ಮನೋರಂಜನೆ

ಪ್ರೇಕ್ಷಕರಿಗೆ ಬಿಗ್ ನ್ಯೂಸ್ ಈ ಬಾರಿ ಬಿಗ್​​​​ಬಾಸ್​​​ಗೆ ಇವರು ಬರಲಿದ್ದಾರಂತೆ

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ನನ್ನು ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬಿಗ್ ಬಾಸ್ ಮತ್ತೆ ಶುರುವಾಗುತ್ತೆ ಎಂಬ ಸುದ್ದಿ ಹೊರಬಿದ್ದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ 6ನೇ ಸೀಸನ್ ಅವತ್ತು ಸ್ಟಾರ್ಟ್ ಆಗುತ್ತಂತೆ, ಇವತ್ತು ಸ್ಟಾರ್ಟ್ ಆಗುತ್ತಂತೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇದೀಗ ವಾಹಿನಿಯವರೇ ಬಿಗ್ ಬಾಸ್ ಸ್ಟಾರ್ಟಿಂಗ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ.ಬಹು ನಿರೀಕ್ಷೆಯ ಬಿಗ್ ಬಾಸ್ 6ನೇ ಆವೃತ್ತಿ ಅಕ್ಟೋಬರ್ 21ರಂದು ಆರಂಭವಾಗಲಿದೆ. ಕಳೆದ ಐದು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್ ಬಾಸ್ ಆಗಲು ರೆಡಿಯಾಗಿದ್ದಾರೆ.. ಈ ಸೀಸನ್ನಿನ ಪ್ರೊಮೊಗಳು ಅದಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದೆ.

 

 

 

ಕಳೆದ ಆವೃತ್ತಿಯಲ್ಲಿ ಅರ್ಧ ಜನ ಸೆಲೆಬ್ರಿಟಿಗಳು ಉಳಿದ ಅರ್ಧ ಜನ ಸಾಮಾನ್ಯ ಜನರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.. ಈ ಸಲನೂ ಅದೇ ರೀತಿ ಬಿಗ್ ಬಾಸ್ ಬರ್ತಾರೆ ಎಂದುಕೊಂಡಿದ್ದವರಿಗೆ ಬಿಗ್ ಬಾಸ್ ಆಯೋಜಕರಿಂದ ಶಾಕಿಂಗ್ ನ್ಯೂಸ್ ಸಿಕ್ಕಿದೆ.. ಅದೇನಪ್ಪಾ ಅಂದ್ರೆ ಬಿಗ್ ಬಾಸ್ ಈ ಬಾರಿ ಸೆಲೆಬ್ರೆಟಿಗಳಿಗಿಂತ ಕಾಮನ್ ಮ್ಯಾನ್ ಗಳ ಶೋ ಆಗಿರಲಿದೆಯಂತೆ.. 6ನೇ ಸೀಸನ್ ಬಿಗ್ ಬಾಸ್ ಕನ್ನಡದಲ್ಲಿ ಈ ಸಲ ಒಟ್ಟು 18 ಜನ ಮನೆಗೆ ಅವಕಾಶ ಪಡೆಯಲಿದ್ದಾರಂತೆ. ಅದರಲ್ಲಿ ಸೆಲೆಬ್ರೆಟಿಗಳಿಗಿಂತ ಹೆಚ್ಚು ಕಾಮನ್ ಮ್ಯಾನ್ ಗಳೇ ಹೆಚ್ಚಾಗಿರಲಿದ್ದಾರಂತೆ. ಹಾಗಂತ ಸ್ವತಃ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರೇ ಹೇಳಿದ್ದಾರೆ.

ಇಂಥಾ ಬಿಗ್ ಬಾಸ್ ಮನೆಗೆ ಈ ಭಾರಿ ವಿಶೇಷ ಎಂದರೆ ಆಟೋ ಡ್ರೈವರ್​​​​ಗಳು, ಬಸ್ ಡ್ರೈವರ್​​ಗಳು, ಹಳ್ಳಿಯ ರೈತರು ಮನೆಗೆ ಬರಲಿದ್ದಾರಂತೆ. ಈವರೆಗೂ ಬಂದಿರುವ ಸ್ಪರ್ಧಿಗಳಿಗಿಂತ ಭಿನ್ನವಾದ ಫ್ರೊಫೆಶನ್​​​ಗಳು ಇರಲಿದ್ದಾರೆ ಎನ್ನಲಾಗಿದೆ.ಸ್ಪರ್ಧೆಯಲ್ಲಿ ಭಾಗವಹಿಸಲು ಈ ಬಾರಿ 1 ಲಕ್ಷಕ್ಕೂ ಹೆಚ್ಚು ಅಪ್ಲಿಕೇಷನ್​​ಗಳು ಬಂದಿದ್ದು, ಕೊನೆಗೆ ಅದರಲ್ಲಿ 18 ಮಂದಿ ಮಾತ್ರ ಆಯ್ಕೆಯಾಗಿದ್ದಾರೆ. ಮನೆಯೊಳಗೆ ಹೋಗುವ ಆ 18 ಅದೃಷ್ಟದ ವ್ಯಕ್ತಿಗಳು ಯಾರು ಎಂಬುದನ್ನು ತಿಳಿಯಲು 21 ವರೆಗೆ ಕಾಯಲೇಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top