fbpx
ಸಮಾಚಾರ

“ಮೋದಿ ಮಹಾವಿಷ್ಣುವಿನ ಹನ್ನೊಂದನೇ ಅವತಾರ, ಅವರಿಗೆ ಪೂಜ್ಯ ಸ್ಥಾನ ನೀಡಬೇಕು”- ಬಿಜೆಪಿ ವಕ್ತಾರ ಹೇಳಿಕೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹಾವಿಷ್ಣುವಿನ ಹನ್ನೊಂದನೇ ಅವತಾರ ಅವರಿಗೆ ಪೂಜ್ಯ ಸ್ಥಾನ ನೀಡಬೇಕು, ಅವರನ್ನು ದೇವತಾ ಭಾವದಿಂದ ಕಾಣಬೇಕು ಎಂದು ಮಹಾರಾಷ್ಟ್ರ ಬಿಜೆಪಿ ವಕ್ತಾರ ಹೇಳಿದ್ದಾರೆ.. ಅವರ ಈ ಹೇಳಿಕೆ ಸದ್ಯ ಎಲ್ಲೆಡೆ ನಗೆಪಾಟಲಿಗೀಡಾಗಿದೆ.

 

 

ಪ್ರಧಾನಿ ಮೋದಿ ವಿಷ್ಣುವಿನ ಅವತಾರವೆತ್ತಿ ಬಂದಿದ್ದಾರೆ. ವಿಷ್ಣು 10 ಅವತಾರ ಪೂರೈಸಿ, 11ನೇ ಅವತಾರದಲ್ಲಿ ಪ್ರಧಾನಿ ಮೋದಿಯಾಗಿ ಜನ್ಮ ತಾಳಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವಧೂತ್ ವಾಘ್ ಅವರು ಸಂಸ್ಕೃತ ಶ್ಲೋಕ ಯದಾ ಯದಾ ಹಿ ಧರ್ಮಸ್ಯ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ವಾಘ್‌ ತಮ್ಮ ಟ್ವೀಟ್ನಲ್ಲಿ ಪ್ರಧಾನಿ ನರೇಂದ್ರ ಮೋಜಿ ಜೀ ಅವರು ವಿಷ್ಣು ದೇವನ 11 ನೇ ಅವತಾರ ಎಂದು ​ ಬರೆದುಕೊಂಡಿದ್ದಾರೆ. ಮಾಧ್ಯಮಗಳ ಜತೆ ಮಾತನಾಡುವಾಗ, ದೇವರಂಥ ಮೋದಿಯವರನ್ನು ಪ್ರಧಾನಿಯನ್ನಾಗಿ ಪಡೆದಿದ್ದು ನಮ್ಮ ದೇಶದ ಅದೃಷ್ಟ ಎಂದು ಹೇಳಿದ್ದರು. ಇದನ್ನು ಟೀಕಿಸಿದ ಕಾಂಗ್ರೆಸ್​ ಮುಖಂಡ ಅತುಲ್​ ಲೊಂಧೆ, ಮೋದಿಯವರನ್ನು ದೇವರ ಅವತಾರ ಎಂದಿದ್ದು ದೇವರಿಗೆ ಮಾಡಿದ ಅವಮಾನ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top