ದೇವರು

ನವರಾತ್ರಿಯ ಸಮಯದಲ್ಲಿ ಮನೆಯ ಮುಖ್ಯದ್ವಾರಕ್ಕೆ ಈ ಗಂಟನ್ನು ಕಟ್ಟಿದರೆ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತಂತೆ

ನವರಾತ್ರಿಯಲ್ಲಿ ದೇವಿಯ ನಾಮವನ್ನು ಸ್ಮರಿಸಿದರೆ ಸಾಕು, ನಮ್ಮ ಕಷ್ಟಗಳು ದೂರವಾಗುತ್ತವೆ. ಆದಿಪರಾಶಕ್ತಿಯನ್ನು ತುಂಬಾ ನಿಷ್ಠೆಯಿಂದ ಪೂಜಿಸುವ ಶುಭ ದಿನವೇ ನವರಾತ್ರಿಗಳು. ನವರಾತ್ರಿಗಳಲ್ಲಿ ಅಷ್ಟಮಿಗೆ ತುಂಬಾ ಪ್ರಾಮುಖ್ಯತೆ ಇದೆ. ದುರ್ಗಾಷ್ಟಮಿ ತುಂಬಾ ವಿಶಿಷ್ಟವಾದ ದಿನ ಈ ದಿನ ದೇವಿಯನ್ನು ಪೂಜಿಸುವವರಿಗೆ ಯಾವ ಕಷ್ಟಗಳು ಬರುವುದಿಲ್ಲ, ಹಾಗೆಯೇ ತಮ್ಮ ಎಲ್ಲಾ ಕೋರಿಕೆಗಳು ಸಹ ನೆರವೇರುತ್ತವೆ.

 

 

 

ಆರ್ಥಿಕ ಸಮಸ್ಯೆಗಳು, ಕೆಟ್ಟ ದೃಷ್ಟಿಗಳ ಪ್ರಭಾವ ಮತ್ತು ಇತರೆ ಸಮಸ್ಯೆಗಳಿಂದ ಬಳಲುತ್ತಿರುವವರು ಈ ವಿಶಿಷ್ಟವಾದ ದುರ್ಗಾಷ್ಟಮಿಯ ದಿನ ಈಗ ನಾವು ಹೇಳುವ ಪರಿಹಾರವನ್ನು ಮಾಡಿದರೆ ಸಾಕು ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಮೊದಲಿಗೆ ದುರ್ಗಾಷ್ಟಮಿಯ ದಿನ ಸೂರ್ಯೋದಯಕ್ಕೆ ಮುಂಚೆ ಎದ್ದು ತಲೆ ಸ್ನಾನವನ್ನುಮಾಡಬೇಕು, ಒಳ್ಳೆಯ ವಸ್ತ್ರವನ್ನು ಧರಿಸಬೇಕು. ಅಷ್ಟಮಿ ತಿಥಿ ಪ್ರಾರಂಭ ಆದ ಮೇಲೆ ಈ ಪೂಜೆಯನ್ನು ಮಾಡಿದರೆ ಒಳ್ಳೆಯದು. ದೇವರ ಮನೆಯಲ್ಲಿ ದುರ್ಗಾ ದೇವಿಯ ಫೋಟೋವನ್ನು ಮೊದಲಿಗೆ ಸ್ವಚ್ಛ ಮಾಡಿಕೊಳ್ಳಬೇಕು, ನಂತರ ದೇವಿಯ ಫೋಟೋ ಮುಂದೆ ಒಂದು ಕೆಂಪು ಬಣ್ಣದ ವಸ್ತ್ರವನ್ನು ಇಡಬೇಕು.
ಇದರ ಮೇಲೆ ಒಂದು ತೆಂಗಿನ ಕಾಯಿಯನ್ನು ಇಡಬೇಕು, ಈ ತೆಂಗಿನಕಾಯಿಗೆ ಗಂಧ ಮತ್ತು ಕುಂಕುಮವನ್ನು ಹಚ್ಚಬೇಕು ಹಾಗೆಯೇ ಸ್ವಲ್ಪ ಕರ್ಪೂರ ಮತ್ತು ಎರಡು ಏಲಕ್ಕಿಯನ್ನು ಇಡಬೇಕು. ಹಸುವಿನ ತುಪ್ಪದಿಂದ ದೀಪಾರಾಧನೆ ಮಾಡಿ ಪೂಜೆಯನ್ನು ಪ್ರಾರಂಭಿಸಬೇಕು, ಹೀಗೆ ಪೂಜೆಯನ್ನು ಪ್ರಾರಂಭಿಸುವಾಗ ನಿಮ್ಮ ದುಃಖ ದೂರವಾಗಬೇಕು ಎಂದು ಸಂಕಲ್ಪ ಮಾಡಿಕೊಳ್ಳಬೇಕು. ನಂತರ ದೇವಿಯ ಅಷ್ಟೋತ್ತರವನ್ನು ಪಠಿಸಬೇಕು, ಕೊನೆಯಲ್ಲಿ ಆರತಿ ಬೆಳಗಬೇಕು.

ಹೀಗೆ ಪೂಜೆ ಪೂರ್ತಿಯಾದ ನಂತರ ತೆಂಗಿನಕಾಯಿ, ಏಲಕ್ಕಿ, ಕರ್ಪೂರವನ್ನು ಒಂದು ಕೆಂಪು ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಬೇಕು ನಂತರ ಇದನ್ನು ಮನೆಯ ಮುಖ್ಯದ್ವಾರದ ಬಲಗಡೆಯಲ್ಲಿ ಕಟ್ಟಬೇಕು. ಕೆಲವು ದಿನಗಳ ನಂತರ ಆ ತೆಂಗಿನ ಕಾಯಿಯನ್ನು ತೆಗೆದು ಹರಿಯುವ ನೀರಿನಲ್ಲಿ ಬಿಡಬೇಕು. ಇಲ್ಲದಿದ್ದರೆ ಯಾರೂ ತುಳಿಯದ ಪ್ರದೇಶಗಳಲ್ಲಿ ಬಿಟ್ಟು ಬರಬೇಕು. ಹಾಗೆಯೇ ಲಕ್ಷ್ಮೀ ದೇವಿಯ ಅನುಗ್ರಹ ದೊರೆಯಬೇಕೆಂದರೆ, ನವರಾತ್ರಿಯಲ್ಲಿ ದುರ್ಗಾಷ್ಟಮಿಯ ದಿನ ಕುಮಾರಿಗೆ ಪೂಜೆಯನ್ನು ಮಾಡಬೇಕು.ಕುಮಾರಿ ಪೂಜೆಯೆಂದರೆ ಕನ್ಯೆಯಾದ ಹುಡುಗಿಯರಿಗೆ ಏಳರಿಂದ ಒಂಬತ್ತು ವರ್ಷದ ಒಳಗಿನ ಹುಡುಗಿಯರನ್ನು ಮನೆಗೆ ಕರೆಯಬೇಕು. ಇವರನ್ನು ದೇವಿಯ ಸಮಾನವೆಂದು ಭಾವಿಸಿ, ಆ ಕನ್ಯೆಯರಿಗೆ ಸಿಹಿ ಪದಾರ್ಥವನ್ನು ನೀಡಿ ಅವರಿಗೆ ಇಷ್ಟವಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಕು. ಈ ದಿನ ಹೀಗೆ ಪೂಜೆ ಮಾಡಿದರೆ ನಿಮ್ಮ ಕಷ್ಟಗಳು ದೂರವಾಗಿ ಅಷ್ಟೈಶ್ವರ್ಯಗಳು ನಿಮ್ಮದಾಗುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top