fbpx
ಮನೋರಂಜನೆ

ನಟಿ ಮಂಜುಳಾರ ಮಗ ಈಗ ಹೇಗಿದ್ದಾರೆ, ಏನ್ ಮಾಡ್ತಿದ್ದಾರೆ ಗೊತ್ತಾ

ಕನ್ನಡ ಚಿತ್ರರಂಗದ ಆಲ್ ಟೈಮ್ ‘ಗಯ್ಯಾಳಿ’, ಪರ್ಮನೆಂಟ್ ‘ಬಜಾರಿ’ ಎಂದೇ ಬಿರುದು ಉಳಿಸಿಕೊಂಡಿರುವ ಮಂಜುಳಾ 70/80ರ ದಶಕದಲ್ಲಿ ಮಿಂಚಿ ಮರೆಯಾದ ಸ್ಟಾರ್ ನಟಿ. ಸುಮಾರು 10 ವರ್ಷಗಳ ಕಾಲ ಕನ್ನಡ ಚಿತ್ರರಸಿಕರನ್ನು ರಂಜಿಸಿದ್ದ ಮಂಜುಳ ವಿಧಿವಶರಾಗಿ 32 ಎರಡು ವರ್ಷಗಳೆ ಮಾಸಿಹೋಗಿವೆ. ‘ಮನೆ ಕಟ್ಟಿ ನೋಡು’ ಎಂಬ ಚಿತ್ರದಲ್ಲಿ ಸಣ್ಣ ಹುಡುಗಿಯ ಪಾರ್ಟು ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಮಂಜುಳಾ ‘ಯಾರ ಸಾಕ್ಷಿ’ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿ ಬಡ್ತಿ ಪಡೆದಿದ್ದರು.

ಅಂದಿನ ಕಾಲದ ಬಹುತೇಕ ಎಲ್ಲಾ ಸ್ಟಾರ್ ನಂತರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಈಕೆ ಗಳಿಸಿದ್ದ ಖ್ಯಾತಿ ಕಂಡ ಯಶಸ್ಸು ಅಷ್ಟಿಷ್ಟಲ್ಲ. ಎರಡು ಕನಸು, ಸಂಪತ್ತಿಗೆ ಸವಾಲ್, ಬೆಸುಗೆ, ಸೀತಾರಾಮು, ಭಕ್ತ ಕುಂಬಾರ, ಸೊಸೆ ತಂದ ಸೌಭಾಗ್ಯ, ದಾರಿ ತಪ್ಪಿದ ಮಗ, ಹುಡುಗಾಟದ ಹುಡುಗಿ, ಸಾವಿರ ಸುಳ್ಳು, ಪ್ರೀತಿ ಮಾಡು ತಮಾಷೆ ನೋಡು, ಕಿಟ್ಟು ಪುಟ್ಟು, ಪಾಯಿಂಟ್ ಪರಿಮಳ, ಮಂಕುತಿಮ್ಮ ಹೀಗೆ ತಾನು ನಟಿಸಿದ ಸಾಲು ಸಾಲು ಸೂಪರ್ ಡೂಪರ್ ಹಿಟ್ ಆಗಿದ್ದವು. ಪ್ರತಿ ಚಿತ್ರದ ಪಾತ್ರಗಳೂ ಒಂದಕ್ಕಿಂತ ಒಂದು ಭಿನ್ನ ವಿಭಿನ್ನವಾಗಿದ್ದವು.

 

 

 

ತಾನು ನಟಿಸಿದ್ದ “ಹುಡುಗಾಟದ ಹುಡುಗಿ” ಚಿತ್ರವನ್ನು ನಿರ್ದೇಶಿಸಿದ್ದ “ಅಮೃತಂ” ಅವರ ಜೊತೆ ದಾಂಪತ್ಯ ಜೇವನಕ್ಕೆ ಕಾಲಿಟ್ಟ ಮಂಜುಳ ಬಳಿಕ ಒಂದು ಗಂಡು ಮಗುವಿಗೆ ಜನ್ಮ ನೀಡಿದರು, ಅಲ್ಲದೆ ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಂಡರು. ಗಂಡು ಮಗುವಿಗೆ ” ಅಭಿಷೇಕ್” ಅಂತಲೂ ಹೆಣ್ಣು ಮಗುವಿಗೆ “ಅಭಿನಯ” ಅಂತಲೂ ಹೆಸರಿಟ್ಟಿದ್ದರು. ಮದುವೆಯಾಗಿ ಗಂಡ ಮಕ್ಕಳ ಜೊತೆ ಸಂಸಾರದ ತಾಪತ್ರಗಳಲ್ಲಿ ಮುಳುಗಿಹೋಗಿದ್ದ ಮಂಜುಳಾ ಆ ನಂತರ ಬಣ್ಣದ ಜಗತ್ತಿನಕಡೆ ತಿರುಗಿಯೂ ನೋಡಿರಲಿಲ್ಲ.. ಸಂಸಾರ ಸುಖದ ಸಂತೋಷದಲ್ಲೇ ಕೆಲ ಸಮಯ ಸಾಗಿಸಿದ ಮಂಜುಳಾ ಒಂದು ದಿನ(12 September 1986) ಬೆಂಕಿಗೆ ಆಹುತಿಯಾಗಿ ತಮ್ಮ 32ನೇ ವಯಸ್ಸಲ್ಲಿ ಪ್ರಾಣ ಬಿಡುತ್ತಾರೆ. ಅವರ ಸಾವು ಇಂದಿಗೂ ನಿಗೂಢವಾಗಿಯೇ ಉಳಿದುಕೊಂಡಿದ್ದು ಕೆಲವು ಆಕೆ ಸಂಸಾರದಲ್ಲಿ ಬಿರುಕು ಮೂಡಿದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಾದಿಸಿದರೆ ಮತ್ತೆ ಕೆಲವರು ಆಕೆಯ ಸಾವು ಆಕಸ್ಮಿಕ ಎಂದು ಹೇಳುತ್ತಾರೆ.

ಅಂದಹಾಗೆ ಮಂಜುಳಾ ತೀರಿಕೊಂಡಾಗ ಅವರ ಮಗ ಅಭಿಷೇಕ್ ಕೇವಲ ಒಂದೂವರೆ ವರ್ಷದ ಎಳೆ ಮಗು. ಅಮ್ಮನ ನೆನಪಿಲ್ಲ, ಅಮ್ಮನನ್ನು ನೋಡೆಯಿಲ್ಲ ತನ್ನಮ್ಮ ಯಾರು ಎಂದು ಅರಿಯುವ ತಿಳುವಳಿಕೆ ಬರುವ ಮುನ್ನವೇ ಅಮ್ಮನ ಸ್ಥಾನಕ್ಕೆ ಉಮಾ ಎನ್ನುವರು ಮಲತಾಯಿಯಾಗಿ ಬಂದಿದ್ದರು. ತುಮಕೂರಿನ ಗೂಡ್ಸ್​ಶೆಡ್ ರಸ್ತೆಯ ವಿದ್ಯಾನಿಕೇತನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅಭಿಷೇಕ್’ಗೆ ತಾಯಿ ಪ್ರೀತಿ ನೀಡಿ ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಮಲತಾಯಿ ಎಂಬ ಭಾವನೆಯೇ ಬಾರದ ಹಾಗೆ ನೋಡಿಕೊಂಡಿದ್ದ ಮಾತೆಯೇ ಈ ಉಮಾ. ವರ್ಷಗಳು ಕಳೆದಂತೆ ತುಮಕೂರಿನಿಂದ ಬೆಂಗಳೂರಿಗೆ ಶಿಫ್ಟ್ ಆದ ಅಭಿಷೇಕ್ ಉದ್ಯೋಗದಲ್ಲಿದ್ದು ಸದ್ಯ ಬೆಂಗಳೂರಿನ ಡೈರಿ ಸರ್ಕಲ್ ಬಳಿ ಇರುವ ಮನೆಯೊಂದರಲ್ಲಿ ತಮ್ಮ ಹೆಂಡತಿ ಜೊತೆ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.

 

ಮಂಜುಳಾರ ಪುತ್ರ ಅಭಿಷೇಕ್:

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top