fbpx
ಸಮಾಚಾರ

ರಾಮನಗರ ಕಣದಲ್ಲಿ ಕೋಟ್ಯಧಿಪತಿಗಳು: ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಆಸ್ತಿ ಎಷ್ಟಿದೆ ಗೊತ್ತಾ?

2019ರ ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ.. ನವೆಂಬರ್ 3ರಂದು ನಡೆಯುವ ಉಪ ಚುನಾವಣೆಗೆ ಮುಖ್ಯಮಂತ್ರಿ HD ಕುಮಾರಸ್ವಾಮಿಯವರ ರಾಜೀನಾಮೆಯಿಂದಾಗಿ ತೆರವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ. ಇನ್ನು ಬಿಜೆಪಿಯಿಂದ ಎಲ್.ಚಂದ್ರಶೇಖರ್ ಅವರು ಕಣಕ್ಕಿಳಿಯುತ್ತಿದ್ದಾರೆ.. ಇನ್ನು ರಾಮನಗರದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇರುವುದರಿಂದ ಕಾಂಗ್ರೆಸ್ ಪಕ್ಷದಿಂದ ಯಾರೊಬ್ಬರೂ ಕಣಕ್ಕಿಳಿಯುತ್ತಿಲ್ಲ. ಹೀಗಾಗಿ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ಎಲ್.ಚಂದ್ರಶೇಖರ್ ನಡುವೆ ನೇರ ಹಣಾಹಣಿ ಏರ್ಪಡಲಿದೆ..

ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಲ್.ಚಂದ್ರಶೇಖರ್ ಕೂಡ ಕೋಟ್ಯಧಿಪತಿಯಾಗಿದ್ದಾರೆ. ಎಲ್‌. ಚಂದ್ರಶೇಖರ್ ಕುಟುಂಬದ ಒಟ್ಟು ಆಸ್ತಿ ಮೌಲ್ಯ 10.20 ಕೋಟಿ.. ಸೋಮವಾರ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ತಮ್ಮ ಆಸ್ತಿಯ ವಿವರಗಳನ್ನು ನೀಡಿದರು. ಬಿಡದಿಯ ಸುತ್ತ ಮುತ್ತ ಒಟ್ಟು 13.34 ಎಕರೆ ಕೃಷಿ ಭೂಮಿಯನ್ನು ಅವರು ಹೊಂದಿದ್ದು, ಇದರ ಮಾರುಕಟ್ಟೆ ಮೌಲ್ಯ ₹ 6.8 ಕೋಟಿ ಇರುವುದಾಗಿ ನಮೂದಿಸಿದ್ದಾರೆ. ಅವರ ಪತ್ನಿ ಸುಮಿತ್ರಾ ಹೆಸರಿನಲ್ಲಿ ಬೆಂಗಳೂರಿನಲ್ಲಿ ಎರಡು ನಿವೇಶನ ಹಾಗೂ ಇಂಡಸ್ಟ್ರಿಯಲ್‌ ಶೆಡ್ ಸೇರಿ ಒಟ್ಟು ₹ 3 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

ಇದಲ್ಲದೇ 23.70 ಲಕ್ಷ ರೂ. ಚರಾಸ್ಥಿ ಹೊಂದಿದ್ದು, ಇದರಲ್ಲಿ 20 ಲಕ್ಷ ರೂ. ಮೌಲ್ಯದ 700 ಗ್ರಾಂ ಚಿನ್ನಾಭರಣ, 70 ಸಾವಿರ ಮೌಲ್ಯದ 2 ಕೆಜಿ ಬೆಳ್ಳಿ ವಸ್ತುಗಳು ಹಾಗೂ ಬ್ಯಾಂಕ್ ಖಾತೆಯಲ್ಲಿ 3 ಲಕ್ಷ ರೂ. ಹಣ ಇದೆ. ಪುತ್ರ ಮನೀಷ್ ಹೆಸರಲ್ಲಿ 3 ಲಕ್ಷ ರೂ ಮೌಲ್ಯದ ಒಂದು ಕೆಟಿಎಂ ಬೈಕ್ ಇದೆ.

ಅನಿತಾ ಕುಮಾರಸ್ವಾಮಿ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?
ಎಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ. ರಾಜ್ಯ ಚುನಾವಣಾ ಆಯೋಗಕ್ಕೆ ನಾಮಪತ್ರ ಮತ್ತು ಅಫಿಡವಿಟ್ ಸಲ್ಲಿಸಿರುವ ಅನಿತಾ ಕುಮಾರಸ್ವಾಮಿ, ತಾವು ಬಿ.ಇ. ಪದವೀಧರೆ ಎಂಬ ಮಾಹಿತಿ ನೀಡಿದ್ದಾರೆ. ಅದರೊಂದಿಗೆ ಚರ ಹಾಗೂ ಸ್ಥಿರಾಸ್ತಿಯ ವಿವರಗಳನ್ನು ಭರ್ತಿ ಮಾಡಿದ್ದಾರೆ.

ಅನಿತಾ ಕುಮಾರಸ್ವಾಮಿ ಅವರ ಒಟ್ಟು ಚರಾಸ್ತಿ ₹94 ಕೋಟಿ ಹೊಂದಿದ್ದು ₹8 ಕೋಟಿ ಸಾಲ ಮಾಡಿದ್ದಾರೆ. ಇನ್ನು, ಕೈಯಲ್ಲಿ 42 ಲಕ್ಷ ರೂ ನಗದು ಹಣವನ್ನು ಹೊಂದಿದ್ದಾರೆ. ಬ್ಯಾಂಕು​ಗಳಲ್ಲಿ 1.9 ಕೋಟಿ ರೂಪಾಯಿ ಬ್ಯಾಲೆನ್ಸ್ ಇದೆ. ಇನ್ನು ವಿವಿಧ ಕಂಪೆನಿ ಹಾಗೂ ಶೇರ್​​ಗಳ ಮೇಲಿನ ಹೂಡಿಕೆ ₹ 68 ಕೋಟಿ 79 ಲಕ್ಷದ 58, ಸಾವಿರ ರೂಪಾಯಿ ಇದೆ.

ಅಷ್ಟೇ ಅಲ್ಲದೇ 93 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹೊಂದಿದ್ದಾರೆ. ಅದರಲ್ಲಿ 2.6 ಕೆಜಿ ಚಿನ್ನ, 17 ಕೆಜಿ ಬೆಳ್ಳಿ, 40 ಗ್ರಾಂ​ ವಜ್ರಾಭರಣಗಳು ಇವೆ.​​​. ಬೆಂಗಳೂರಿನ ಜಯನಗರದ 4th ಬ್ಲಾಕ್​ನಲ್ಲಿ 14 ಕೋಟಿ ಮೌಲ್ಯದ ಕಟ್ಟಡವನ್ನೂ ಕೂಡ ಇವರು ಹೊಂದಿದ್ದಾರೆ. ಅಲ್ಲದೇ ದೊಡ್ಡನಕುಂಟೆ ಬಳಿಯ ಕಟ್ಟಡವೂ 16 ಕೋಟಿ ಮೌಲ್ಯ ಹೊಂದಿದೆ. 28 ಲಕ್ಷ ಮೌಲ್ಯದ ಹಾರ್ಲೆ ಡೆವಿಡ್ಸನ್ ಬೈಕ್ ಹಾಗು ಕಾರು ಇವರ ಇವರ ಹೆಸರಿನಲ್ಲಿಯೇ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top