ಮನೋರಂಜನೆ

ಸ್ಪೆಷಲ್ ನ್ಯೂಸ್- ಯಜಮಾನ ಚಿತ್ರಕ್ಕೆ ವಿ.ಹರಿಕೃಷ್ಣ ಕೂಡ ನಿರ್ದೇಶಕ.

ಸಂಗೀತ ನಿರ್ದೇಶನ ಮಾಡಿಕೊಂಡು ಮತ್ಯಾವುದರತ್ತಲೂ ತಿರುಗಿ ನೋಡೋವಷ್ಟು ಪುರಸೊತ್ತಿಲ್ಲದ ಹರಿಕೃಷ್ಣ ಕಥೆ ಬರೆದರಾ ಅಂತ ಅಂತೊಂದು ಅಚ್ಚರಿ ಕಾಡೋದು ಸಹಜವೇ. ಆದರೆ ಹರಿಕೃಷ್ಣ ಅವರನ್ನು ಹತ್ತಿರದಿಂದ ಬಲ್ಲವರಿಗೆ ಈ ವಿಚಾರ ಅಂಥಾದ್ದೇನೂ ಆಶ್ಚರ್ಯ ಹುಟ್ಟಿಸೋದಿಲ್ಲ. ಅದಕ್ಕೆ ಕಾರಣ ಅವರಿಗಿರೋ ವಿಪರೀತ ಓದಿನ ಹುಚ್ಚು! ಸಂಗೀತ ನಿರ್ದೇಶನದ ಜೊತೆಗೆ ಚಿತ್ರವೊಂದರ ಇತರೇ ವಿಚಾರಗಳ ಬಗೆಗೂ ತಿಳಿದುಕೊಳ್ಳೋ ಮನಸಿನ ಹರಿಕೃಷ್ಣ ದರ್ಶನ್ ಅವರ ಯಜಮಾನ ಚಿತ್ರಕ್ಕೆ ಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರಂತೆ.. ಹೀಗೊಂದು ಬ್ರೇಕಿಂಗ್ ಸುದ್ದಿ ‘ಯಜಮಾನ’ ಚಿತ್ರತಂಡದಿಂದ ಹೊರಬಿದ್ದಿದೆ.

ಅಂದಹಾಗೆ ‘ಯಜಮಾನ’ ಚಿತ್ರವನ್ನ ನಿರ್ದೇಶನ ಮಾಡಿರುವುದು ಪಿ.ಕುಮಾರ್ ಅಲ್ವಾ ಅಂತ ನೀವು ಕೇಳಬಹುದು. ಖಂಡಿತಾ ಹೌದು, ಪೊನ್‌ಕುಮಾರ್‌ ಈ ಚಿತ್ರದ ನಿರ್ದೇಶಕರು ನಿಜ. ಆದ್ರೆ, ಪಿ.ಕುಮಾರ್ ಅವರಿಗಿಂತಲೂ ಹೆಚ್ಚಾಗಿ ನಿರ್ದೇಶನದ ಕೆಲಸಗಳನ್ನು ವಿ.ಹರಿಕೃಷ್ಣ ಅವರೇ ವಹಿಸಿಕೊಂಡಿದ್ದರಂತೆ. ಹೀಗಾಗಿ ‘ಯಜಮಾನ’ ಚಿತ್ರದ ಕ್ರೆಡಿಟ್ ಕಾರ್ಡ್ ನಲ್ಲಿ ವಿ.ಹರಿಕೃಷ್ಣಗೆ ‘ಡೈರೆಕ್ಟರ್’ ಸ್ಥಾನ ನೀಡಲಾಗಿದೆ.

ಚಿತ್ರದ ಟೈಟಲ್‌ ಕಾರ್ಡ್‌ನಲ್ಲಿ ಇಬ್ಬರು ನಿರ್ದೇಶಕರಿಗೂ ಕ್ರೆಡಿಟ್‌ ಸಿಗಲಿದೆ.. ಕಥೆ, ಚಿತ್ರಕಥೆ, ನಿರ್ದೇಶನ – ವಿ.ಹರಿಕೃಷ್ಣ- ಪೊನ್‌ಕುಮಾರ್‌ ಎಂದು ಟೈಟಲ್ ಕಾರ್ಡ್ ನಲ್ಲಿ ಇರಲಿದೆ. ಹಾಗಂತ ವಿ.ಹರಿಕೃಷ್ಣ ಸುಖಾಸುಮ್ಮನೆ ನಿರ್ದೇಶನದ ಕ್ರೆಡಿಟ್‌ ತೆಗೆದುಕೊಂಡಿಲ್ಲ. “ಯಜಮಾನ’ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನದಲ್ಲಿ ಹರಿಕೃಷ್ಣ ಸಂಪೂರ್ಣವಾಗಿ ಪಾಲ್ಗೊಂಡಿದ್ದಾರೆ. ಅದೇ ಕಾರಣದಿಂದ ಅವರು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳದೇ “ಯಜಮಾನ’ದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಸಂಭಾಷಣೆಯಲ್ಲೂ ಹರಿಕೃಷ್ಣ ಭಾಗಿಯಾಗಿದ್ದು, ಚೇತನ್‌ ಕುಮಾರ್‌ ಹಾಗೂ ಹರಿಕೃಷ್ಣ ಸೇರಿಕೊಂಡು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಹರಿಕೃಷ್ಣ ಕೊಂಚ ಬಿಡುವು ಸಿಕ್ಕರೂ ಪುಸ್ತಕಗಳನ್ನು ಓದೋದರಲ್ಲಿ ತಲ್ಲೀನರಾಗುತ್ತಾರಂತೆ. ಅವರೆಲ್ಲೇ ಹೋದರೂ ಇತರೇ ವಸ್ತುಗಳ ಜೊತೆ ಪುಸ್ತಕ ಇದ್ದೇ ಇರುತ್ತದೆ. ಅವರ ಕಚೇರಿ ಮತ್ತು ಮನೆಯ ತುಂಬಾ ಪುಸ್ತಕದ ಭಂಡಾರವೇ ತುಂಬಿಕೊಂಡಿದೆಯಂತೆ. ಹೀಗೆ ಬಹು ಕಾಲದಿಂದ ಸಾಹಿತ್ಯದ ಸಾಂಗತ್ಯ ಹೊಂದಿರೋ ಹರಿಕೃಷ್ಣ ಅವರಿಗೆ ಸಾಹಿತ್ಯದಲ್ಲಿ ಹಿಡಿತವಿದೆ. ಸಾಹಿತ್ಯದೊಂದಿಗೆ ಒಡನಾಟವಿಟ್ಟುಕೊಂಡಿರೋ ಹರಿಕೃಷ್ಣ ಅವರ ಕಥೆಯ ಬಗ್ಗೆ ಒಂದಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top