ಮನೋರಂಜನೆ

ಇದ್ದಕ್ಕಿದ್ದಂತೆ ಸಿಎಂ HDKಯನ್ನು ಭೇಟಿ ಮಾಡಿದ ಶಿವರಾಜಕುಮಾರ್- ದಿಢೀರ್ ಭೇಟಿಗೆ ಕಾರಣವೇನು ಗೊತ್ತಾ?

ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ನೆನ್ನೆ ದಿಢೀರ್ ಭೇಟಿಮಾಡಿದ್ದಾರೆ. ಹೈ ಕೋರ್ಟ್​ ಆದೇಶದ ಮೇಲೆ ಬೆಂಗಳೂರಿನಲ್ಲಿ ಬಿಬಿಎಂಪಿ ಫ್ಲೆಕ್ಸ್​, ಪೋಸ್ಟರ್​ಗಳಿಗೆ ನಿಷೇಧ ಹೇರಿದೆ. ಫ್ಲೆಕ್ಸ್​​ ನಿಷೇಧದಿಂದ ಸಿನಿಮಾ ಪ್ರಚಾರಕ್ಕೆ ಭಾರಿ ತೊಂದರೆಯಾಗಿದೆ. ಈ ವಿಚಾರವಾಗಿ ಚರ್ಚಿಸಲು ಸಿಎಂ ಜೊತೆ ಶಿವಣ್ಣ ಮಾತನಾಡಿದ್ದಾರೆ.

 

 

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾದ ಶಿವರಾಜಕುಮಾರ್ ನೇತೃತ್ವದ ವಾಣಿಜ್ಯ ಮಂಡಳಿ ನಿಯೋಗವು, ನಗರದಲ್ಲಿ ಫ್ಲೆಕ್ಸ್ ಬಳಕೆ ನಿಷೇಧ ಬಳಿಕೆ ಮತ್ತು ಚಲನಚಿತ್ರ ಪ್ರಚಾರಕ್ಕೆ ಉಂಟಾಗಿರುವ ಸಮಸ್ಯೆ ಕುರಿತು ವಿವರಿಸಿತು. ಈ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಪರಿಸರ ಸ್ನೇಹಿ ಭಿತ್ತಿ ಪತ್ರಗಳ ಮೂಲಕ ಸಿನೆಮಾ ಪ್ರಚಾರಕ್ಕೆ ಅವಕಾಶ ಕೊಡಬೇಕು. ಚಿತ್ರಮಂದಿರದ ಮುಂದೆ ಹಾಗೂ ಕೆಲವು ನಿಗದಿತ ಸ್ಥಳಗಳಲ್ಲಿ ಚಲಚಿತ್ರಗಳ ಪೋಸ್ಟರ್ ಹಾಗೂ ಬ್ಯಾನರ್ ಅಳವಡಿಕೆಗೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡರು ಮನವಿ ಮಾಡಿಕೊಂಡರು.

ಸ್ವತಃ ನಿರ್ಮಾಪಕರಾಗಿರುವ ತಮಗೆ ನಿರ್ಮಾಪಕರ ಕಷ್ಟಗಳ ಬಗ್ಗೆ ಅರಿವಿದೆ. ಆದ್ದರಿಂದ ನ್ಯಾಯಾಲಯದ ಆದೇಶಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಚಲಚಿತ್ರಗಳ ಪ್ರಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top