ಮನೋರಂಜನೆ

ರಾಜ್ಯಾದ್ಯಂತ ‘ದಿ ವಿಲನ್’ ಅಡ್ವಾನ್ಸ್ ಬುಕಿಂಗ್ಸ್’ಗೆ ಭರ್ಜರಿ ರೆಸ್ಪಾನ್ಸ್.

‘ದಿ ವಿಲನ್’ ಸದ್ಯ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಹವಾ ಎಬ್ಬಿಸಿರೋ ಸಿನಿಮಾ., ಆರು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿರುವ ಪ್ರೇಮ್ ‘ದಿ ವಿಲನ್’ ಸಿನಿಮಾ ಮೇಲಿನ ನಿರೀಕ್ಷೆಯನ್ನು ದಿನೇ ದಿನೇ ಹೆಚ್ಚಿಸುತ್ತಲೇ ಇದ್ದಾರೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಹಾಡುಗಳ ಅಬ್ಬರ ಕಂಡು ಅನೇಕರು ಬೆಚ್ಚಿಬಿದ್ದಿದ್ದಾರೆ.. ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುವ ವಿಲನ್ ಅಂತೂ ಮುಂದಿನವಾರ ತೆರೆಗೆ ಅಪ್ಪಳಿಸುತ್ತಿದೆ. ಈಗಾಗಲೇ ಟಿಕೆಟ್ ಬುಕಿಂಗ್ಸ್ ಕೂಡ ಓಪನ್ ಆಗಿದ್ದು ಅದಾಗಲೇ ಎಲ್ಲೆಡೆ ಸೋಲ್ಡ್ ಬೋರ್ಡುಗಳೂ ಕಾಣಿಸುತ್ತಿವೆ..

ಒಂದು ವಾರದ ಮೊದಲೇ ಸಿನಿಮಾದ ಬುಕ್ಕಿಂಗ್ಸ್ ಶುರುವಾಗಿದ್ದು ‘ಬುಕ್ ಮೈ ಶೋ’ನಲ್ಲಿ ವಿಲನ್ ಹವಾ ಜೋರಾಗಿದೆ. ಆನ್‍ಲೈನ್‍ನಲ್ಲಿ ಮೂವತ್ತಾರು ಸಾವಿರಕ್ಕೂ ಹೆಚ್ಚು ಓಟ್‍ಗಳಿಂದ 100% ರೇಟಿಂಗ್ ಪಡೆದುಕೊಂಡಿದೆ.. ಬುಕಿಂಗ್ ಓಪನ್ ಆಗಿರುವ ಬಹುತೇಕ ಚಿತ್ರಮಂದರಿಗಳಲ್ಲಿ ಮೊದಲ 2ದಿನದ ಟಿಕೆಟ್ಟುಗಳು ಸೋಲ್ಡ್ ಔಟ್ ಆಗಿವೆ.

 

 

ಅಂದಹಾಗೆ ಚಿತ್ರ ಬಿಡುಗಡೆಯಾಗಲು ಇನ್ನೂ 4 ದಿನ ಬಾಕಿ ಇದ್ದರೂ ಕೂಡಾ ಅಭಿಮಾನಿಗಳೆಲ್ಲ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ‘ದಿ ವಿಲನ್’ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಭಾರೀಗಾತ್ರದ ಕಟೌಟುಗಳೂ ಸೇರಿದಂತೆ ಡಿಫರೆಂಟಾದ ಬ್ಯಾನರುಗಳೂ ಸಿದ್ಧಗೊಳ್ಳುತ್ತಿವೆ.

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top