ದೇವರು

ನವರಾತ್ರಿ ಮುಗಿಯುವ ತನಕ ಈ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡಬಾರದಂತೆ,ಮಾಡಿದ್ರೆ ಅಷ್ಟ ಕಷ್ಟ ದರಿದ್ರ ಬರುತ್ತಂತೆ

ಹೆಸರೇ ಹೇಳುವಂತೆ ನವ ಎಂದರೆ ಒಂಭತ್ತು , 9 ರಾತ್ರಿಗಳ ಕಾಲ ದೇವಿ ದುರ್ಗಾ ಮಾತೆಯನ್ನು ಸಡಗರ-ಸಂಭ್ರಮದಿಂದ ದೇಶದೆಲ್ಲೆಡೆ ಭಕ್ತಿ-ಶ್ರದ್ಧೆಯಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಏನು ಮಾಡಬೇಕು ? ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಯಾವ ಕೆಲಸವನ್ನು ಈ ನವರಾತ್ರಿಯ ಸಮಯದಲ್ಲಿ ಮಾಡಬಾರದು, ಅದು ಶುಭವಲ್ಲ ಎಂದು ಜೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಹೇಳಿದ್ದಾರೆ. ಹಾಗಾದರೆ ಆ ಕೆಲಸಗಳು ಯಾವುವು ? ಎಂದು ಈಗ ತಿಳಿದುಕೊಳ್ಳೋಣ ಬನ್ನಿ.

 

 

 

ನವರಾತ್ರಿಯ ಸಮಯದಲ್ಲಿ ಕೂದಲು ಕತ್ತರಿಸಬಾರದು ಮತ್ತು ಕ್ಷೌರ ಮಾಡಬಾರದು. ಒಂದು ವೇಳೆ ಹಾಗೆ ಮಾಡಿಸಿದರೆ ಅದು ಶುಭವಲ್ಲ, ಈ ಸಮಯದಲ್ಲಿ ಮಗುವಿಗೆ ಕೂದಲು ಬೋಳಿಸುವ ಅಥವಾ ಕೇಶಮುಂಡನೆ ಮಾಡುವ, ಮುಡಿ ಕೊಡುವ ಕೆಲಸವನ್ನು ಮಾಡಬಾರದು, ಇದು ಸಹ ಶುಭವಲ್ಲ .
ನವರಾತ್ರಿಯ ಸಮಯದಲ್ಲಿ ಮಾಂಸಾಹಾರ ಮತ್ತು ಮದ್ಯಪಾನವನ್ನು ಸೇವಿಸಬಾರದು.ಈ ನವರಾತ್ರಿಯ ಸಂದರ್ಭದಲ್ಲಿ ಬೆಳ್ಳುಳ್ಳಿ, ಈರುಳ್ಳಿ ಮತ್ತು ಶುಂಠಿಯನ್ನು ಬಳಸಿ ಮಾಡಿದಂತಹ ಯಾವುದೇ ಆಹಾರವನ್ನು ಕೂಡ ಸೇವನೆ ಮಾಡದೆ ಇರುವುದು ಒಳ್ಳೆಯದು. ನವರಾತ್ರಿಯ ಸಂದರ್ಭದಲ್ಲಿ ಮನೆಯಲ್ಲಿ ಕಳಸವನ್ನು ಸ್ಥಾಪಿಸಿ, ದಿನದ 24 ಗಂಟೆಗಳ ಕಾಲ ಉರಿಯುವ ದೀಪವನ್ನು ಹಚ್ಚಿ. ಇದು ಹಾರಿ ಹೋಗಬಾರದು. ಈ ಸಮಯದಲ್ಲಿ ಮನೆಯು ಜನರಿಂದ ತುಂಬಿರಲಿ, ಯಾವತ್ತು ಮನೆಗೆ ಬೀಗ ಹಾಕಿ ಹೊರಗೆ ಹೋಗಬೇಡಿ. ಯಾರಾದರೂ ಒಬ್ಬರು ಮನೆಯಲ್ಲಿ ಯಾವಾಗಲೂ ಇರಲೇಬೇಕು.

ಒಂಬತ್ತು ದಿನಗಳಲ್ಲಿ ಮಧ್ಯಾಹ್ನದ ವೇಳೆ ಮಲಗಬಾರದು. ಅದರಲ್ಲೂ ನವರಾತ್ರಿಯ ವೇಳೆ ಉಪವಾಸ ಮಾಡುವವರು, ಮಧ್ಯಾಹ್ನದ ವೇಳೆಯಲ್ಲಿ ಮಲಗಲೇಬಾರದು. ಹೀಗೆ ಮಲಗಿದರೆ ಉಪವಾಸದಿಂದ ಸಿಗುವ ಒಳ್ಳೆಯ ಫಲವು ಕೂಡ ನಿಮಗೆ ಸಿಗುವುದಿಲ್ಲ. ಉಪವಾಸ ಮಾಡುವವರು ಸಂಪೂರ್ಣವಾಗಿ ಹಸಿದುಕೊಂಡು ಇರುವ ಬದಲು ಸ್ವಲ್ಪ-ಸ್ವಲ್ಪ ಆಹಾರವನ್ನು ಸೇವಿಸಿ, ಆಹಾರ ಸ್ವಲ್ಪವೇ ಸೇವಿಸಿ. ನೀವು ಸಾಮಾನ್ಯ ದಿನಗಳಲ್ಲಿ ತಿನ್ನುವಂತೆ ಉಪವಾಸದ ಸಮಯದಲ್ಲಿ ತಿನ್ನಬೇಡಿ, ಊಟ ಮಾಡಲು ಸೂರ್ಯ ಮುಳುಗುವ ತನಕ ಕಾಯಬೇಡಿ, ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ದಿನವಿಡೀ ಸೇವಿಸಿ, ನಿರ್ಜಲ ವ್ರತ ಮಾಡುವವರು ಮಾತ್ರ ನೀರು ಕುಡಿಯದೆ ಉಪವಾಸ ಮಾಡ ಉಪವಾಸ ಮಾಡಬೇಕು.ಉಪವಾಸ ಮಾತ್ರ ಮಾಡುವವರು ನೀರು ಕುಡಿಯಬಹುದು, ನೀರು ಕುಡಿಯುತ್ತಿದ್ದರೆ ಹಸಿವು ಕೂಡ ಕಡಿಮೆಯಾಗುತ್ತದೆ.ಒಂದೇ ಸಲ ನೀರು ಕುಡಿಯಲು ಕಷ್ಟವಾದರೆ ತಾಜಾ ಹಣ್ಣಿನ ರಸವನ್ನು ಕುಡಿಯಿರಿ ಇದು ದೇಹವನ್ನು ತೇವಾಂಶದಿಂದ ಇಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top