fbpx
ಮನೋರಂಜನೆ

ಸ್ಯಾಂಡಲ್‌ವುಡ್ ಆಯ್ತು, ಈಗ ಬಾಲಿವುಡ್‌ನಲ್ಲಿ ಕಿತ್ತಾಡಿದಳು ಕಿರಿಕ್ ರಾಣಿ ಸಂಯುಕ್ತ ಹೆಗ್ಡೆ-ವಿಡಿಯೋ ನೋಡಿ.

ಬಿಗ್ ಬಾಸ್ ಸೀಸನ್ 5ನಲ್ಲಿ ಇಜ್ಜಿಲೊಲೆಯ ಸಮೀರ್ ಆಚಾರ್ಯನಿಗೆ ತದುಕಿ ಹೊರ ಬಂದ ನಂತರ ಸಂಪೂರ್ಣವಾಗಿ ಕಾಣೆಯಾಗಿದ್ದಾಕೆ ಕಿರಿಕ್ ಹುಡುಗಿ ಸಂಯುಕ್ತ ಹೆಗಡೆ.. ತಾನು ಮಾಡಿಕೊಂಡ ಎಡವಟ್ಟುಗಳ ದೆಸೆಯಿಂದಲೇ ಒಳ್ಳೊಳ್ಳೆ ಸಿನಿಮಾ ಚಾನ್ಸ್’ಗಳನ್ನು ಹಾಳುಮಾಡುಕೊಂಡ ಸಂಯುಕ್ತ ಏನಾದರೂ ಅಲ್ಪ ಸ್ವಲ್ಪ ಸದ್ದು ಮಾಡಿದ್ದಾಳೆ ಎಂದರೆ ಅದು ಟ್ರೊಲ್’ಗಳಿಂದ ಮಾತ್ರ.. ಅಂತೆಯೇ ಯಾವೊಬ್ಬ ನಿರ್ದೇಶಕನು ಈಕೆಯನ್ನು ಹಾಕಿಕೊಂಡು ಸಿನಿಮಾ ಮಾಡುವ ಸಾಹಸಕ್ಕೆ ಈವರೆಗೂ ಕೈಹಾಕಿಲ್ಲ.

ವಾರಕ್ಕೊಂದರಂತೆ ಚೋಟುದ್ದದ ಬಟ್ಟೆ ತೊಟ್ಟು ರೈಲ್ವೇ ಹಳಿ ಮೇಲೆ ಕಾಲೆತ್ತಿಕೊಂಡು ಬಿದ್ದ ವಿಚಿತ್ರ ಭಂಗಿಯ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅಪ್ಲೋಡ್ ಮಾಡಿ ಜನರ ಬೈಗುಳುವನ್ನೂ ಎಂಜಾಯ್ ಮಾಡುತ್ತಿದ್ದ ಸಂಯುಕ್ತ ಟ್ರಾಲಿಗರಿಗೆ ಭರ್ಜರಿ ಭೋಜನ ಪೂರೈಸುತ್ತಿದ್ದಳು.. ಹೀಗೆ ಕೈಯಲ್ಲಿ ಸಿನಿಮಾ ಇಲ್ಲದೆ ಖಾಲಿ ಕುಳಿದಿದ್ದ ಸಂಯುಕ್ತ ಜಿಮ್’ನತ್ತ ಮುಖ ಮಾಡಿ ಫಿಟ್ನೆಸ್ ನತ್ತ ಸ್ವಲ್ಪ ಗಮನಹರಿಸಿ ಆ ಮೂಲಕವೇ ಹೆಚ್ಚು ಕಾಲಕಳೆಯುತ್ತಿದ್ದರು. ಈ ಮಧ್ಯೆ ತಾನು ತಮಿಳು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂಬ ಸುದ್ದಿಯನ್ನು ಆಕೆಯೇ ಹಬ್ಬಿಸಿದ್ದಳೂ, ನಂತರ ಅವು ಕೂಡ ಸುಳ್ಳಾಗಿದ್ದವು.. ಇಂಥಾ ಕಿರಿಕ್ ರಾಣಿ ಸಂಯುಕ್ತ ಈಗ ಮತ್ತೊಮ್ಮೆ ತನ್ನ ಕಿತ್ತಾಟದಿಂದಲೇ ಸುದ್ದಿಯಾಗಿದ್ದಾಳೆ.

ವಿಡಿಯೋ ನೋಡಿ.👇👇👇

 

ಬಾಲಿವುಡ್ ನಟಿ ಸನ್ನಿ ಲಿಯೋನಿ ನಡೆಸಿಕೊಡುವ ಜನಪ್ರಿಯಾ ರಿಯಾಲಿಟಿ ಶೋ ‘ಸ್ಲ್ಪಿಟ್ಸ್​ ವಿಲ್ಲಾ’ ಮನೆಗೆ ಸಂಯುಕ್ತ ಇತ್ತೀಚಿಗಷ್ಟೇ ವೈಲ್ಡ್ ಕಾರ್ಡ್ ಸಂಯುಕ್ತ ಎಂಟ್ರಿ ಕೊಟ್ಟಿದ್ದಳಲ್ಲಾ, ಆ ಶೋನಲ್ಲಿ ಒಂದೇ ದಿನದಲ್ಲೇ ಜಗಳ ಮಾಡಿಕೊಂಡಿದ್ದಾಳೆ . ಹಿಂದಿಯ ಜನಪ್ರಿಯ ಡೇಟಿಂಗ್ ರಿಯಾಲಿಟಿ ಶೋ ಆಗಿರೋ ಸ್ಲ್ಟಿಟ್ಸ್ ವಿಲ್ಲಾ ಹೆಚ್ಚಾಗಿ ವಯಸ್ಕರು ನೋಡೋ ಕಾರ್ಯಕ್ರಮ. ರಾತ್ರಿ 10ಗಂಟೆಯ ನಂತ್ರ ಈ ಷೋ ಪ್ರಸಾರವಾಗುತ್ತೆ.. ಒಂದಷ್ಟು ವಿವಾದಗಳ ಜೊತೆಯಲ್ಲಿಯೇ ಜರುಗೋ ಈ ರಿಯಾಲಿಟಿ ಶೋ ಸಂಯುಕ್ತಾಳ ಮನಸ್ಥಿತಿಗೆ ಹೇಳಿ ಮಾಡಿಸಿದಂತಿದೆ.

ಈ ಕಾರ್ಯಕ್ರಮದಲ್ಲಿ ಸಿಂಬಾ ಹಾಗೂ ಮೈರಾ ನಡುವೆ ಲವ್ವಿ ಡವ್ವಿ ನಡೆಯುತ್ತಿತ್ತು. ಇದೀಗ ಸಂಯುಕ್ತ ಅವರ ಎಂಟ್ರಿಯಿಂದ ಸಿಂಬಾ ಕಣ್ಣು ಸಂಯುಕ್ತ ಕಡೆಗೆ ಜಾರಿದೆ. ಇದರಿಂದಾಗಿ ಮೈರಾ ಸಿಟ್ಟು ಮಾಡಿಕೊಂಡಿದ್ದಾರೆ. ಇದೇ ಅಲ್ಲದೆ ಸಂಯುಕ್ತ ಹೆಗ್ಡೆ ಹಾಗೂ ಮೈರಾ ಇಬ್ಬರು ಮಾತಿನ ಜಗಳ ಮಾಡಿ ಒಬ್ಬರನ್ನೊಬ್ಬರು ನಿಂದಿಸಿಕೊಂಡಿದ್ದಾರೆ. ಒಟ್ಟಾರೆ ಎಂಟ್ರಿ ಕೊಟ್ಟ ಒಂದೇ ದಿನಕ್ಕೆ ಹಲವು ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ನನಗೆ ತಮಿಳು ತೆಲುಗಿನಲ್ಲಿ ಸಿಕ್ಕಾಪಟ್ಟೆ ಆಫರುಗಳು ಬರುತ್ತಿವೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ಸಂಯುಕ್ತಾಗೆ ವಯಸ್ಕರ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗುವ ಗತಿ ಬಂತಲ್ಲಾ ಅಂತ ಸಿನಿಮಾ ಮಂದಿ ಆಡಿಕೊಳ್ಳಲಾರಂಭಿಸಿದ್ದರಂತೆ.. ಒಟ್ಟಿನಲ್ಲಿ ಬಿಗ್​ಬಾಸ್​ಗೆ ವೈಲ್ಡ್​​ ಕಾರ್ಡ್​​ ಎಂಟ್ರಿ ಕೊಟ್ಟು ಸಮೀರ್​ ಆಚಾರ್ಯನ ಕಪಾಳಕ್ಕೆ ಬಾರಿಸಿದ್ದ ಸಂಯುಕ್ತ ಈಗ ಯಾವ ರಾದ್ದಂತ ಮಾಡಿಕೊಳ್ಳುತ್ತಾಳೋ ಕಾದು ನೋಡ್ಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top