fbpx
ಭವಿಷ್ಯ

12 ಅಕ್ಟೋಬರ್ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಶುಕ್ರವಾರ, ೧೨ ಅಕ್ಟೋಬರ್ ೨೦೧೮
ಸೂರ್ಯೋದಯ : ೦೬:೩೬
ಸೂರ್ಯಾಸ್ತ : ೧೮:೧೩
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಶ್ವಯುಜ

ಪಕ್ಷ : ಶುಕ್ಲ ಪಕ್ಷ
ತಿಥಿ : ಚೌತಿ – ೨೯:೩೪+ ವರೆಗೆ
ನಕ್ಷತ್ರ : ವಿಶಾಖ – ೧೦:೪೧ ವರೆಗೆ
ಯೋಗ : ಪ್ರೀತಿ – ೦೮:೨೧ ವರೆಗೆ
ಸೂರ್ಯ ರಾಶಿ : ಕನ್ಯಾ

ಅಭಿಜಿತ್ ಮುಹುರ್ತ:೧೨:೦೧ – ೧೨:೪೭
ಅಮೃತಕಾಲ: ೨೪:೪೮+ – ೨೬:೨೭+
ರಾಹು ಕಾಲ:೧೦:೫೭ – ೧೨:೨೪
ಗುಳಿಕ ಕಾಲ:೦೮:೦೩ – ೦೯:೩೦
ಯಮಗಂಡ:೧೫:೧೯ – ೧೬:೪೬

ದೃಢಮನಸ್ಸಿನ ವ್ಯಕ್ತಿಗಳಿಗೆ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದು ಇಲ್ಲ. ಅಂತೆಯೇ ಈದಿನ ಇತರೆಯವರಿಗೆ ಕಠಿಣ ಅನಿಸಿದ್ದನ್ನು ನೀವು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ಇದರಿಂದ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ

ಒಡಲಲ್ಲಿ ದುಃಖ ಮುಖದಲ್ಲಿ ಮಂದಹಾಸ ಹಾಗಾಗಿ ನಿಮ್ಮ ನೈಜತೆಯನ್ನು ಅರಿಯದ ಜನರು ಟೀಕೆ ಮಾಡುವರು. ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿರಿ. ಭಗವಂತನ ಕೃಪೆಯಿಂದ ಎಲ್ಲವೂ ಸುಗಮವಾಗಿ ಕಾರ್ಯ ನೆರವೇರುವುದು.

ಬೇರೆಯವರು ಮಾಡಿದ ಸಹಾಯಕ್ಕಾಗಿ ತಕ್ಷಣವೇ ಧನ್ಯವಾದ ಹೇಳುವ ನೀವು ಇಂದು ನಿಮ್ಮ ಕುಟುಂಬದ ಸದಸ್ಯರು ನಿಮಗಾಗಿ ಮಾಡಿದ ಕಾರ್ಯಕ್ಕೆ ಅಥವಾ ಸಹಾಯಕ್ಕೆ ಧನ್ಯವಾದ ಹೇಳಿ, ಇದು ಮಹತ್ರರ ಪರಿಣಾಮ ಬೀರಲಿದೆ.

ಇಚ್ಛೆ ಇದ್ದಲ್ಲಿ ಕಷ್ಠವಿರಲಾರದು. ಮಾಡುವ ಕೆಲಸದಲ್ಲಿ ಶ್ರದ್ಧೆಯನ್ನು ತೋರಿದಲ್ಲಿ ಕೆಲಸದಲ್ಲಿ ಪರಿಪೂರ್ಣತೆಯನ್ನು ಸಾಧಿಸುವಿರಿ. ಸೋಮಾರಿತನ ಬಿಟ್ಟು ಕಾರ್ಯ ಪ್ರವತ್ತರಾಗುವುದರಿಂದ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು.

 

ಹಣಕಾಸು ವಿಷಯದಲ್ಲಿ ಜಾಗ್ರತೆಯಿರಲಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ವಿನಾಕಾರಣ ಉದ್ವೇಗಗೊಳ್ಳುವುದರಿಂದ ಆರೋಗ್ಯದಲ್ಲಿ ತೊಂದರೆಯಾಗುವುದು. ತಾಳ್ಮೆಯಿಂದ ಈದಿನ ಪರಿಸ್ಥಿತಿಯನ್ನು ನಿಭಾಯಿಸುವಿರಿ.

 

ಸಕಲರಿಗೂ ಮಾರ್ಗದರ್ಶನ ನೀಡುವ ನಿಮ್ಮನ್ನು ಹತ್ತು ಹಲವು ಜನರು ಬಂದು ಶುಭ ಹಾರೈಸುವರು. ಎಲ್ಲರನ್ನು ನಗುಮುಖದಿಂದಲೇ ಮಾತನಾಡಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಪ್ರಮುಖ ವಿಚಾರಗಳನ್ನು ಮತ್ತೊಬ್ಬರ ಮುಂದೆ ಹೇಳಿಕೊಳ್ಳಬೇಡಿ. ಕೆಲಸಪೂರ್ಣವಾದ ಮೇಲೆಯೇ ಆ ವಿಚಾರ ತಿಳಿದರೆ ಒಳಿತು. ನಿಮ್ಮ ಕಾರ್ಯ ಯೋಜನೆಯನ್ನು ಮುಂದುವರಿಸಿರಿ. ಹಿತೈಷಿಗಳ ಬೆಂಬಲ ದೊರೆಯುವುದು.

 

ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ದೂರಾಲೋಚನೆಯಿಂದ ಹಮ್ಮಿಕೊಂಡ ಕೆಲಸಗಳಲ್ಲಿ ಪ್ರಗತಿ ಕಾಣುವುದು. ನಿಮ್ಮನ್ನು ವಿರೋಧಿಸುತ್ತಿದ್ದವರು ನಿಮಗೆ ಶರಣಾಗತರಾಗಿ ಬರುವರು.

 

ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗಿ ನಡೆಯುವುದರಿಂದ ಮನಸ್ಸಿಗೆ ನೆಮ್ಮದಿ. ನಿಮ್ಮ ಮಗನು ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ದುಡಿಯುವುದರಿಂದ ಮನೆಯ ಗುಟ್ಟು ರಟ್ಟಾಗುವುದಿಲ್ಲ.

ಆರೋಗ್ಯದ ಕಡೆ ಇಂದು ಮೊದಲ ಆದ್ಯತೆಯನ್ನು ನೀಡಬೇಕು. ನಿಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಆದಾಯ ಮೀರಿ ಖರ್ಚು ಮಾಡಬೇಡಿ. ಸ್ನೇಹಿತರ/ಹಿತೈಷಿಗಳ ಮಾತನ್ನು ಅನುಸರಿಸಿರಿ.

 

 

ದೂರದ ಪ್ರವಾಸದ ಬಗ್ಗೆ ಚಿಂತಿಸುವಿರಿ. ಬಂಧುಗಳು, ಸ್ನೇಹಿತರ ಸಹಕಾರ ದೊರೆಯುವುದು. ಆರ್ಥಿಕ ಮುಗ್ಗಟ್ಟು ಕಂಡುಬರಲಿದೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಮಹತ್ತರ ಕಾರ್ಯಗಳನ್ನು ಮಾಡುವಾಗ ಟೀಕೆಗಳು ಬರುವುದು ಸಹಜ. ಆದರೆ ಅದಕ್ಕಾಗಿ ತಲೆಕೆಡಿಸಿಕೊಳ್ಳುವುದು ತರವಲ್ಲ. ನಡೆಯುವ ವ್ಯಕ್ತಿ ಎಡವಿಬೀಳುವಂತೆ ಕೆಲವೊಮ್ಮೆ ತಪ್ಪುಗಳು ನುಸುಳುವ ಸಾಧ್ಯತೆ. ಚಿಂತೆ ಬೇಡ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top