ಸಮಾಚಾರ

2019ರಲ್ಲಿ ಪ್ರಧಾನಿ ಮೋದಿ ಹತ್ಯೆ- ಸಂಚಲನ ಮೂಡಿಸಿದ ಬೆದರಿಕೆ ಇ-ಮೇಲ್​.

ಮುಂಬರುವ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡಲು ದುಷ್ಕರ್ಮಿಗಳು​ ಪ್ಲ್ಯಾನ್​ ಮಾಡಿರುವುದಾಗಿ ಎಂದು ದೆಹಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಟ್ನಾಯಕ್ ಅವರಿಗೆ ಈ ಮೇಲ್ ಸಂದೇಶ ರವಾನೆಯಾಗಿದೆ. ಅಸ್ಸಾಂ ನ ಜೈಲಿನಿಂದ ಇ ಮೇಲ್ ರವಾನೆಯಾಗಿದೆ ಎಂದು ಶಂಕಿಸಲಾಗಿದೆ . ಹೀಗಾಗಿ ಪ್ರಧಾನಿ ಮೋದಿ ಅವರಿಗೆ ಹೆಚ್ಚಿನ ಭದ್ರತೆ ನೀಡಲು ತೀರ್ಮಾನಿಸಲಾಗಿದೆ.

 

 

ದೆಹಲಿ ಪೊಲೀಸ್​ ಕಮಿಷನರ್​ಗೆ ಇ-ಮೇಲ್​ನಲ್ಲಿ ಬೆದರಿಕೆ ಒಡ್ಡಿರುವ ದುಷ್ಕರ್ಮಿಗಳು, 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುತ್ತೇವೆ ಎಂದು ಒಂದು ಸಾಲಿನಲ್ಲಿ ತಿಳಿಸಿದ್ದಾರೆ. ಹಾಗೇ ಮೇಲ್​ನಲ್ಲಿ ಹತ್ಯೆ ಮಾಡುವ ದಿನಾಂಕ ಮತ್ತು ವೇಳೆಯನ್ನು ನಮೂದಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ನವೆಂಬರ್ 2019 ರಲ್ಲಿ ಕೊಲ್ಲಬಹುದೆಂದು ಒಂದು ಸಾಲಿನ ಇ-ಮೇಲ್ ವರದಿ ಮಾಡಿದೆ.

ಹಿಂದೆಯೂ ಬೆದರಿಕೆ ಬಂದಿತ್ತು.
ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ರಾಜಕೀಯ ರೋಡ್‌ ಶೋ ಕಾರ್ಯಕ್ರಮದಲ್ಲಿ ಹತ್ಯೆಗೈಯುವುದಾಗಿ ಉಲ್ಲೇಖಿಸಲಾಗಿದ್ದ ಪತ್ರವೊಂದು ಕಳೆದ ಜೂನ್ ತಿಂಗಳಲ್ಲಿ ಪುಣೆ ಪೊಲೀಸರಿಗೆ ಸಿಕ್ಕಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top