fbpx
ಮನೋರಂಜನೆ

ಕಾಸ್ಟಿಂಗ್ ಕೌಚ್ ಪುರಾಣ ,ಬೆಚ್ಚಿ ಬಿಳಿಸೋ ಸತ್ಯ ಹೊರಹಾಕಿದ ಎರಡನೇ ಸಲ ನಾಯಕಿ

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

ಇತ್ತೀಚಿಗೆ ಕಾಸ್ಟಿಂಗ್ ಕೌಚ್ ವಿರುದ್ಧ ರೊಚ್ಚಿಗೆದ್ದು ನಡುರಸ್ತೆಯಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಇಡೀ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಅದಾದೇಟಿಗೆ ಹಲವು ಚಿತ್ರರಂಗದ ನಟಿಯರೂ ಕೂಡ ಚಿತ್ರರಂಗದಲ್ಲಿ ತಮಗಾಗುತ್ತಿರುವ ಚಿತಾಹಿಂಸೆಯನ್ನು ಒಂದರ ಹಿಂದೊಂದರಂತೆ ಬಿಚ್ಚಿಡುತ್ತಾ ಬಂದಿದ್ದಾರೆ.

ಈಗ ಎರಡನೇ ಸಲ ಚಿತ್ರದ ನಾಯಕಿ ಸಂಗೀತ ಭಟ್​ ಸರದಿ ,ಸಂಗೀತ ಚಿತ್ರರಂಗದಲ್ಲಿ ಕೆಲ ಕುಮುಕರಿಂದ ಆದ ಹಿಂಸೆ ಹಾಗೂ ಶೋಷಣೆಯನ್ನು ಹಚ್ಚಿಕೊಂಡಿದ್ದಾರೆ ,”ನನಗೆ ಮೀಟೂ ಅ ಭಿಯಾನದಲ್ಲಿ ನನಗಾದ ಅನುಭವಗಳನ್ನು ಹಂಚಿಕೊಳ್ಳೋಕೆ ವೇದಿಕೆ ಸಿಕ್ಕಿತು. ನಾನು ನಿದ್ರೆ ಇಲ್ಲದೇ ಕಳೆದ ರಾತ್ರಿಗಳು ಅದೆಷ್ಟೋ, ಬಿಕ್ಕಳಿಸಿ ಅತ್ತಂತಹ ಕೆಟ್ಟ ರಾತ್ರಿಗಳನ್ನು ಇಲ್ಲಿ ಹಂಚಿಕೊಳ್ಳೋಕೆ ಬಂದಿದ್ದೇನೆ. ಆ ನೋವಿನ ಕಥೆಗಳನ್ನು ಎಲ್ಲಾದರೊಮ್ಮೆ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಬೇಕು ಅನ್ನೋ ನಿರ್ಧಾರಕ್ಕೆ ಕೊನೆಗೂ ಮೀ ಟೂ ಅಭಿಯಾನ ಫ್ಲಾರ್ಟ್​ಫಾರ್ಮ್​ ಆಯ್ತು. ಅಂತೂ ಇಂತೂ ಕಾಮಪಿಶಾಚಿಗಳ ಮುಖವಾಡವನ್ನು ತೆರೆದಿಡ್ತಿದ್ದೇನೆ” ಎಂದು ಕನ್ನಡದ ನಟಿ ಸಂಗೀತ ಭಟ್​ಹೇಳಿಕೊಂಡಿದ್ದಾರೆ.ಎಷ್ಟೋ ನಟರು, ನಿರ್ದೇಶಕರು,ನನ್ನನ್ನು ಅವಕಾಶವಂಚಿತಳನ್ನಾಗಿ ಮಾಡಿದ್ದಾರೆ. ನಾನು ಕಮಡ ಕನಸಿಗೆ ತಣ್ಣೀರೆರಚಿ , ನನ್ನನ್ನು ಸಿನಿಮಾದಿಂದಲೇ ದೂರ ಮಾಡಿದ್ರು. ಇಲ್ಲಿ ನಾನು ಹೇಳುವ ಕಥೆ ಪಬ್ಲಿಸಿಟಿಗಾಗಿ ಅಲ್ಲ, ಸಹಾನುಭೂತಿ ಪಡೆಯಲಿಕ್ಕಾಗಿ ಅಲ್ಲ, ಬದಲಿಗೆ ನನ್ನ ಮನಸ್ಸನ್ನು ಹಗುರ ಮಾಡಿಕೊಳ್ಳೋಕೆ ನಾನು ನನ್ನ ಕಥೆ ಇಲ್ಲಿ ಹೇಳುತ್ತಿದ್ದೇನೆ ಅಷ್ಟೆ.

 

 

 

ನನ್ನ ಫ್ಯಾಷನ್​ಗಾಗಿ ನಟನೆಯ ಜಾಡು ಹಿಡಿದು ಸಿನಿಮಾ ರಂಗಕ್ಕೆ ಬಂದೆ. ನನಗಾಗ ಕೇವಲ 15 ಹಾಗಿತ್ತು. ತನ್ನ ಕಾರಿನಲ್ಲಿ ನಿರ್ದೇಶಕರೊಬ್ಬರು ನನ್ನ ಬಳಿ ಬಂದು ನನ್ನ ಮೈ ಮುಟ್ಟಲು ಪ್ರಯತ್ನಿಸಿದರು. ಆದರೆ ನನ್ನ ಮುಟ್ಟದೆಯೇ ತಾವೇ ಹೋಗಿ ಸ್ಖಲನ ಮಾಡಿಕೊಂಡ್ರು. ಅಲ್ದೇ ಇದು ಸಾಮಾನ್ಯ ಅಂದ್ರು, ಆಗ ನಾನು ಬೆಚ್ಚಿ ಬಿದ್ದೆ. ಅದೇನು ಆಗುತ್ತಿದೆ ಎಂಬ ಅರಿವು ಕೂಡ ನನಗಿರಲಿಲ್ಲ. ಆ ನಂತರ ಜನಪ್ರಿಯ ನಿರ್ದೇಶಕರು ಮತ್ತು ಅವರ ಸಹಾಯಕ ನಿರ್ಧೇಶಕರು ನಮ್ಮ ಮನೆ ಊಟ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ರು. ನಾನು ಮತ್ತು ನನ್ನ ತಾಯಿ ಇಬ್ರೂ ಕರೆದು ಊಟ ಹಾಕಿದೆವು. ಆದರೆ ಅವರು ನಮ್ಮ ಮನೆಯನ್ನು ಸಂಪೂರ್ಣ ಕುಡುಕರ ಅಡ್ಡೆ ಮಾಡಿಕೊಂಡ್ರು. ಅಲ್ಲದೇ ನನ್ನ ರೂಂಗೆ ಬಂದು ಅಸಭ್ಯವಾಗಿ ವರ್ತಿಸೋಕೆ ಶುರು ಮಾಡಿದ್ರು. ನಾನು ಮತ್ತು ಅಮ್ಮ ಹೊರಗೆ ಓಡಿ ಹೋದ್ವಿ.ಅವರು ಹೋಗೋ ತನಕ ನಾವು ಟೆರೆಸ್​ ಮೇಲೆ ಬಚ್ಚಿಟ್ಟುಕೊಂಡೆವು. ಸಿನಿಮಾ ಮುಗಿಯುತ್ತಾದ್ರೂ ಸಿನಿಮಾ ರಿಲೀಸ್​ ಆಗಲೇ ಇಲ್ಲ.

ಪೊಲೀಸ್​ ಸಿನಿಮಾ ಮಾಡಿದ ಖ್ಯಾತ ನಿರ್ಮಾಪಕನೊಬ್ಬ ನನ್ನ ರೂಂ ಮೇಟ್​ ಜೊತೆ ಡೇಟಿಂಗ್​ ಮಾಡ್ತಿದ್ದ, ಅಲ್ದೇ ನೀನು ನನ್ನ ಜೊತೆ ಒಂದು ರಾತ್ರಿ ಕಳೀ, ನೀನು ನನಗೆ ಸ್ಖಲನ ಮಾಡ್ತೀಯಾ ಅಂತಾ ಕೇಳಿದ್ದ, ಆದರೆ ನಾನು ಅವನನ್ನು ಅಣ್ಣನೆಂದು ಕರೆಯುತ್ತಿದ್ದೆ, ಪ್ರತೀ ಬಾರಿಯೂ ನಾನು ಅವನಿಗೆ ರಾಖಿ ಕಟ್ತಿದ್ದೆ,ಅವನು ಹೇಳಿದ್ದನ್ನೆಲ್ಲಾ ನನ್ನ ರೂಂ ಮೇಟ್​ಗೆ ಹೇಳಿದೆ. ಆದರೆ ಆಕೆ ನನ್ನನ್ನು ಮನೆಯಿಂದ ಓಡಿಸಿದಳು.ಇನ್ನು ಕನ್ನಡದ ಒಂದು ಸಿನಿಮಾಗಾಗಿ ಅವಕಾಶ ಬಂತು. ಆ ಸಿನಿಮಾದ ಹೀರೋ ನನ್ನೊಂಗೆ ಇನ್ಸ್​ಟ್ರಾಗ್ರಾಂ ನಲ್ಲಿ ನಂ ಪಡೆದು, ಮೆಸೇಜ್​ ಮಾಡಲು ಆರಂಭಿಸಿದ. ರ್ಯಾಂಪ್​ ಬಿಲ್ಡ್​ಅಪ್​ಗೆ ಎಂದು ಮೊದಲು ಹೇಳಿ ಆ ನಂತರ ನೀನು ವರ್ಜಿನ್​ ನ್ನಾ ಅಂತಾ ಕೇಳಿದ. ಇದನ್ನು ಕೇಳಿ ಕ್ಷಣ ನಾನು ಶಾಕ್​ ಆದೆ. ಹೀಗೆ ಎಷ್ಟೋ ಕಹಿ ಅನುಭವಗಳು ನನ್ನನ್ನು ಕಾಡಿ, ಸಿನಿಮಾ ಬಿಡುವಂತೆ ಮಾಡಿದವು. ನಾನು ನಾನಾಗೇ ಇರುವುದಕ್ಕೆ ಇದು ಬಿಟ್ಟರೆ ದಾರಿಯಿಲ್ಲವೆನಿಸಿ, ನಾನು ಸಿನಿಮಾದಿಂದ ದೂರವಾದೆ.

 

 

 

ಇನ್ನೊಮ್ಮೆ ಕೇಶ ವಿನ್ಯಾಸಕಿಯೊಬ್ಬಳು, ನನ್ನ ಬಳಿ ಬಂದು ನನ್ನನ್ನು ಮುಟ್ಟುತ್ತಾ, ಬಟ್ಟೆಯೊಳಗೆ ಕೈ ಹಾಕಿದಳು. ಇದನ್ನು ವಿರೋಧಿಸಿದ ನನಗೆ ಬೇರೆಯದ್ದೇ ರೀತಿಯಲ್ಲಿ ಸೇಡು ತೀರಿಸಿಕೊಂಡಳು. ನಾನು ಅವಳನ್ನು ಬೈಯ್ದ ಮೇಲೆ, ನನ್ನ ಬಳಿ ಕ್ಷಮೆಯಾಚಿಸಿದಳು. ಅಷ್ಟಕ್ಕೆ ಸುಮ್ಮನಾಗದೇ ನನಗೆ ಅವಕಾಶ ಕೊಡಿಸುವುದಾಗಿ ಜನಪ್ರಿಯ ನಿರ್ಧೇಶಕರ ಬಳಿ ಕಳುಹಿಸಿದಳು. ಅವರು ನನ್ನ ಹೊಟೇಲ್​ಗೆ ಕರೆದು, ಆ ಕೇಶ ವಿನ್ಯಾಸಕಿ ಎಲ್ಲವೂ ಹೇಳಿದ್ದಾಳೆ, ನೀನು ಮುಗ್ದೇ ಥರಾ ನಾಟಕ ಮಾಡಬೇಡ.ನನ್ನೊಂದಿಗೆ ಹೊಂದಿಕೋ ಎಂದು ಪೀಡಿಸಿದ.ಆತನ ಮಗಳು ಕೂಡ ಒಬ್ಬ ನಟಿ. ನಾನು ಅಲ್ಲಿಂದ ಹೊರ ಬಂದೆ. ಸದ್ಯ ನನ್ನ ಹೆಬ್ಬಯಕೆ ನಟನೆ ಬಿಟ್ಟಿಲ್ಲ. ನಾನು ಕಿರುಚಿತ್ರಗಳನ್ನು ಂಆಡುತ್ತಿದ್ದೇನೆ, ನನ್ನದೇ ಜೀವನದಲ್ಲಿ ಸಾಗುತ್ತಿದ್ದೇನೆ. ಆದರೆ ಇಲ್ಲಿ ಯಾರೊಬ್ಬರ ಹೆಸರು ಕೂಡ ನಾನು ಹೇಳಿಲ್ಲ, ಏಕಂದ್ರೆ ನಾನು ನನ್ನ ಪ್ರಾಣ ಮತ್ತು ಜೀವನವನ್ನು ನಂಬಿದವಳು. ಅವರ ಜೀವನಕ್ಕೆ ಮುಳ್ಳಾಗಲು ಇಷ್ಟವಿಲ್ಲ. ಅವರ ತಪ್ಪು ಖಂಡಿತಾ ಅವರಿಗೆ ಅರಿವಾಗುತ್ತೆ.ನನಗೆ ನನ್ನ ಪತಿ ಸಹಾಯ ಮಾಡುತ್ತಿದ್ದಾರೆ ಸದ್ಯ ನಾನು ಇದನ್ನೆಲ್ಲಾ ಃಏಳಿ ಮನಸ್ಸು ಹಗುರ ಮಾಡಿಕೊಂಡಿದ್ದೇನೆ, ತಲೆಯಿಂದ ಮಾತ್ರ ತೆಗೆದುಹಾಕಿಲ್ಲವೆನ್ನುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top