fbpx
ದೇವರು

ಜ್ಞಾನದಾತೆ ಸರಸ್ವತಿಯನ್ನು ಮೂಲ ನಕ್ಷತ್ರದ ದಿನ ಏಕೆ ಪೂಜಿಸುತ್ತಾರೆ ,ಈ ತಾಯಿಯ ಜನನದ ಹಿಂದೆ ಇರುವ ನಿಗೂಢ ರಹಸ್ಯವೇನು ಗೊತ್ತಾ

ನವ ರಾತ್ರಿಯಲ್ಲಿ ಸಪ್ತಮಿಯ ದಿನ ಜ್ಞಾನದಾತೆ ಸರಸ್ವತಿಯನ್ನು ಪೂಜಿಸಬೇಕು.ಒಬ್ಬ ಕುರಿ ಕಾಯುವವನು, ಪರಮ ದಡ್ಡನೂ, ಸರಸ್ವತಿಯ ಕೃಪೆಯಿಂದ ಪರಮ ಜ್ಞಾನಿಯಾದ ಇಂತಹ ಅದ್ಭುತ ಚಮತ್ಕಾರ ಸಾಧ್ಯವಾಗುವುದು ಪರಮ ದೇವತೆ ವಿದ್ಯಾಧಿದೇವತೆ ಜ್ಞಾನ ದೇವತೆಯ ಆಶೀರ್ವಾದವಿದ್ದರೆ ಮಾತ್ರ ಇದೆಲ್ಲಾ ಸಾಧ್ಯ, ಇಂದೂಗಳ ಜ್ಞಾನದೇವತೆ ಸರಸ್ವತಿ, ಈಕೆ ಶ್ವೇತ ವರ್ಣೆಯವಳು, ಅತ್ಯಂತ ಸುಂದರ, ಚತುರ್ವೇದಗಳಲ್ಲಿ ಅತ್ಯಂತ ಪ್ರಾಚೀನವಾದ ಋಗ್ವೇದ, 3,500 ವರ್ಷಗಳಷ್ಟು ಪ್ರಾಚೀನತೆ ಋಗ್ವೇದಕ್ಕೆ ಇದೆ. ಇದು ಸರಸ್ವತಿಯ ಮೂಲ ಸ್ವರೂಪವನ್ನು ತಿಳಿಯುವಲ್ಲಿ ನಮಗೆ ಇರುವ ಅತ್ಯಂತ ಪ್ರಾಚೀನ ವೇದವು ಹೌದು. ಇಂತಹ ಋಗ್ವೇದದಲ್ಲಿ ಸರಸ್ವತಿ ಪ್ರಾಚೀನ ದೇವತೆಯಾಗಿ ಸೃಷ್ಟಿ ಕೊಂಡಿದ್ದಾಳೆ.

ಋಗ್ವೇದದ ಪ್ರಕಾರ ಸರಸ್ವತಿಯ ಪೂಜಾ ಫಲಗಳು.
ಸರ್ವ ರಕ್ಷಕಳಾಗಿರುವ ಸರಸ್ವತಿ ದಾನ ಮಾಡುವವರಿಗೆ ಉತ್ತಮ ವರದಾನ ನೀಡುತ್ತಾಳೆ, ಹಾಗೂ ಉನ್ನತ ಜ್ಞಾನವನ್ನು ದಯಪಾಲಿಸುತ್ತಾಳೆ. ಮೂಲ ನಕ್ಷತ್ರದ ದಿನ ಅವಳನ್ನು ಪೂಜಿಸುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಸರಸ್ವತಿಯ ಪಾತ್ರ ಅತ್ಯಂತ ಮಹತ್ವದ್ದು, ನಮ್ಮ ಭಾರತದ ಪವಿತ್ರ ನದಿ ಸರಸ್ವತಿ. ಈ ನದಿಗೆ ಸಾಕ್ಷಾತ್ ಸರಸ್ವತಿ ದೇವಿಯ ಅನುಗ್ರಹವಿದೆ. ಅಷ್ಟೇ ಅಲ್ಲ ಇದು ವೇಗವಾಗಿ ಹರಿಯುವ ನದಿ, ದೇವಿ ಸ್ವರೂಪವದ ಸರಸ್ವತಿ ನದಿಯ ಪೂಜೆಯಿಂದ ನಮ್ಮಲ್ಲೂ ವಿದ್ಯಾ, ಬುದ್ಧಿ ವೇಗವಾಗಿ ಹರಿಯುತ್ತದೆ.

 

 

 

ಸರಸ್ವತಿಯ ರೂಪ.
ಇವಳ ಜೊತೆಯಲ್ಲಿ ಸದಾ ನವಿಲು ಇರುತ್ತದೆ, ನವಿಲು ಗರ್ವ, ಚಂಚಲತೆ ಮತ್ತು ಸೌಂದರ್ಯದ ಸಂಕೇತ. ಸರಸ್ವತಿ ದೇವಿ ಹಂಸ ಮತ್ತು ನವಿಲುಗಳ ನಡುವೆ ವಿರಾಜಮಾನಳಾಗಿ ಇವೆರಡರ ನಡುವೆ ಸಮತೋಲನ ಕಾಪಾಡಿಕೊಳ್ಳುವುದನ್ನು ಸೂಚಿಸುತ್ತಾಳೆ. ಚತುರ್ಭುಜಗಳನ್ನು ಹೊಂದಿರುವ ಇವಳು ಎರಡು ಕೈಗಳಲ್ಲಿ ವೀಣೆ, ಮೂರನೇ ಕೈಯಲ್ಲಿ ಜಪಮಾಲೆ, ನಾಲ್ಕನೆಯ ಕೈಯಲ್ಲಿ ಪುಸ್ತಕವನ್ನು ಹಿಡಿದಿದ್ದಾಳೆ. ಬಿಳಿ ತಾವರೆಯ ಮೇಲೆ ಶ್ವೇತ ವಸ್ತ್ರ ಧರಿಸಿ ಶುಭ್ರವಾಗಿ ಕುಳಿತಿದ್ದಾಳೆ. ಪ್ರತಿಯೊಬ್ಬರಿಗೂ ಸರಸ್ವತಿ ಪುತ್ರರಾಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಜ್ಞಾನ ದೇವತೆಯ ಆಶೀರ್ವಾದವಿದ್ದರೆ ಅಂದುಕೊಂಡದ್ದನ್ನು ಸಾಧಿಸಬಹುದು. ಈ ತಾಯಿಯ ಒಲುಮೆ ನಮ್ಮ ಮೇಲೆ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ, ಕೀರ್ತಿ, ಐಶ್ವರ್ಯ ಎಲ್ಲವೂ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ವಿದ್ಯಾದೇವತೆಗೆ ಇದು ನವರಾತ್ರಿಯ ಸುಸಂದರ್ಭ. ನವರಾತ್ರಿಯ ಏಳನೇ ದಿನ ಸರಸ್ವತಿ ದೇವಿಯನ್ನು ಆರಾಧನೆ ಮಾಡಲಾಗುತ್ತದೆ . ಈ ದಿನ ಸರಸ್ವತಿ ದೇವಿಗೆ ಶ್ರೇಷ್ಠ ದಿನ. ಸರಸ್ವತಿ ದೇವಿಯದ್ದು ಮೂಲಾ ನಕ್ಷತ್ರ, ಹೀಗಾಗಿ ಮೂಲ ನಕ್ಷತ್ರದ ದಿನ ಸರಸ್ವತಿಯ ಆರಾಧನೆ ಮಾಡಿದರೆ ಅವಳ ಕೃಪೆಗೆ ಬೇಗ ಪಾತ್ರರಾಗಬಹುದು.

ಸರಸ್ವತಿಯ ಸ್ತೋತ್ರ.
“ಸರಸ್ವತಿ ನಮಸ್ತುಭ್ಯಂ , ವರದೇ ಕಾಮರೂಪಿಣಿ, ವಿದ್ಯಾರಂಭಂ ಕರಿಷ್ಯಾಮಿ, ಸಿದ್ದಿರ್ಭವತು ಸದಾ”ಸರಸ್ವತಿ ಬ್ರಹ್ಮನ ಶಕ್ತಿ, ಸಮಸ್ತ ಸೃಷ್ಟಿಯ ಜಗನ್ಮಾತೆ ,ಇವಳನ್ನು ದುರ್ಗಾದೇವಿ ,ವೀಣಾಪಾಣಿ, ಮಸ್ತಕದಾರಿ, ಮಹಾಸರಸ್ವತಿ ಹೀಗೆ ಅನೇಕ ಹೆಸರುಗಳಿಂದ ಪೂಜಿಸಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಸರಸ್ವತಿಯ ಆರಾಧನೆ ಅತ್ಯಂತ ಶ್ರೇಯಸ್ಕರ.

 

ವಿದ್ಯಾಧಿದೇವತೆ ಸರಸ್ವತಿ ಯಾರು ? ಅವರ ಜನನ ಹೇಗಾಯಿತು ? ನವರಾತ್ರಿಯಲ್ಲಿ ಸರಸ್ವತಿ ಪೂಜೆಯನ್ನು ಮಾಡುವುದು ಏಕೆ ?
ಇದರ ಬಗ್ಗೆ ನೋಡುವುದಾದರೆ ಹಲವು ರೋಚಕ ವಿಷಯಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಸರಸ್ವತಿ ದೇವಿ ಯಾರು ? ನಮ್ಮ ಮಹಾವಿಷ್ಣುವಿನ ನಾಭಿಯ ಕಮಲದಿಂದ ಬ್ರಹ್ಮ ಜನಿಸುತ್ತಾನೆ. ಆನಂತರ ಮಹಾವಿಷ್ಣು ಬ್ರಹ್ಮನಿಗೆ ಸೃಷ್ಟಿಯ ಕಾರ್ಯವನ್ನು ವಹಿಸುತ್ತಾನೆ. ಮೊದಲು ಬ್ರಹ್ಮ ಮೂಲ ನಕ್ಷತ್ರದಲ್ಲಿ ಸರಸ್ವತಿಯನ್ನು ಸೃಷ್ಟಿಸಿದ. ಹೀಗೆ ತಾನು ನಿರ್ಮಿಸಿದ ಸರಸ್ವತಿಯನ್ನು ಮುಂದೆ ಒಂದು ದಿನ ಬ್ರಹ್ಮನೇ ವಿವಾಹವಾಗುತ್ತಾನೆ.
ಶುಂಭ-ನಿಶುಂಭರನ್ನು ವಧಿಸಿದವಳೇ ಸರಸ್ವತಿ. ಮಹಿಷಾಸುರನ ಜೊತೆ ಯುದ್ಧ ಆರಂಭವಾದಾಗ ತ್ರಿಶಕ್ತಿಗಳು ಅವನನ್ನು ಸಂಹರಿಸಿದರು. ಮಹಿಷಾಸುರನನ್ನು ಸಂಹರಿಸಿದ ಮೂರು ಶಕ್ತಿಗಳೆಂದರೆ ಮಹಾಲಕ್ಷ್ಮಿ, ಮಹಾಸರಸ್ವತಿ ಮತ್ತು ಮಹಾಗೌರಿ. ಚಂಡ-ಮುಂಡರನ್ನು ಚಾಮುಂಡಿಯಾಗಿ, ಮಹಾ ಗೌರಿಯು ಸಂಹರಿಸಿದಳು. ಶುಂಭ-ನಿಶುಂಭರನ್ನು ಸರಸ್ವತಿ ಸಂಹರಿಸುತ್ತಾಳೆ. ಮಹಿಷಾಸುರನನ್ನು ಮಹಿಷ ಮರ್ದಿನಿಯಾಗಿ ಮಹಾಲಕ್ಷ್ಮಿ ಸಂಹರಿಸುತ್ತಾಳೆ. ನವರಾತ್ರಿಯಲ್ಲಿ ರಾಕ್ಷಸರ ವದೆ ಮಾಡಿದ ದೇವಿಯನ್ನು ಪೂಜಿಸಲಾಗುತ್ತದೆ.
ಸರಸ್ವತಿಯ ವರಪುತ್ರರಾಗಲು ಏನು ಮಾಡಬೇಕು ? ಯಾವ ಮಂತ್ರ ಮತ್ತು ಸ್ತೋತ್ರ ಪಠನೆಯಿಂದ ಸರಸ್ವತಿಯ ಆಶೀರ್ವಾದ ಸಿಗುತ್ತದೆ. ನವರಾತ್ರಿಯ ಏಳನೇ ದಿನ ಸರಸ್ವತಿಯ ಪೂಜೆಗೆ ವಿಶೇಷವಾದ ದಿನ. ಮೂಲಾ ನಕ್ಷತ್ರದಲ್ಲಿ ಸರಸ್ವತಿಯನ್ನು ಪೂಜಿಸುವ ವಿಧಾನ ಅನಾದಿ ಕಾಲದಿಂದ ನಡೆದು ಬಂದಿದೆ.

 

 

 

ಸರಸ್ವತಿಯ ಪೂಜಾ ವಿಧಾನ.
ಪ್ರಾತಃಕಾಲ ಸರಸ್ವತಿ ಆರಾಧನೆಗೆ ಶ್ರೇಷ್ಠವಾದ ಸಮಯ. ಪುಸ್ತಕ, ಲೇಖನಿಯನ್ನು ಇಟ್ಟು ಪೂಜಿಸಿ ಮೊದಲು ಗಣಪತಿಯನ್ನು ಪ್ರಾರ್ಥಿಸಿ, ಗುರುವಿಗೆ ವಂದನೆ ಸಲ್ಲಿಸಿ, ಸರಸ್ವತಿಯ ಆವಾಹನೆ ಮಾಡಿ ಶೋಡಷೋಪಚಾರ ಪೂಜೆಯನ್ನು ಸಲ್ಲಿಸಿ, ದೇವಿಗೆ ಮಂಗಳ ದ್ರವ್ಯಗಳನ್ನು ಅರ್ಪಿಸಿ, ಕುಂಕುಮ ಪುಷ್ಪಗಳಿಂದ ದೇವಿಗೆ ಅಷ್ಟೋತ್ತರವನ್ನು ಪಠಣೆ ಮಾಡಿ, ದೇವಿಗೆ ನೈವೇದ್ಯ ಅರ್ಪಿಸಿ, ಸರಸ್ವತಿ ಪೂಜೆಯ ದಿನ ದಾನಕ್ಕೆ ವಿಶೇಷವಾದ ಮಹತ್ವವಿದೆ. ಅವಶ್ಯಕತೆ ಇರುವವರೆಗೆ ಲೇಖನಿ, ಪುಸ್ತಕ ಸಾಮಗ್ರಿಗಳನ್ನು ದಾನ ಮಾಡಬೇಕು. ಪುಸ್ತಕ, ಪೆನ್ನು, ಬಟ್ಟೆಯನ್ನು ದಾನ ಮಾಡಿಸಿ, ಇದರಿಂದ ಸರಸ್ವತಿಯ ಪೂರ್ಣ ಅನುಗ್ರಹ ಮಕ್ಕಳ ಮೇಲೆ ಆಗುತ್ತದೆ.

ನವರಾತ್ರಿಯಲ್ಲಿ ಅಕ್ಷರಾಭ್ಯಾಸದ ಪ್ರಾಮುಖ್ಯತೆ ಏನು ?
ವಿದ್ಯಾರಂಭ ಎನ್ನುವುದು ಒಂದು ಸಂಸ್ಕಾರ. ಶಿಕ್ಷಣಕ್ಕೆ ಅಡಿಪಾಯವೇ ಅಕ್ಷರಾಭ್ಯಾಸ. ವಿಜಯದಶಮಿಯ ದಿನ ಶ್ರವಣ ನಕ್ಷತ್ರದಲ್ಲಿ ಅಕ್ಷರ ಅಭ್ಯಾಸ ಮಾಡಿಸುವುದು ಅತ್ಯಂತ ಶ್ರೇಯಸ್ಕರ ಎಂದು ಹೇಳಲಾಗುತ್ತದೆ. ಅಕ್ಷರಜ್ಞಾನ ದೊರೆತ ಮಕ್ಕಳು ಸರಸ್ವತಿಯ ವರಪುತ್ರರಾಗುತ್ತಾರೆ ಎನ್ನುವ ನಂಬಿಕೆ ಇದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top