರಗಳನ್ನು ಮುದ್ರಿಸಿದ್ದರೆ ನಿಷ್ಚಿಂತೆಯಿಂದ ಅದರಲ್ಲಿನ ನೀರನ್ನು ಕುಡಿಯಬಹುದು,. ಯಾಕೆಂದರೆ ಆ
ವಿಧದ ಪ್ಲಾಸ್ಟಿಕ್ ನಿಂದ ತಯಾರಾದ ಬಾಟಲ್ಲುಗಳಲ್ಲಿ ನೀರು ತುಂಬಿದ್ದರೇ ನೀರಿನಲ್ಲಿ ಯಾವುದೇ ರೀತಿಯ ಅಪಾಯಕಾರಿ ಪದಾರ್ಥಗಳು ಬಿಡುಗಡೆಯಾಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದಲೂ ಆ ನೀರು ಸಂಪೂರ್ಣ ಸುರಕ್ಷಿತವಾಗಿರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top