ತಿಂಡಿ ತೀರ್ಥ

ಮೈಸೂರಿನ ದಸರಾ ಹಬ್ಬದ ಸ್ಪೆಷಲ್ ಸಾಂಪ್ರದಾಯಕ ಬಾಸುಂದಿ ಮಾಡುವುದು ಹೀಗೆ .

ನವರಾತ್ರಿ ಹಬ್ಬದ ಸ್ಪೆಷಲ್ ಸಾಂಪ್ರದಾಯಕ ಬಾಸುಂದಿ ಅಥವಾ ರಿಚ್ ಕ್ರೀಮ್ ಬಾಸುಂದಿ ಮಾಡುವುದು ಹೇಗೆ ಎಂಬುವುದನ್ನು ತಿಳಿಯೋಣ ಬನ್ನಿ.

 

 

 

 

ಬೇಕಾಗುವ ಸಾಮಾಗ್ರಿಗಳು:

ಗಟ್ಟಿ ಹಾಲು (ಹೋಲ್ ಮಿಲ್ಕ್ ) -4 ಕಪ್
ಸಕ್ಕರೆ – 3 ಟೇಬಲ್ ಸ್ಪೂನ್
ಕೇಸರಿ ದಳಗಳು – 10 ರಿಂದ 15 ಹಾಲಿನಲ್ಲಿ ನೆನೆಸಬೇಕು
ಏಲಕ್ಕಿ -2

ಪಿಸ್ತಾ -10 ರಿಂದ 15
ಬಾದಾಮಿ -7 ರಿಂದ 8
ಗೋಡಂಬಿ -5 ರಿಂದ 6

ಸಾಂಪ್ರದಾಯಕ ಬಾಸುಂದಿ ಮಾಡುವ ವಿಧಾನ :

ಮೊದಲಿಗೆ ಸ್ಟೋವ್ ಮೇಲೆ ದಪ್ಪ ತಳದ ಪಾತ್ರೆ ಯನ್ನು ಇಟ್ಟುಕೊಳ್ಳಿ ನಂತರ ಅದಕ್ಕೆ ಗಟ್ಟಿ ಹಾಲನ್ನು ಅಂದರೆ (ಹೋಲ್ ಮಿಲ್ಕ್ ) ಹಾಕಿ ಸಣ್ಣ ಉರಿಯಲ್ಲಿ ಹಾಲನ್ನು ಕುದಿಯಲು ಬಿಡಬೇಕು ನಂತರ ಹಾಲು ಕನ್ನೆ ಕಟ್ಟಿರುತ್ತದೆ ಅದನ್ನು ಚೆನ್ನಾಗಿ ಕೈ ಆಡಿಸಬೇಕು ಇದನ್ನು 20 ರಿಂದ 25 ನಿಮಿಷದವರಿಗೂ ಹಾಲನ್ನು ಚೆನ್ನಾಗಿ ಕಾಯಿಸಬೇಕು ನಾವು ಹಾಲನ್ನು ಕಾಯಿಸಲು ಇಟ್ಟಿದ 1 /4 ಭಾಗದಷ್ಟು ಕಡಿಮೆ ಆಗಿರಬೇಕು ನಂತರ ಹಾಲಿಗೆ ಚೂರು ಮಾಡಿಕೊಂಡಿರುವ ಪಿಸ್ತಾ ,ಬಾದಾಮಿ,ಗೋಡಂಬಿ,ಮತ್ತು ಹಾಲಿನಲ್ಲಿ ನೆನೆಸಿರುವ ಕೇಸರಿ ದಳಗಳು ಹಾಗೂ ಸಕ್ಕರೆಯನ್ನು ಹಾಕಿ 10 ನಿಮಿಷದವರಿಗೂ ಚೆನ್ನಾಗಿ ಕುದಿಯಲು ಬಿಡಬೇಕು 4 ಕಪ್ ಹಾಲು ಇರುವುದನ್ನು 2 ಕಪ್ ಆಗುವವರಿಗೆ ಚೆನ್ನಾಗಿ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಬೇಕು ಕೊನೆಯದಾಗಿ ಏಲಕ್ಕಿ ಪುಡಿಯನ್ನು ಹಾಕಿ ಸ್ಟೋವ್ ಆಫ್ ಮಾಡಿ ಆ ಹಾಲನ್ನು ಸ್ವಲ್ಪ ತಣ್ಣಗೆ ಆಗಲು ಫ್ರೀಜ್ ನಲ್ಲಿ ಇಡಬೇಕು ತಣ್ಣಗೆ ಆದ ಮೇಲೆ ರುಚಿ ರುಚಿಯಾದ ಸವಿಯಲು ಸಾಂಪ್ರದಾಯಕ ಬಾಸುಂದಿ ರೆಡಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top