ಮನೋರಂಜನೆ

TV9 ಸಿಬ್ಬಂದಿಗೆ 1 ಲಕ್ಷ ರೂ ನೀಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.

ವಿವಾದಾತ್ಮಕ ನಿರ್ದೇಶಕ ಎಂದೇ ಹೆಸರಾಗಿರುವ ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್‌ನಲ್ಲಿ ಸದಾ ಕ್ರಿಯಾಶೀಲವಾಗಿರುವ ವ್ಯಕ್ತಿ. ಯಾರನ್ನೋ ಕೆಣಕುವುದು, ಅವರ ಮೇಲೆ ಜೋಕ್‌ ಮಾಡಿಕೊಳ್ಳುವುದು, ಇನ್ನೇನೋ ಕಿತಾಪತಿ ಮಾಡುತ್ತಾ ಸದಾ ಸುದ್ದಿಯಲ್ಲಿರುವ ನಿರ್ದೇಶಕ. ಇಂಥಾ ಆರ್ಜಿವಿ ಇದೀಗ tv9 ನಲ್ಲಿ ಕೆಲಸ ಮಾಡುವ ಪತ್ರಕರ್ತನಿಗೆ ಒಂದು ಲಕ್ಷ ರೂ ಬಹುಮಾನ ನೀಡಿದ್ದಾರೆ.

 

 

ಚಂದ್ರಬಾಬು ನಾಯ್ಡು ರಂತೆಯೇ ಕಾಣುವ ಹೋಟೆಲ್ ನಲ್ಲಿ ಕೆಲಸ ಮಾಡುವ ವ್ಯಕ್ತಿಯ ವಿಡಿಯೋವನ್ನ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿ ಆ ವ್ಯಕ್ತಿಯನ್ನು ಪತ್ತೆ ಹಚ್ಚಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಆರ್ ಜಿವಿ ಈ ಮೊದಲು ಘೋಷಣೆ ಮಾಡಿದ್ದರು. ಹೋಲಿಕೆಯಲ್ಲಿ ಚಂದ್ರಬಾಬು ನಾಯ್ಡು ಅವರನ್ನೇ ಹೋಲುತ್ತಿರುವ ಈ ವ್ಯಕ್ತಿ ಸಣ್ಣ ಹೊಟೆಲ್ ವೊಂದರಲ್ಲಿ ಆಹಾರ ಪೂರೈಕೆ ಮಾಡುವ ವಿಡಿಯೋ ಅದಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ವರ್ಮಾ ಘೋಷಣೆ ಮಾಡಿದ ಕೆಲ ಗಂಟೆಗಳಲ್ಲೇ ಟಿವಿ9 ಪತ್ರಕರ್ತ ರೋಹಿತ್ ಮುತ್ಯಾಲ ಚಂದ್ರಬಾಬು ನಾಯ್ಡು ತದ್ರೂಪ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.. ಈ ಬಗ್ಗೆ ಟ್ವಿಟರ್ ನಲ್ಲಿಯೇ ಸಂತಸ ವ್ಯಕ್ತಿಪಡಿಸಿದ ಆರ್ ಜಿವಿ ಬಹುಮಾನಕ್ಕಾಗಿ ಆ ವ್ಯಕ್ತಿಯ ಬ್ಯಾಂಕ್ ಖಾತೆ ವಿವರ ಪಡೆದುಕೊಂಡಿದ್ದು, ಹಣ ಕಳುಹಿಸುವುದಾಗಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top