fbpx
ಜೀವನ ಕ್ರಮ

ಜೀವನದಲ್ಲಿ ಈ 7 ವಿಷಯಗಳಲ್ಲಿ ನಿರೀಕ್ಷೆ ಇಟ್ಕೊಂಡ್ರೆ ನೆಮ್ಮದಿಯಾಗಿರೋ ಜೀವನ ಬರಿ ನೋವಲ್ಲೇ ಹಾಳಾಗುತ್ತೆ

ನಿಮ್ಮ ಮನಸ್ಸಿಗೆ ನೋವು ಕೊಡುವ ಈ ಏಳು ನಿರೀಕ್ಷೆಗಳ  ಬಗ್ಗೆ ತಿಳಿದುಕೊಂಡರೆ ಆಗ ನಿಮಗೆ ಅರ್ಧ ದುಃಖ ಕಡಿಮೆಯಾಗುತ್ತದೆ .

 

 

 

ಮನುಷ್ಯ ಎಂದ ಮೇಲೆ ಆಸೆ – ನಿರಾಸೆ, ಸೋಲು – ಗೆಲುವು, ಕಷ್ಟ – ಸುಖ ಎಲ್ಲವೂ ಇರುತ್ತದೆ. ಆದರೆ ಕೆಲವರಿಗೆ ಏನೇನೋ ನಿರೀಕ್ಷೆಗಳು ಇರುತ್ತವೆ. ಅವರಿಗೆ ಅವರ ಜೀವನ ಈ ನಿರೀಕ್ಷೆಗಳಿಂದಲೇ ಕಷ್ಟ ಅನ್ನಿಸುತ್ತದೆ. ಅಷ್ಟಕ್ಕೂ ಕಷ್ಟ ಕೊಡುವ ನಿರೀಕ್ಷೆಗಳು ಯಾವುವು  ? ಯಾಕೆ  ಆ  ನಿರೀಕ್ಷೆಗಳಿಂದ ನಮ್ಮ ಮೇಲೆ ನಮಗೆ ಕೋಪ, ಅಸಹ್ಯ, ಬೇಸರ, ಮೂಡುತ್ತದೆ ಎಂದು ತಿಳಿದುಕೊಳ್ಳಬೇಕೆ ? ಹಾಗಾದರೆ ಇಲ್ಲಿದೆ ನೋಡಿ ನಿರೀಕ್ಷೆಗಳ ಒಂದು ಸುತ್ತು.

ಅವಕಾಶ ತಾನೇ ತಾನಾಗಿ ಹುಡುಕಿಕೊಂಡು ಬರುತ್ತದೆ:ಇವತ್ತಿನ ಕಾಲದಲ್ಲಿ ಕಾಯಿಲೆ ಕೂಡ ಪುಗಸಟ್ಟೆ ಬರುವುದಿಲ್ಲ. ದುಡ್ಡು ಕೊಟ್ಟು ಹಾಳು ಮೂಳು ತಿಂದು ಕುಡಿದಿದ್ದಕ್ಕೆ ಕಾಯಿಲೆ ಬರುವುದು. ಅಂಥದ್ದರಲ್ಲಿ ಅವಕಾಶಗಳು ಸುಮ್ಮ ಸುಮ್ಮನೆ ನಿಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತವೆ ಎನ್ನುವುದು ಮೂರ್ಖತನ. ಈ ರೀತಿಯ ಆಸೆ ಇಟ್ಟುಕೊಳ್ಳುವುದನ್ನು ಬಿಟ್ಟು, ಬದುಕಿನ ಬಗ್ಗೆ  ಬಂದು ಕುತೂಹಲವನ್ನು ಇಟ್ಟುಕೊಳ್ಳಿ. ಆಗಾಗ್ಗೆ  ಹೊಸತನವನ್ನು ಕಲಿಯಿರಿ. ಬೇರೆ ಬೇರೆ ಕ್ಷೇತ್ರದಲ್ಲಿ ಪಳಗಿರುವ ಜನರನ್ನು ಭೇಟಿ ಮಾಡಿ ಅವಕಾಶ ಸಿಗುವ ಮಾರ್ಗ ಇದು.

ಎಲ್ಲರೂ ನನ್ನನ್ನು ಇಷ್ಟಪಡಬೇಕು, ಪ್ರೀತಿಯಿಂದ ಮಾತನಾಡಿಸಬೇಕು :ಜನರಿಗೆ ಅವರದ್ದೇ ಆದ ಚಿಂತೆ ಹಾಸಿ ಹೊದ್ದಿಕೊಳ್ಳುವಷ್ಟು ಇರುತ್ತದೆ. ನೀವು ಒಳ್ಳೆಯವರಾದ  ಮಾತ್ರಕ್ಕೆ ಎಲ್ಲರಿಗೂ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಬರುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ನೀವು ಬೇಜಾರು ಪಡುವ ಅವಶ್ಯಕತೆ ಇಲ್ಲ. ನಿಮ್ಮ ಜೊತೆ ಇರುವವರೊಂದಿಗೆ ಸ್ನೇಹ, ತಾಳ್ಮೆಯಿಂದ ನಂಬಿಕೆ ಹುಟ್ಟುವ ಹಾಗೆ ನಡೆದುಕೊಳ್ಳಿ ಸಾಕು. ಅವರ ನಂಬಿಕೆ ನಿಮ್ಮನ್ನು ಕಾಪಾಡುತ್ತದೆ .

ಜೀವನ ಯಾವಾಗಲೂ ಚೆನ್ನಾಗಿ ಇರುತ್ತದೆ:ನಿಮಗೆ ಗೊತ್ತು ಸಮಯ  ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಅಂತ . ಎಂದಾದರೂ ನಿಮ್ಮ ಹೇಡಿತನದಿಂದ  ಜೀವನ ಚೆನ್ನಾಗಿಯೇ ಇರುತ್ತದೆ ಅಂತ ನಂಬುತ್ತೀರ .ನಿಮ್ಮ ಪ್ರಯತ್ನ ಕಲಿಕೆ ಯಾವತ್ತಿಗೂ ನಿಲ್ಲಬಾರದು. ಕಷ್ಟಗಳು ಬಂದಾಗ ಎದುರಿಸಿ ನಿಲ್ಲಲೇ ಬೇಕು ಎನ್ನುವ ಛಲ ಇರಬೇಕು. ಹಾಗಾದಾಗ ನೀವು ಮುಂದೆ ಬರೋಕೆ ಸಾಧ್ಯ .

ನನ್ನ ಮನಸ್ಸು ಏನು ಅಂತ ಅವರೇ ಅರ್ಥ ಮಾಡಿಕೊಳ್ಳುತ್ತಾರೆ:

 

 

 

ಯಾರೂ ಅರ್ಥ ಮಾಡಿಕೊಳ್ಳುತ್ತಾರೆ ? ನಿಮ್ಮ ಮನಸ್ಸಿನಲ್ಲಿರುವುದು, ನಿಮಗೆ ಕೆಲವು ಸಲ ಗೊತ್ತಾಗುವುದಿಲ್ಲ. ಆಗಿರುವಾಗ ಬೇರೆಯವರಿಗೆ ಅರ್ಥ ಆಗುವುದಾದರೂ ಹೇಗೆ. ಸರಿಯಾಗಿ ಮಾತಾಡುವುದು ಕಲಿಯಿರಿ. ಸ್ಪಷ್ಟವಾಗಿ, ನೇರವಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿದರೆ ಭಿನ್ನಾಭಿಪ್ರಾಯಗಳು ಕಡಿಮೆ ಆಗುತ್ತವೆ .

ನನ್ನ ಮಾತು ಯಾರು ಮೀರಬಾರದು:ಅಂದರೆ ನೀವೇನು ಹಿಟ್ಲರ್ ಎಂದುಕೊಂಡಿದ್ದೀರಾ ? ನಿಮಗೆ ಸರಿ ಅನ್ನಿಸಿದ್ದು ಇನ್ನೊಬ್ಬರಿಗೆ ತಪ್ಪಾಗಿ ಕಾಣಬಹುದು. ಹಾಗಂತ ಅವರು ನಿಮಗೆ ಮರ್ಯಾದೆ ಕೊಡಲಿಲ್ಲ ಅಂದುಕೊಂಡರೆ ಅದು ನಿಮ್ಮ ತಪ್ಪು .ಎಲ್ಲರ ಭಾವನೆಗಳನ್ನು ಗೌರವಿಸಿದಾಗ ನೀವು ನೆಮ್ಮದಿಯಾಗಿ ಇರಬಹುದು. ನಾನೇ ಸರಿ ಎನ್ನುವ ಅಹಂ ಬಿಟ್ಟುಬಿಡಿ.

ಹಣ ,ಅಂತಸ್ತು ಅಧಿಕಾರ ಇದ್ದರೆ ಸಂತೋಷವಾಗಿ ಇರಬಹುದು:ಇವೆಲ್ಲ ಇದ್ದರೆ ಐಷಾರಾಮಿ ಜೀವನ ಸಾಗಿಸಬಹುದು. ಆದರೆ ಖುಷಿ ಎನ್ನುವುದು ದುಡ್ಡಿನಲ್ಲಿ ಇರುವುದಿಲ್ಲ. ಆಗಿದ್ದರೆ ಗಾರೆ ಕೆಲಸದವರ ಮಕ್ಕಳು ಹೇಗೆ ನಗುನಗುತ್ತಾ ಇರುತ್ತಿದ್ದರು, ಹೇಳಿ ನಿಮ್ಮ ಜೀವನದ ಗುರಿ ಬರೀ ಆಸ್ತಿ ಸಂಪಾದಿಸುವುದರಲ್ಲಿ ಅಲ್ಲ, ಎಲ್ಲದನ್ನು ಮೀರಿದ ಆಸ್ತಿ ಎಂದರೆ ತೃಪ್ತಿ ಎನ್ನುವುದನ್ನು  ಮರೆಯಬೇಡಿ.

ನಾನು ಗ್ಯಾರಂಟಿ ಸೋಲುತ್ತೀನಿ:ಪ್ರತಿ ವಿಚಾರದಲ್ಲೂ ಸ್ಪರ್ಧಾತ್ಮಕ ಮನೋಭಾವ ಇರಬೇಕು. ಕಡೆಯ ನಿಮಿಷದವರೆಗೂ ಹೋರಾಟದ ಕಿಚ್ಚು ಇರಬೇಕು. ಅದು ಬಿಟ್ಟು ಸೋಲುತ್ತೇನೆ ಅಂದುಕೊಂಡರೆ ಸಾಧಿಸುವುದೇನು. ಸಕಾರಾತ್ಮಕವಾಗಿ ಯೋಚಿಸುವುದರಿಂದ ಪರಿಸ್ಥಿತಿಯನ್ನು ಗೆಲ್ಲುವ ಧೈರ್ಯ ತಾನೇ ತಾನಾಗಿ ಬೆಳೆಯುತ್ತದೆ.ಈಗ ಹೇಳಿ ನಿಮಗೂ ಇಂಥ ನಿರೀಕ್ಷೆಗಳು ಇವೆಯೇ ? ಆಥವಾ ಇದ್ದವೇ ? ಆವುಗಳಿಂದ ನೋವು ಉಂಟಾಗುತ್ತಿತ್ತೇ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top