fbpx
ಭವಿಷ್ಯ

ವಾರಭವಿಷ್ಯ ಅಕ್ಟೋಬರ್ 15 ನೇ ತಾರೀಖಿನಿಂದ 21 ನೇ ತಾರೀಖಿನವರೆಗೆ.

ಮೇಷ ರಾಶಿ 

 

 

ಸ್ಥಿರಾಸ್ತಿ ಸಂಪಾದನೆ, ಕೆಲಸ ಕಾರ್ಯಗಳಲ್ಲಿ ಸ್ವಲ್ಪ ತೊಂದರೆಗಳಾಗುತ್ತವೆ, ಸ್ಥಳ ಬದಲಾವಣೆ ಆಗಲಿದೆ, ಹಣಕಾಸು ವಿಷಯಗಳಲ್ಲಿ ನಷ್ಟ ಉಂಟಾಗುವುದು, ಆರೋಗ್ಯದಲ್ಲಿ ಸಮಸ್ಯೆ, ನೀಚರ ಸಹವಾಸ, ಸಜ್ಜನರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ.
ಪರಿಹಾರ:“ಓಂ ನಮೋ ಮಂಗಳಾಯ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ, ಮಂಗಳವಾರ ಸುಬ್ರಹ್ಮಣ್ಯನಿಗೆ ನಮಸ್ಕಾರ ಮಾಡಿ.

ವೃಷಭ ರಾಶಿ

 

 

ಅಧಿಕ ತಿರುಗಾಟ, ಆದಾಯಕ್ಕಿಂತ ಖರ್ಚು ಜಾಸ್ತಿ, ಇಲ್ಲಸಲ್ಲದ ಅಪವಾದಗಳು ನಿಮ್ಮ ಮೇಲೆ ಬರಲಿವೆ, ಕೋರ್ಟ್ ಕೇಸ್ ಗಳಲ್ಲಿ ಅಪಜಯ ಉಂಟಾಗಲಿದೆ, ಕುಟುಂಬದಲ್ಲಿ ಕಲಹ, ಶತ್ರುಗಳ ಬಾದೆ ,ಅನಿರೀಕ್ಷಿತ ದ್ರವ್ಯಲಾಭ ಮತ್ತು ಧನಲಾಭ .
ಪರಿಹಾರ:“ಓಂ ಶ್ರೀ ವೃಷಭೇಶ್ವರಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ 18 ಬಾರಿ ಜಪಿಸಿ, ಸೋಮವಾರ ಶಿವಾಲಯಕ್ಕೆ ಹೋಗಿ ಹಾಲು ಮತ್ತು ನೀರನ್ನು ಅರ್ಪಿಸಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

ಮಿಥುನ ರಾಶಿ

 

 

ಬಂಧು ಮಿತ್ರರಲ್ಲಿ ಬಾಂಧವ್ಯ ವೃದ್ಧಿಯಾಗಲಿದೆ, ಸಮಾಜದಲ್ಲಿ ಉತ್ತಮ ಗೌರವ ಲಭಿಸುತ್ತದೆ, ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ, ನೂತನ ಕಟ್ಟಡವನ್ನು ನಿರ್ಮಾಣ ಮಾಡುವುದಕ್ಕೆ ಆರಂಭ,ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವ ಯೋಗ, ವಿವಾಹ ಕಾರ್ಯದಲ್ಲಿ ಭಾಗಿ, ಶುಭ ಸಮಾರಂಭಗಳಿಗೆ ಭೇಟಿ ನೀಡಲಿದ್ದೀರ .
ಪರಿಹಾರ:“ಓಂ ನಮೋ ವೆಂಕಟೇಶಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ 21 ಬಾರಿ ಜಪಿಸಿ, ಹಸು ಮತ್ತು ಕರುವಿಗೆ ಬೆಲ್ಲ ಮತ್ತು ಬಾಳೆಹಣ್ಣನ್ನು ನೀಡಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕಟಕ ರಾಶಿ

 

 

ಈ ವಾರ ಯತ್ನಿಸಿದ ಕೆಲಸಕಾರ್ಯಗಳಲ್ಲಿ ವಿಘ್ನಗಳನ್ನು ಅನುಭವಿಸಬೇಕಾಗುತ್ತದೆ, ಅಧಿಕ ಧನವ್ಯಯ, ಪರಸ್ಥಳ ವಾಸ, ಸೇವಕರು ರಾಜ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ, ದ್ರವ್ಯ ನಷ್ಟ ಮತ್ತು ಸಾಲ ಬಾದೆಯನ್ನು ಅನುಭವಿಸಬೇಕಾಗುತ್ತದೆ.
ಪರಿಹಾರ:“ಓಂ ನಮೋ ಚಂದ್ರಶೇಖರಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ 9 ಬಾರಿ ಜಪಿಸಿ, ಬಡಮಕ್ಕಳಿಗೆ ಲೇಖನಿ ಸಾಮಗ್ರಿಗಳಾದ ಪೆನ್ನು ಪುಸ್ತಕಗಳನ್ನು ದಾನ ಮಾಡಿ.

ಸಿಂಹ ರಾಶಿ 

 

 

ಉತ್ತಮ ಬುದ್ಧಿ ಶಕ್ತಿ ನಿಮ್ಮ ಶರೀರದಲ್ಲಿ ಉತ್ಪತಿಯಾಗಲಿದೆ ಅದನ್ನು ಸದುಪಯೋಗಪಡಿಸಿಕೊಳ್ಳಿ, ಧನ ಲಾಭ ,ಸುಖ ಭೋಜನ ಪ್ರಾಪ್ತಿಯಾಗಲಿದೆ, ಶುಭ ಕಾರ್ಯಗಳು ಜರುಗುವುವು, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಕೈ ಹಾಕಿದ ಕೆಲಸಗಳಲ್ಲಿಯೂ ಕೂಡ ಪ್ರಗತಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಅಧಿಕಾರ ಪ್ರಾಪ್ತಿ ಮತ್ತು ಧನ ಲಾಭ ಉಂಟಾಗಲಿದೆ.
ಪರಿಹಾರ:“ಓಂ ನಮೋ ಪಂಚಲಿಂಗೇಶ್ವರಾಯ ನಮಃ”ಈ ಮಂತ್ರವನ್ನು ಪ್ರತಿನಿತ್ಯ ಹದಿನಾರು ಬಾರಿ ಜಪಿಸಿ, ಅಂದ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.

ಕನ್ಯಾ ರಾಶಿ

 

 

ವಸ್ತ್ರಾಭರಣ ಖರೀದಿ ಸಾಧ್ಯತೆ, ವಾಹನ ಯೋಗ , ಸ್ಥಿರಾಸ್ತಿ ಸಂಪಾದನೆಯನ್ನು ಮಾಡಲಿದ್ದೀರಿ, ಐಶ್ವರ್ಯ ವೃದ್ಧಿಯಾಗಲಿದೆ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ, ಆರೋಗ್ಯದಲ್ಲಿ ಚೇತರಿಕೆ ಮತ್ತು ಅಭಿವೃದ್ಧಿ ಕಂಡು ಬರಲಿದೆ, ತೀರ್ಥಕ್ಷೇತ್ರ ದರ್ಶನ ಮಾಡುವ ಶುಭಯೋಗ.
ಪರಿಹಾರ:“ಓಂ ಶ್ರೀ ಲಕ್ಷ್ಮಿ ಧಾನ್ಯಲಕ್ಷ್ಮೀಯೇ ನಮಃ” ಈ ಮಂತ್ರವನ್ನು 16 ಬಾರಿ ಪ್ರತಿನಿತ್ಯ ಜಪಿಸಿ, ಸುಮಂಗಲಿಯರ ಪಾದ ಪೂಜೆಯನ್ನು ಮಾಡಿ, ನಮಸ್ಕರಿಸಿ ಆಶೀರ್ವಾದವನ್ನು ಪಡೆಯಿರಿ.

ತುಲಾ ರಾಶಿ

 

 

ಶ್ರಮಕ್ಕೆ ತಕ್ಕ ಫಲ ಲಭಿಸಲಿದೆ, ಸರ್ಕಾರಿ ಕೆಲಸದಲ್ಲಿ ಜಯ, ಪ್ರವಾಸದಿಂದ ಮನೋಲ್ಲಾಸ, ಅವಿವಾಹಿತರಿಗೆ ವಿವಾಹ ಯೋಗ, ಮನೆಯಲ್ಲಿ ಶುಭ ಸಮಾರಂಭಗಳು ಜರುಗಲಿವೆ, ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ.
ಪರಿಹಾರ:ಪ್ರತಿನಿತ್ಯ ಸುಬ್ರಹ್ಮಣ್ಯಸ್ವಾಮಿಯ ಸ್ತೋತ್ರವನ್ನು ಪಾರಾಯಣ ಮಾಡಿ.

ವೃಶ್ಚಿಕ ರಾಶಿ

 

 

ಸ್ನೇಹಿತರಿಂದ ಬಂಧುಗಳಿಂದ ಮನ್ನಣೆ, ಕಲಾವಿದರಿಗೆ ಕ್ರೀಡಾಪಟುಗಳಿಗೆ ಉತ್ತಮ ಅವಕಾಶಗಳು ಲಭಿಸುತ್ತವೆ, ತೀರ್ಥಕ್ಷೇತ್ರ ದರ್ಶನ ಮಾಡುವ ಶುಭಯೋಗ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಲಭಿಸಲಿದೆ, ಮನೆಯಲ್ಲಿರುವ ಸಮಸ್ಯೆಗಳು ಹರಿಯುತ್ತವೆ .
ಪರಿಹಾರ:
ಪ್ರತಿನಿತ್ಯ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ ನಾಗದೇವತೆಯ ಪೂಜೆಯನ್ನು ಮಾಡಿ ಅಥವಾ ಅಶ್ವಥ ವೃಕ್ಷ ಪ್ರದಕ್ಷಿಣೆ ಮಾಡಿ, ನಮಸ್ಕಾರವನ್ನು ಮಾಡಿ.

ಧನಸ್ಸು ರಾಶಿ

 

 

ಈ ವಾರ ವಾಹನಗಳಿಂದ ಲಾಭ, ಕೋರ್ಟ್ ಕೇಸ್ ಗಳಲ್ಲಿ ಕೃಷಿಕರಿಗೆ ಮತ್ತು ತೈಲ ವ್ಯಾಪಾರಿಗಳಿಗೆ ಲಾಭ ಅಧಿಕವಾಗಿ ಲಭಿಸಲಿದೆ, ಸ್ನೇಹಿತರೊಂದಿಗೆ ಸುತ್ತಾಟದಿಂದ ಹಣವ್ಯಯ ಆಗುವುದು, ನೆರೆಹೊರೆಯವರೊಂದಿಗೆ ಪ್ರಯಾಣ, ವಿಪರೀತ ಖರ್ಚು ಇದರಿಂದ ಆಗಲಿದೆ.
ಪರಿಹಾರ:ಪ್ರತಿನಿತ್ಯ ಶ್ರೀ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿ ಬಡ ಮಕ್ಕಳಿಗೆ ಅನ್ನದಾನ ಮಾಡಿ.

ಮಕರ ರಾಶಿ 

 

 

ಆಕಸ್ಮಿಕ ಧನಲಾಭ, ಹೊಸ ಉದ್ಯಮ ಆರಂಭಕ್ಕೆ ಚಿಂತನೆ, ಷೇರು ವ್ಯವಹಾರಗಳಲ್ಲಿ ನಷ್ಟ, ಸುಗಂಧ ದ್ರವ್ಯದ ವ್ಯಾಪಾರಗಳನ್ನು ಯಾರು ಮಾಡುತ್ತಿರುವರೋ ಅವರಿಗೆ ಬಹಳಷ್ಟು ಲಾಭ, ಕಲಾವಿದರಿಗೆ ಬಹಳಷ್ಟು ಅನುಕೂಲವಾಗಲಿದೆ, ಪೀಠೋಪಕರಣಗಳಿಂದ ಗಾಯಗಳು ಉಂಟಾಗಲಿವೆ, ಆದ್ದರಿಂದ ಎಚ್ಚರಿಕೆಯಿಂದ ಇರಿ.
ಪರಿಹಾರ:ಹಸು ಮತ್ತು ಕರುವಿಗೆ ಬೆಲ್ಲ ಮತ್ತು ಬಾಳೆಹಣ್ಣು ತಿನ್ನಿಸಿ ಅಥವಾ “ಓಂ ಹಂ ಅಂಗಾರಕಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸಿ.

ಕುಂಭ ರಾಶಿ 

 

 

ಹೊಸ ವ್ಯಕ್ತಿಗಳ ಭೇಟಿ, ವಾಹನ ಚಾಲನೆಯಲ್ಲಿ ಎಚ್ಚರಿಕೆಯಿಂದ ಇರಿ, ಅಧಿಕವಾದ ಖರ್ಚು, ಸ್ಥಳ ಬದಲಾವಣೆ ಆಗಲಿದೆ ಮತ್ತು ಮಂಗಳ ಕಾರ್ಯಗಳು ಜರುಗುವವು, ಬಂಧು ಮಿತ್ರರ ಸಮಾಗಮ, ದ್ರವ್ಯ ಲಾಭ.
ಪರಿಹಾರ:ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ ಕಾಗೆಗಳಿಗೆ ಊಟವನ್ನು ಹಾಕಿ.

ಮೀನ ರಾಶಿ

 

 

ಪ್ರಯಾಣದಿಂದ ಆಯಾಸ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ, ಸರ್ಕಾರಿ ಕೆಲಸದಲ್ಲಿರುವವರಿಗೆ ತೊಂದರೆ, ವಸ್ತ್ರಾಭರಣ ಪ್ರಾಪ್ತಿ, ಗಾರ್ಮೆಂಟ್ಸ್ ನೌಕರರು ಯಾರಿದ್ದೀರ ಅಂತವರಿಗೆ ಉತ್ತಮವಾಗಿರುವ ಲಾಭ, ಇತರರೊಂದಿಗೆ ಮಾತನಾಡಬೇಕಾದರೆ ಎಚ್ಚರ ವಹಿಸಿ ಮಾತನಾಡಿ, ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.
ಪರಿಹಾರ:ಪ್ರತಿನಿತ್ಯ ಶ್ರೀ ಲಕ್ಷ್ಮಿನರಸಿಂಹ ಸ್ತೋತ್ರವನ್ನು ಪಾರಾಯಣ ಮಾಡಿ, ಬಡವರಿಗೆ ಅನ್ನದಾನ ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top