ಮನೋರಂಜನೆ

ಹೊಸ ಮನೆಗೆ ‘ಚಾಲೆಂಜಿಂಗ್​ ಸ್ಟಾರ್​ ದರ್ಶನ್​’ ಹೆಸರಿಟ್ಟ ಅಭಿಮಾನಿ.

ತಮ್ಮ ನೆಚ್ಚಿನ ನಟ ನಟಿಯರ ಬಗೆಗಿನ ಪ್ರೀತಿ ಅಭಿಮಾನಿಗಳ ಕಡೆಯಿಂದ ಹೊರ ಹೊಮ್ಮುವ ರೀತಿಯೇ ರೋಚಕ. ತಮ್ಮ ಪ್ರೀತಿಯ ನಟನೇ ಎಲ್ಲಾದರಲ್ಲೂ ಮೊದಲಿರಬೇಕೆಂಬ ಹಂಬಲ, ಅಭಿಮಾನ ವ್ಯಕ್ತಪಡಿಸೋದರಲ್ಲಿಯೂ ಡಿಫರೆಂಟಾಗಿರಬೇಕೆಂಬ ಬಯಕೆ ಅಭಿಮಾನಿಗಳಲ್ಲಿದ್ದೇ ಇರುತ್ತೆ. ಅದೇ ರೀತಿ ದರ್ಶನ್ ಅವರ ಅಭಿಮಾನಿಯೊಬ್ಬ ಭಿನ್ನವಾದ ಹಾದಿಯಲ್ಲಿ ಎಲ್ಲರ ಗಮನ ಸೆಳೆದಿದ್ದಾನೆ!

ಚಿತ್ರದುರ್ಗದ ಅಭಿಮಾನಿಯೊಬ್ಬ ತಮ್ಮ ನಿವಾಸಕ್ಕೆ ‘ಚಾಲೆಂಜಿಂಗ್​ ಸ್ಟಾರ್’​ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.. ಸ್ವಂತ ಮನೆಯನ್ನು ಕಟ್ಟಿಸುವುದು ಪ್ರತಿಯೊಬ್ಬರ ಕನಸಾಗಿರುತ್ತೆ, ಹಾಗೆ ಕಟ್ಟಿಸಿದ ಮನೆಗೆ ತಂದೆ- ತಾಯಿಯ ಅಥವಾ ದೇವರ ಹೆಸರನ್ನು ಇಡುವುದು ಮಾಮೂಲು. ಆದರೆ ಚಿತ್ರದುರ್ಗದ ಈ ಅಭಿಮಾನಿ ತಾನು ಕಟ್ಟಿಸಿದ ಮನೆಗೆ ದರ್ಶನ್ ಹೆಸರಿಟ್ಟು ಅಭಿಮಾನ ಮೆರೆದಿದ್ದಾನೆ.

ಚಿತ್ರದುರ್ಗದ ‘ಯೋಗಿ’ ಎಂಬುವರು ದರ್ಶನ್ ಅವರ ಪಕ್ಕಾ ಅಭಿಮಾನಿ, ತಮ್ಮ ಮನೆಗೆ ‘ಚಾಲೆಂಜಿಂಗ್ ಸ್ಟಾರ್’ ಎಂದು ನಾಮಕರಣ ಮಾಡಿದ್ದಾರೆ. ಇವರ ಮನೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ದರ್ಶನ್ ಅಭಿಮಾನಿಯ ಈ ಅಭಿಮಾನಕ್ಕೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top