ಸಿನಿಮಾ

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಆಸ್ಪತ್ರೆಗೆ ದಾಖಲು.

ಕನ್ನಡ ಚಿತ್ರರಂಗದ ಎನರ್ಜಿಟಿಕ್ ಹೀರೋ ಅಂತಲೇ ಕರೆಸಿಕೊಳ್ಳುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 56ರ ಹರೆಯದಲ್ಲೂ ಯುವಕರನ್ನು ನಾಚಿಸುವಂತೆ ಡ್ಯಾನ್ಸ್, ಫೈಟ್ಸ್ ಮಾಡುವ ಶಿವರಾಜಕುಮಾರ್ ಅನಾರೋಗ್ಯದಿಂದಾಗಿ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸದ್ಯ ಜ್ವರದಿಂದ ಬಳಲುತ್ತಿರುವ ಶಿವಣ್ಣ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ ಶಿವಣ್ಣ ಅವರು ನಿನ್ನೆ ಮಧ್ಯರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳು ಆತಂಕಗೊಳ್ಳುವ ಯಾವ ಗಂಭೀರ ಸಮಸ್ಯೆಗಳೇನು ಆಗಿಲ್ಲ ಎನ್ನಲಾಗಿದೆ.

ಸಧ್ಯ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಬಿಡುಗಡೆಗೆ ಸಿದ್ಧವಾಗಿದ್ದು ಇದರೊಂದಿಗೆ ರುಸ್ತುಂ, ಕವಚ, ದ್ರೋಣ ಚಿತ್ರಗಳೂ ಒಂದಷ್ಟು ಭಾಗಗಳ ಚಿತ್ರೀಕರಣವನ್ನು ಮುಗಿಸಿಕೊಂಡಿವೆ. ಚಿತ್ರರಂಗದಲ್ಲಿ ಫುಲ್‌ ಬ್ಯುಸಿಯಾಗಿರುವ ಶಿವಣ್ಣ ತುಸು ಆಯಾಸಗೊಂಡಿದ್ದರಿದ ಜ್ವರ ಬಂದಿದ್ದು ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಶಿವರಾಜ್​ ಕುಮಾರ್​ ಜೊತೆ ಆಸ್ಪತ್ರೆಯಲ್ಲಿ ಕುಟುಂಬ ಸದಸ್ಯರಿದ್ದು, ಈಗಾಗಲೇ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್​ ರಾಜ್​ಕುಮಾರ್​ ಶಿವರಾಜ್​​ ಕುಮಾರ್​​ ಆರೋಗ್ಯ ವಿಚಾರಿಸಿ ತೆರಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top