fbpx
ದೇವರು

ರಾಮಲಕ್ಷ್ಮಣ ಹಾಗೂ ವಾನರರ ಸೀತಾನ್ವೇಷಣೆ ಕುರಿತ ಈ ಕಥೆ ನಿಮಗೆ ಗೊತ್ತಾ ,ಗೊತ್ತಿಲ್ಲ ಅಂದ್ರೆ ತಿಳ್ಕೊಳ್ಳಿ

ವಾನರರಿಂದ ಸೀತಾನ್ವೇಷಣೆಯ ಕಾರ್ಯ ವಾನರರಿಂದ ಮತ್ತು ಸುಗ್ರೀವನಿಂದ ಆರಂಭವಾಯಿತು.
ಆಗ ಮಳೆಗಾಲದ ಸಮಯ ಆರಂಭವಾಗಿದ್ದರಿಂದ ಸೀತೆಯನ್ನು ಹುಡುಕುವ ಕಾರ್ಯವು ಸ್ವಲ್ಪ ತಡವಾಗಿಯೇ ಪ್ರಾರಂಭವಾಯಿತು. ರಾಮ ಲಕ್ಷ್ಮಣರು ಅಡವಿಯಲ್ಲಿಯೇ ಉಳಿದರು. ಎಲ್ಲೆಡೆಯಲ್ಲಿಯೂ ಆಕಾಶದಲ್ಲಿ ಕಪ್ಪು ಮೋಡಗಳು ಮುತ್ತಿದ್ದವು. ಧಾರಾಕಾರ ಮಳೆ ಸುರಿಯಿತು. ಪ್ರಕೃತಿಯಲ್ಲಾದ ಬದಲಾವಣೆಗಳನ್ನು ರಾಮಲಕ್ಷ್ಮಣರು ಆನಂದಿಸಿದರು. ಸೀತೆಯ ವಿರಹದಿಂದ ರಾಮನು ನಿಟ್ಟುಸಿರು ಬಿಡುತ್ತಿದ್ದನು. ಸೂರ್ಯೋದಯ ಸೂರ್ಯಾಸ್ತಗಳು ರಾಮನಿಗೆ ಸಂತಸವನ್ನು ತರುತ್ತಿರಲಿಲ್ಲ.ಕಿಷ್ಕಿಂದೆಯಲ್ಲಿ ಕಪಿಗಳಿಗೆ ಬಾರಿ ಸಂಭ್ರಮವಾಗಿತ್ತು. ರಾಮನ ಪತ್ನಿ ಸೀತೆಯನ್ನು ಹುಡುಕುವ ಕಾರ್ಯವನ್ನು ಮರೆತೇ ಸುಗ್ರೀವನು ಆಡಳಿತದಲ್ಲಿ ಮಗ್ನನಾಗಿದ್ದನು. ಒಂದು ದಿನ ಹನುಮಂತನು ಸುಗ್ರೀವನಿಗೆ ಸಜ್ಜನರು ಉಪಕಾರವನ್ನು ಮರೆಯಬಾರದು ನೀನು ರಾಜ್ಯವನ್ನು ಪಡೆದು ನೆಮ್ಮದಿಯನ್ನು ಹೊಂದಿದೆ. ಆದರೆ ರಾಮನು ತನ್ನ ಹೆಂಡತಿಯಿಂದ ದೂರ ಇದ್ದುಕೊಂಡು ಕಷ್ಟದಲ್ಲಿದ್ದಾನೆ. ಬೇಗನೆ ಅನ್ವೇಷಣೆಯ ಕೆಲಸವನ್ನು ಆರಂಭಿಸಿ ಎಂದು ಹೇಳಿದನು.

 

 

 

ಮಳೆಗಾಲ ಕಳೆದ ನಂತರದಲ್ಲಿ ಒಂದು ದಿನ ರಾಮನು ಲಕ್ಷ್ಮಣನನ್ನು ಸುಗ್ರೀವನಲ್ಲಿಗೆ ಕಳಿಸಿ ಸೀತಾನ್ವೇಷಣೆಯ ಕಾರ್ಯವನ್ನು ಮಾಡುವೆಯೋ ಇಲ್ಲವೋ ಎಂದು ವಿಚಾರಿಸಿದನು. ಆಗ ಸುಗ್ರೀವನು ತಾನು ಮಾಡಿದ್ದು ತಪ್ಪಾಯ್ತು ಇಂದಿನಿಂದಲೇ ಸೀತಾನ್ವೇಷಣೆಯನ್ನು ಆರಂಭಿಸೋಣ ಎಂದು ಹೇಳಿ ತನ್ನ ಮಂತ್ರಿಗಳೊಂದಿಗೆ ರಾಮನು ಇರುವಲ್ಲಿಗೆ ಬಂದು ಕ್ಷಮೆ ಕೇಳಿದನು.ಸಮಸ್ತ ವಾನರ ಸೇನೆಯನ್ನು ಕರೆಸಿ ಸೀತಾನ್ವೇಷಣೆಯ ಕಾರ್ಯದ ಬಗ್ಗೆ ಚರ್ಚೆ ನಡೆಸಿದನು. ಮಹೇಂದ್ರ, ನೀಲ, ವಿಂದ್ಯಾ, ಹಿಮದಂತ, ಕೈಲಾಸ , ಮಂದರ ಮುಂತಾದ ಪರ್ವತಗಳಿಂದ ಲಕ್ಷಾಂತರ ಕಪಿವೀರರು ಸೇರಿದರು.

ವಿವಿಧ ಬಣ್ಣದ ಕಪಿಗಳು ಬಂದು ಸೇರಿದವು. ಕಪಿಗಳು, ಕರಡಿಗಳು, ಗೋಲಾಂಗೂಲಗಳು ಸೇರಿದವು. ಕೆಲವು ಕಪಿಗಳು ಯುದ್ಧ ವಿದ್ಯೆಯಲ್ಲಿ ನಿಪುಣವಾಗಿದ್ದವು. ಸುಗ್ರೀವನು ಕಪಿಸೇನೆಯನ್ನು ತೋರಿಸಿ ನೋಡಿದೆಯಾ ? ಶ್ರೀರಾಮ ಇವರು ಅಸಾಧ್ಯ ಸಾಗರವನ್ನು ಲಂಘಿಸಬಲ್ಲರು. ಯುದ್ಧ ಬಲ್ಲರು ಪರ್ವತವನ್ನು ಏರುವರು. ವಿವಿಧ ಮೂಲೆಮೂಲೆಗಳಿಗೆ ತೆರಳಿ ಸೀತೆಯನ್ನು ಹುಡುಕಬಲ್ಲವರಾಗಿದ್ದಾರೆ. ಎಂದು ವಾನರಸೇನೆಯನ್ನು ನಾಲ್ಕು ಭಾಗ ಮಾಡಿದಾಗ ಮೊದಲ ಭಾಗಕ್ಕೆ ವಿನತ, ಎರಡನೇ ತಂಡಕ್ಕೆ ಹನುಮಂತ, ಮೂರನೇ ತಂಡಕ್ಕೆ ಸುಷೇಣ ಮತ್ತು ನಾಲ್ಕನೇಯ ತಂಡಕ್ಕೆ ಶತಬಲಿ ನಾಯಕರಾದರು.ಸುಗ್ರೀವನು ವಾನರರಿಗೆ ಲಂಕಾಧಿಪತಿ ರಾವಣನ ಶ್ರೀರಾಮನ ಪತ್ನಿ ಸೀತೆಯನ್ನು ಅಪಹರಿಸಿದ್ದಾನೆ. ಈಗ ಸೀತೆಯನ್ನು ಹುಡುಕುವುದು ನಮ್ಮ ಕಾರ್ಯವಾಗಿದೆ. ಶ್ರೀರಾಮನ ನಮಗೆ ಮಾಡಿದ ಉಪಕಾರಕ್ಕಾಗಿ ನಾವು ಎಲ್ಲಾ ರೀತಿಯಿಂದಲೂ ಕರ್ತವ್ಯ ನಿರ್ವಹಿಸಿ ರಾಮನಿಗೆ ಸಹಾಯ ಸಲ್ಲಿಸೋಣ. ಸೀತೆಯನ್ನು ಹುಡುಕಿ ಬಂದವರಿಗೆ ನನಗೆ ಸಮಾನವಾದ ಸ್ಥಾನಮಾನ ಸಿಗುವುದೆಂದು ಸುಗ್ರೀವನು ಘೋಷಿಸಿದನು.
ಹನುಮಂತನನ್ನು ಕರೆದು ಸುಗ್ರೀವನು ಪ್ರತ್ಯೇಕವಾಗಿ ಈ ರೀತಿಯಲ್ಲಿ ಸೂಚನೆ ನೀಡಿದನು. ನೀನು ವೇಗವಾಗಿ ಯಾವುದೇ ಲೋಕದಲ್ಲಿ ಸಂಚರಿಸಬಲ್ಲೆ. ಆದುದರಿಂದ ಸೀತೆಯನ್ನು ಹುಡುಕುವ ಕೆಲಸದಲ್ಲಿ ನಿನ್ನ ಕಾರ್ಯ ಮಹತ್ವಪೂರ್ಣ ವಾಗಿರುವುದು. ಲಂಕೆಯು ಇಲ್ಲಿಂದ ದಕಿಣ ದಿಕ್ಕಿನಲ್ಲಿ ಇರುವುದು. ಸೀತಾದೇವಿಯನ್ನು ಹುಡುಕಿಕೊಂಡು ಬಾ ಎಂದನು. ಆಗ ಹನುಮಂತನಿಂದಲೇ ಸೀತಾನ್ವೇಷಣೆ ಸಾಧ್ಯವಾಗಬಹುದೆಂದು ರಾಮನಿಗೆ ಅನಿಸಿತ್ತು. ಆದುದರಿಂದ ತನ್ನ ಉಂಗುರವನ್ನು ಹನುಮಂತನಿಗೆ ಕೊಟ್ಟು ಗುರುತಿಗಾಗಿ ಈ ಉಂಗುರವಿರಲಿ ಎಂದನು.

 

 

 

ಸುಗ್ರೀವನ ಆದೇಶದಂತೆ ಕಪಿವೀರರು ದಿಕ್ಕು ದಿಕ್ಕಿಗೆ ಪ್ರಯಾಣ ಮಾಡಿದರು. ಉತ್ತರ ದಿಕ್ಕಿಗೆ ಹೊರಟವರು ಕುರು, ಮದ್ರ, ಪ್ರಸ್ಥಲ, ಪುಲಿಂದ,ಮ್ಲೇಚ್ಛ, ಶೂರಸೇನ, ಕಾಂಬೋಜ,ಯವನ,ಶಕ, ಚೀನ ಮುಂತಾದ ಕಡೆಗಳಲ್ಲಿ ಅನ್ವೇಷಣೆ ನಡೆಸಿದರು. ಹಿಮಾಲಯ ಪರ್ವತಗಳಲ್ಲಿಯೂ ಸಹ ಹುಡುಕಿದರು.ಸೇನಾಪತಿ ವಿನತನು ತನ್ನ ಸೇನೆಯೊಂದಿಗೆ ಪೂರ್ವ ದಿಕ್ಕಿನಲ್ಲಿ ಅನೇಕ ಅರಣ್ಯಗಳನ್ನು ನದಿ ತೀರಗಳಲ್ಲಿ ಹಾಗೂ ಪರ್ವತ ಪ್ರದೇಶಗಳಲ್ಲಿ ಶೋಧನೆ ನೆಡೆಸಿದರು. ಗಂಗಾ, ಸರಯೂ, ಕೌಶಿಕಿ, ಕಾಳಿ ನದಿ , ಸಿಂಧು, ಕಾಶಿ, ಮಾಳವ ,ಮಗದ, ವಂಗ, ಕೋಸಲ, ವಿದೇಹ ಮುಂತಾದ ದೇಶಗಳಲ್ಲಿ ಸೀತೆಯನ್ನು ಹುಡುಕಿದರು.ಮಂದರ ಪರ್ವತ, ಯುವ ದ್ವೀಪ ,ಸುವರ್ಣ ದೀಪ, ಕ್ಷೀರಸಾಗರ, ಋಷಭ ಪರ್ವತಗಳಲ್ಲಿ ಸೀತಾದೇವಿ ಇದ್ದಾಳೆ ಎಂದು ಹುಡುಕಿದರು. ಪಶ್ಚಿಮ ದಿಕ್ಕಿಗೆ ಹೋದ ಸುಷೇಣನು ಶೂರ, ಬೀಮ, ಕುಕ್ಷಿ , ಸೌರಾಷ್ಟ್ರ, ಬಾಹ್ಲಿಕ ಮುಂತಾದ ದೇಶಗಳಲ್ಲಿ ಸೀತಾನ್ವೇಷಣೆಯ ಕಾರ್ಯವನ್ನು ನಡೆಸಿದರು.ಹೇಮಗಿರಿ, ಕಾಂಚಾನ ಪರ್ವತ, ಮೇರು ಪರ್ವತ, ಮುಂತಾದೆಡೆಗೆ ಎಲ್ಲಾ ಕಡೆ ಸೀತೆಯನ್ನು ಹುಡುಕುವ ಕಾರ್ಯ ಮಾಡಿದರು. ದಕ್ಷಿಣ ದಿಕ್ಕಿಗೆ ಹೋದವರನ್ನು ಬಿಟ್ಟು ಉಳಿದವರೆಲ್ಲರೂ ನಿರಾಸೆಯಿಂದಲೇ ಮರಳಿ ಕಿಷ್ಕಿಂದೆಯನ್ನೂ ಬಂದು ಸೇರಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top