fbpx
ದೇವರು

ಸಾಕ್ಷಾತ್ ದೇವಿಯೇ ದುರ್ಗಾ ಸಪ್ತಶತಿಯಲ್ಲಿ ಹೇಳಿರುವ ಮಾತುಗಳೇನು,ಇದರ ಮಹತ್ವವೇನು,ಇದ್ರಿಂದ ಸಿಗುವ ವಿಶೇಷ ಫಲಗಳು ಏನೇನು ಗೊತ್ತಾ

ನವರಾತ್ರಿಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಅತ್ಯಂತ ಶ್ರೇಷ್ಠ. ದುರ್ಗಾ ಸಪ್ತ ಶತಿಯಲ್ಲಿದೆ ಸಾಕ್ಷಾತ್ ದೇವಿಯೇ ಹೇಳಿರುವ ಮಾತುಗಳು. ದುರ್ಗಾ ಇಚ್ಛಾ ಶಕ್ತಿ ,ಕ್ರಿಯಾ ಶಕ್ತಿ ಮತ್ತು ಜ್ಞಾನ ಶಕ್ತಿಗಳ ಸಂಗಮ. ನವರಾತ್ರಿಯಲ್ಲಿ ಪೂಜಿಸಲ್ಪಡುವ ಶ್ರೀ ದುರ್ಗಾ ಶಕ್ತಿ ಸ್ವರೂಪಿಣಿ. ದೈತ್ಯ ರಾಕ್ಷಸರ ಸಂಹಾರ ಮಾಡುವ ಶಕ್ತಿ ಸ್ವರೂಪಿಣಿಯೇ ದುರ್ಗಾ . ಸಂಸಾರ ಬಂಧನಕ್ಕೆ ಈಡು ಮಾಡುವ ಕಾರ್ಯ, ದುಃಖ ,ಶೋಕ, ನರಕ, ಯಮನ ದಂಡನೆ, ಜನ್ಮ, ಮೃತ್ಯು ಇವನ್ನೆಲ್ಲಾ ಶಮನಗೊಳಿಸುವ ಮತ್ತು ನಾಶಗೊಳಿಸುವ ಮಹಾಶಕ್ತಿಯೇ ದುರ್ಗಾ.ದುರ್ಗಿಯ ನಾಮಸ್ಮರಣೆ ಮಾಡಿದರೆ ಸಾಕು, ಶತ್ರುಗಳು ನಾಶವಾಗುತ್ತಾರೆ. ಮನುಷ್ಯರನ್ನು ಅಷ್ಟೇ ಅಲ್ಲ, ಇಂದ್ರಾದಿ ದೇವತೆಗಳು ಕೂಡ ಮಹಾತಾಯಿ ದುರ್ಗೆಯ ಕಷ್ಟಗಳಿಂದ ಪಾರು ಮಾಡುತ್ತಾಳೆ ಮತ್ತು ರಕ್ಷಿಸುತ್ತಾಳೆ.

“ಏಕೈಕ ವಾಹಂ ಜಗತ್ಯತ್ರ ದ್ವಿತೀಯಕ ಮಾಮಾ ಪರಾ” ಈ ಶ್ಲೋಕವೇ ಹೇಳುವಂತೆ ಜಗತ್ತಿನಲ್ಲಿರುವ ಶಕ್ತಿ ದುರ್ಗೆಯೂಬ್ಬಳೇ, ಇವಳನ್ನು ಬಿಟ್ಟು ಎರಡನೆಯ ಶಕ್ತಿಸ್ವರೂಪಿಣಿ ಬೇರೆ ಯಾವುದು ಇಲ್ಲ ? ದುರ್ಗೆ ಅನಂತಳು, ಸರ್ವವ್ಯಾಪಿ ಹಾಗೂ ಸರ್ವ ಶಕ್ತಿಯ ಪ್ರತೀಕ. ಈ ತಾಯಿಗೆ ಮಿಗಿಲಾದ ಶಕ್ತಿ ಈ ಬ್ರಹ್ಮಾಂಡದಲ್ಲಿ ಬೇರೆ ಯಾವುದೂ ಇಲ್ಲ. ಇದರಲ್ಲಿ ದುರ್ಗ ತತ್ವ ಇರುತ್ತದೆ.ದೈತ್ಯನಾದ ಮಹಿಷಾಸುರ ದೇವತೆಗಳನ್ನು ಅಪಾರವಾಗಿ ಪೀಡಿಸುತ್ತಾನೆ. ಅಸುರರನ್ನು ಸಂಹರಿಸಲು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಸಾಧ್ಯವಾಗುವುದಿಲ್ಲ. ಆಗ ತ್ರಿಮೂರ್ತಿಗಳು ದುರ್ಗಾ ತಾಯಿ ಪ್ರಾಹಿಮಾಮ ಪ್ರಾಹಿಮಾಮ ಎನ್ನುತ್ತಾ ಶ್ರೀ ದುರ್ಗಾ ಮಾತೆಗೆ ಶರಣಾಗುತ್ತಾರೆ. ಆಗ ಶಿವ ಶಕ್ತಿ ಸ್ವರೂಪಿಣಿಯಾದ ಎಲ್ಲಾ ದೇವತೆಗಳು ನೀಡಿದ ಶಸ್ತ್ರಾಸ್ತ್ರಗಳನ್ನು ಪಡೆದು, ಭಯಾನಕವಾದ ರೂಪಗಳನ್ನು ತಳೆಯುತ್ತಾಳೆ, ನಂತರ ಯುದ್ಧದಲ್ಲಿ ಮಹಿಷಾಸುರನನ್ನು ಸಂಹರಿಸುತ್ತಾಳೆ.ದುರ್ಗೆಯ ಇನ್ನೂ ಅನೇಕ ಮಹತ್ವದ ವಿಷಯಗಳು ಸೇರಿದಂತೆ ದುರ್ಗಾ ಸಪ್ತಶತಿ ಗ್ರಂಥದಲ್ಲಿ ವಿವರಿಸಲಾಗಿದೆ.ದುರ್ಗಾ ಸಪ್ತಶತಿಯಲ್ಲಿ ಏನಿದೆ ? ದುರ್ಗಾ ಸಪ್ತಶತಿಯಲ್ಲಿ ದೇವಿಯ ವರ್ಣನೆಯ ಪ್ರಮುಖವಾಗಿರುತ್ತದೆ. ಸಪ್ತ ಶತಿಯನ್ನು ಮಾರ್ಕಂಡೇಯ ಮಹರ್ಷಿಗಳು ರಚಿಸಿದ್ದಾರೆ. ಸಪ್ತಶತಿಯಲ್ಲಿ ಒಟ್ಟಾರೆಯಾಗಿ 700 ಶ್ಲೋಕಗಳಿವೆ, ಒಟ್ಟಾರೆಯಾಗಿ 13 ಅಧ್ಯಾಯಗಳಾಗಿ ಈ ಶ್ಲೋಕಗಳ ವಿಂಗಡಣೆ ಮಾಡಲಾಗಿದೆ. ಇಲ್ಲಿ ಜಗನ್ಮಾತೆಯನ್ನು ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಈ 3 ರೂಪಗಳಲ್ಲಿ ವಿಶೇಷವಾಗಿ ವರ್ಣನೆ ಮಾಡಲಾಗಿದೆ.

 

 

 

ದೇವಿ ಆರಾಧನೆಯಿಂದ ಸಿಗುವ ಫಲಗಳು.
ನವರಾತ್ರಿಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಅತ್ಯಂತ ಶ್ರೇಷ್ಠ. ಸಪ್ತಶತಿ ಪಾರಾಯಣ ದೇವಿಯ ಒಲುಮೆಗೆ ಪಾತ್ರರಾಗುವುದಕ್ಕೆ ದಿವ್ಯಾಸ್ತ್ರವಾಗಿದೆ. ದೇವಿಯ ಒಲುಮೆಗೆ ಪಾತ್ರರಾಗುವುದಕ್ಕೆ ದುರ್ಗಾ ಸಪ್ತಶತಿ ಪಾರಾಯಣ ಮಾಡಬೇಕು.
ದುರ್ಗಾ ಸಪ್ತಶತಿಯ ಪಾರಾಯಣದ ಫಲಗಳು.
ನವರಾತ್ರಿ ಎಂದರೆ ಮಹಾಶಕ್ತಿಯ ಆರಾಧನೆಯ ಪರ್ವಕಾಲ. ಈ ಒಂಬತ್ತು ದಿನಗಳಲ್ಲಿ ಬ್ರಹ್ಮಾಂಡದ ಶಕ್ತಿ ಜಾಗೃತವಾಗಿರುತ್ತದೆ. ನವರಾತ್ರಿಯ ಒಂಬತ್ತು ದಿನ ದುರ್ಗಾಶಕ್ತಿಯನ್ನು ಆರಾಧಿಸುವುದರಿಂದ ಬದುಕಿಗೆ ಹೊಸ ಚೈತನ್ಯ ಬರುತ್ತದೆ. ಶರದ ಋತುವಿನಲ್ಲಿ ಬರುವ ಶರನ್ನವರಾತ್ರಿಯ ಒಂಬತ್ತು ದಿನಗಳು, ದೇವಿಯ ಒಂದೊಂದು ದಿನ ಒಂದೊಂದು ರೂಪದಲ್ಲಿ ಪ್ರಕಟಗೊಳ್ಳುತ್ತಾಳೆ. ರಾಕ್ಷಸರನ್ನು ಸಂಹಾರ ಮಾಡಿದಂತೆ , ದುರ್ಗೆಯು ನಮ್ಮೊಳಗಿರುವ ಅಂಧಕಾರವನ್ನು ದೂರ ಮಾಡುತ್ತಾಳೆ. ಜಗನ್ಮಾತೆಯನ್ನು ಆರಾಧಿಸುವ ಈ ಪರ್ವ ಕಾಲದಲ್ಲಿ ದುರ್ಗ ಸಪ್ತಶತಿ ಪಾರಾಯಣ ಅತ್ಯಂತ ಶ್ರೇಷ್ಠ. ದೇವಿಯ ಒಲುಮೆಗೆ ಪಾತ್ರರಾಗಲು ದಿವ್ಯಾಸ್ತ್ರ ದುರ್ಗಾಸಪ್ತಶತಿ. ದೇವಿಯ ವರ್ಣನೆಯೇ ಪ್ರಮುಖವಾಗಿರುವ ದುರ್ಗಾ ಸಪ್ತಶತಿಯಲ್ಲಿ ಒಟ್ಟು 700 ಶ್ಲೋಕಗಳಿವೆ ಮತ್ತು 13 ಅಧ್ಯಾಯಗಳಿವೆ. ಜಗನ್ಮಾತೆಯ ಸಾಹಸ, ಶೌರ್ಯದ ಗುಣಗಳನ್ನು ಸಪ್ತಶತಿ ಹಾಡಿಹೊಗಳಿದೆ. ಮೊದಲ ಅಧ್ಯಾಯದಲ್ಲಿ ದುರ್ಗೆ ಮಹಾಕಾಳಿ ರೂಪದಲ್ಲಿ ಸ್ತುತಿಸಲ್ಪಡುತ್ತಾಳೆ.

ದುರ್ಗಾ ಸಪ್ತಶತಿಯ ಮಹಾಕಾಳಿ ಸ್ವರೂಪ:ಮೊದಲನೇ ಅಧ್ಯಾಯದಲ್ಲಿ ತಾಯಿ ಮಧು, ಕೈಟಭ ಎಂಬ ರಾಕ್ಷಸರನ್ನು ಸಂಹಾರ ಮಾಡುತ್ತಾಳೆ. ದುರ್ಗಾ ಸಪ್ತಶತಿಯ ಎರಡು, ಮೂರು ಮತ್ತು ನಾಲ್ಕನೇ ಅಧ್ಯಾಯ ಅತ್ಯಂತ ಮಹತ್ವಪೂರ್ಣ.ಈ ಅಧ್ಯಾಯಗಳಲ್ಲಿ ಮಹಾಲಕ್ಷ್ಮಿಯ ಸ್ವರೂಪದಲ್ಲಿ ಆರಾಧಿಸಲ್ಪಡುತ್ತಾಳೆ.
ದುರ್ಗಾ ಸಪ್ತಶತಿಯಲ್ಲಿದೆ ಮಹಾಲಕ್ಷ್ಮಿ ಸ್ವರೂಪ:ದುರ್ಗಾ ಸಪ್ತಶತಿಯ ಎರಡು, ಮೂರು ಮತ್ತು ನಾಲ್ಕನೇ ಅಧ್ಯಾಯದಲ್ಲಿ ದೇವಿ ಮಹಾಲಕ್ಷ್ಮಿ ಸ್ವರೂಪದಲ್ಲಿ ಇರುತ್ತಾಳೆ. ಎರಡನೇ ಅಧ್ಯಾಯದಲ್ಲಿ ದೇವಿ ಮಹಿಷಾಸುರ ಸೈನ್ಯವನ್ನು ಹೇಗೆ ನಾಶ ಮಾಡುತ್ತಾಳೆ ಎನ್ನುವುದರ ಬಗ್ಗೆ ಉಲ್ಲೇಖವಿದೆ.
ಮೂರನೇ ಅಧ್ಯಾಯದಲ್ಲಿ ಮಹಿಷಾಸುರನ ವಧೆ ಮಾಡುವ ದೇವಿ ಸ್ವರೂಪವಿದೆ,ನಾಲ್ಕನೇ ಅಧ್ಯಾಯದಲ್ಲಿ ಮಹಿಷಾಸುರನ ವದೆ ಮಾಡಿದ ನಂತರ ಉಗ್ರವಾದ ದೇವಿಯನ್ನು ಇಂದ್ರಾದಿ ದೇವತೆಗಳು ಗಾಯಿತ್ರಿ ಸ್ತೋತ್ರವನ್ನು ಸ್ತುತಿಸಿ ಶಾಂತ ಮಾಡುವ ಸನ್ನಿವೇಶ ಬರುತ್ತದೆ.ದುರ್ಗಾ ಸಪ್ತಶತಿಯ ಐದರಿಂದ- ಹದಿಮೂರನೇ ಅಧ್ಯಾಯದಲ್ಲಿ ದೇವಿ ಮಹಾಸರಸ್ವತಿಯ ರೂಪದಲ್ಲಿ ಇರುತ್ತಾಳೆ. ದುರ್ಗೆ ಮಹಾ ಸರಸ್ವತಿಯಾಗಿ ಲೋಕ ರಕ್ಷಣೆಯನ್ನು ಮಾಡುತ್ತಾಳೆ. ಸಪ್ತಶತಿಯಲ್ಲಿ ಮಹಾಸರಸ್ವತಿಯ ರೂಪವರ್ಣನೆ.ದುರ್ಗಾ ಸಪ್ತಶತಿಯಲ್ಲಿರುವ ಹದಿಮೂರನೇ ಅಧ್ಯಾಯದಲ್ಲಿ ದುರ್ಗೆಯ ಮಹಾಸರಸ್ವತಿ ರೂಪದಲ್ಲಿರುವ ವರ್ಣನೆ ಇದೆ.

5ನೇ ಅಧ್ಯಾಯದಲ್ಲಿ ಶುಂಭ-ನಿಶುಂಭ ರಾಕ್ಷಸರು ಸಂಹಾರಕ್ಕಾಗಿ ಋಷಿ-ಮುನಿಗಳು ಸ್ತೋತ್ರದ ಮೂಲಕ ದುರ್ಗಿಯನ್ನು ಪ್ರಾರ್ಥಿಸುತ್ತಾರೆ.ಆರನೇ ಅಧ್ಯಾಯದಲ್ಲಿ ಧೂಮ್ರಲೋಚನ ಎಂಬ ರಾಕ್ಷಸನನ್ನು ದೇವಿ ಸಂಹರಿಸುತ್ತಾಳೆ.7ನೇ ಅಧ್ಯಾಯದಲ್ಲಿ ಚಂಡ-ಮುಂಡರ ಸಂಹಾರದ ಬಗ್ಗೆ ಉಲ್ಲೇಖವಿದೆ.ಎಂಟನೇ ಅಧ್ಯಾಯದಲ್ಲಿ ರಕ್ತಬೀಜಾಸುರ ಎಂಬ ರಾಕ್ಷಸನನ್ನು ಸಂಹರಿಸುತ್ತಾಳೆ.9 ಮತ್ತು 10ನೇ ಅಧ್ಯಾಯದಲ್ಲಿ ದುರ್ಗೆಯಿಂದ ಶುಂಭ-ನಿಶುಂಭ ಎನ್ನುವ ರಾಕ್ಷಸರ ಸಂಹಾರ ಮಾಡುತ್ತಾಳೆ.

 

 

 

ನವರಾತ್ರಿಯ ವೇಳೆ ದುರ್ಗೆಯ ಮೂರು ಸ್ವರೂಪಗಳ ಆರಾಧನೆ ಅತ್ಯಂತ ವಿಶೇಷ. ಅಸುರರ ಸಂಹಾರಕ್ಕಾಗಿ ದೇವಿ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯ ರೂಪವನ್ನು ತಳೆಯುತ್ತಾಳೆ. ಇಂತಹ ದೇವಿಯ ಮಹಿಮೆಯನ್ನು ದುರ್ಗಾ ಸಪ್ತಶತಿಯಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ರಾಕ್ಷಸರನ್ನು ಸಂಹಾರ ಮಾಡಿದ ದುರ್ಗೆ ತನ್ನ ಮೂಲ ಸ್ವರೂಪದಲ್ಲಿ ಇರುತ್ತಾಳೆ. ಇಂತಹ ದುರ್ಗೆಯನ್ನು ದೇವಾನುದೇವತೆಗಳು ಗಾಯಿತ್ರಿ ಸ್ತುತಿ ಹೇಳುವ ಮೂಲಕ ಶಾಂತ ಮಾಡುತ್ತಾರೆ. ಸಪ್ತಶತಿ 11 ನೇ ಅಧ್ಯಾಯ ಈ ಅಧ್ಯಾಯದಲ್ಲಿ ಸಾಕ್ಷಾತ್ ದೇವಿಯನ್ನು ಹಾಡಿ ಹೊಗಳಿದ್ದಾರೆ. ಯಾರು ಸಪ್ತಶತಿ ಪಾರಾಯಣ ಅಥವಾ ಶ್ರವಣ ಮಾಡುತ್ತಾರೋ ?ಅದರಿಂದ ಸಿಗುವ ಫಲಗಳ ಬಗ್ಗೆ ದೇವಿಯೇ ಹೇಳುತ್ತಾಳೆ.
ದುರ್ಗಾ ಸಪ್ತಶತಿ ಪಾರಾಯಣಕ್ಕೆ ಇದೆ ಅದ್ಭುತ ಶಕ್ತಿ. ಸಪ್ತಶತಿಯ ಒಂದೊಂದು ಮಂತ್ರವು ಒಂದೊಂದು ಆಟಂ ಬಾಂಬಗೆ ಸಮಾನ. ನವರಾತ್ರಿಯಲ್ಲಿ ಸಪ್ತಶತಿ ಪಾರಾಯಣ ಮಾಡಿದರೆ ದೇವಿಯ ಸಂಪೂರ್ಣ ಶ್ರೀರಕ್ಷೆ ನಮ್ಮ ಮೇಲೆ ಇರುತ್ತದೆ.ನವರಾತ್ರಿಯಲ್ಲಿ ದುರ್ಗಾಸಪ್ತಶತಿ ಪಾರಾಯಣ ಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ದುರ್ಗಾಸಪ್ತಶತಿ, ದೇವಿ ಭಾಗವತ್ ಉಪಾಸನೆಯ ಸರ್ವಶ್ರೇಷ್ಠ ಗ್ರಂಥ. ದುರ್ಗಾ ಸಪ್ತಶತಿ ಪಾರಾಯಣದಿಂದ ಧನ, ಧಾನ್ಯ, ಸುಖ, ಸಮೃದ್ಧಿಯ ಜೊತೆಗೆ ನವದುರ್ಗೆಯರ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ.

ದುರ್ಗಾ ಸಪ್ತಶತಿ ಪಾರಾಯಣಕ್ಕೂ ಕೆಲವು ನಿಯಮಗಳನ್ನು ಪಾಲಿಸಬೇಕು.
ನಿಯಮಬದ್ಧವಾಗಿ ಸಪ್ತಶತಿ ಪಾರಾಯಣ ಮಾಡಿದರೆ ಹೆಚ್ಚು ಫಲ ಸಿಗುತ್ತದೆ.ದುರ್ಗಾ ಸಪ್ತಶತಿ ಓದುವಾಗ ಪಾಲಿಸಬೇಕಾದ ನಿಯಮಗಳು ಹೀಗಿವೆ,ದುರ್ಗೆಯ ಎದುರು ದುರ್ಗಾ ಸಪ್ತಶತಿ ಪಠಣ ಆರಂಭಕ್ಕೂ ಮುನ್ನ ದೇವಿಯ ಮುಂದೆ ದೀಪ ಹಚ್ಚಿ, ದುರ್ಗೆ ಪ್ರಿಯವಾದ ಕೆಂಪು ಹೂವನ್ನು ಅರ್ಪಿಸಿ , ನಂತರ ನಿಯಮಬದ್ಧವಾಗಿ ಸಪ್ತಶತಿ ಪಾರಾಯಣ ಮಾಡಿ, ಸಪ್ತಶತಿ ಒಂದರಿಂದ ಹದಿಮೂರನೇ ಅಧ್ಯಾಯಗಳನ್ನು ಒಟ್ಟಿಗೆ ಪಠಿಸಿದರೆ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. 13 ಅಧ್ಯಾಯಗಳನ್ನು ಒಟ್ಟಿಗೆ ಪಠಿಸುವುದು ಕಷ್ಟ ಎನ್ನುವವರು ಕ್ರಮಬದ್ಧವಾಗಿ ಏಳು ದಿನಗಳಲ್ಲಿ ಸಪ್ತಶತಿ ಪಾರಾಯಣ ಮುಗಿಸಬಹುದು.ದುರ್ಗಾ ಸಪ್ತಶತಿ ಪಾರಾಯಣದ ಲಾಭಗಳು ಒಂದೆರಡಲ್ಲ. ಶ್ರದ್ಧಾ ಭಕ್ತಿಯಿಂದ ನಿಯಮ ಬದ್ಧವಾಗಿ ದುರ್ಗಾ ಸಪ್ತಶತಿ ಪಾರಾಯಣ ಮಾಡಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ. ದುರ್ಗಾ ಸಪ್ತಶತಿ ಪಾರಾಯಣದಿಂದ ಆಗುವ ಲಾಭಗಳು ಹೀಗಿವೆ.
ದುರ್ಗಾಸಪ್ತಶತಿ ಪಾರಾಯಣ ದಿಂದ ನಮ್ಮ ಸುತ್ತಮುತ್ತಲೂ ಸಕಾರಾತ್ಮಕ ಶಕ್ತಿ ನಿರ್ಮಾಣವಾಗುತ್ತದೆ, ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಪ್ತಶತಿ ಪಾರಾಯಣ ಸಹಕಾರಿ, ಜೀವನದಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲು ಇದು ನೆರವಾಗುತ್ತದೆ, ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ, ನಮ್ಮನ್ನು ಕಾಡುವ ರೋಗಗಳಿಂದ ಮುಕ್ತಿ ಸಿಗುತ್ತದೆ, ಸಂಪತ್ತು ವೃದ್ಧಿಯಾಗುತ್ತದೆ,ರೋಗಗಳಿಂದ ಮಕ್ತಿ ಪ್ರಾಪ್ತಿಯಾಗುತ್ತದೆ, ದೇಹ, ಮನಸ್ಸು, ಆತ್ಮ ಶುದ್ಧಿಯಾಗುತ್ತದೆ, ಬುದ್ಧಿ ಶಕ್ತಿ ಹೆಚ್ಚಾಗುತ್ತದೆ, ಮನೆಯ ಸದಸ್ಯರ ನಡುವೆ ಪ್ರೀತಿ ಪ್ರೇಮ ಹೆಚ್ಚಾಗುತ್ತದೆ, ಕುಟುಂಬದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುತ್ತದೆ, ನಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ, ಮನಸ್ಸಿನ ಒತ್ತಡ ನಿವಾರಣೆಯಾಗಿ ಏಕಾಗ್ರತೆ ಪ್ರಾಪ್ತಿಯಾಗುತ್ತದೆ, ಜೀವನದಲ್ಲಿ ಗೊಂದಲಗಳು ಇರುವುದಿಲ್ಲ, ದೇವಿಯ ಕೃಪೆಯಿಂದ ದಾರಿದ್ರ್ಯವು ನಿವಾರಣೆಯಾಗುತ್ತದೆ, ಶತ್ರು ಸಂಹಾರದಿಂದ ಹೆಣ್ಣಿನ ಬಗ್ಗೆ ಗಂಡಸರಿಗೆ ಗೌರವ ಮೂಡುತ್ತದೆ, ನಮ್ಮ ಪೂರ್ವ ಜನ್ಮದ ಪಾಪಗಳು ಪರಿಹಾರವಾಗಿ ನವದುರ್ಗೆಯರ ಆಶೀರ್ವಾದ ಪ್ರಾಪ್ತಿಯಾಗುತ್ತದೆ, ದುರ್ಗೆ ಜಗತ್ತಿಗೆ ಶಕ್ತಿ ತುಂಬುವ ದೇವತೆ, ಇಂತಹ ದೇವತೆಯ ಕೃಪೆ ಪಡೆಯಲು ಚಂಡಿಕಾ ಹೋಮ ನಮಗೆ ನೆರವಾಗುತ್ತದೆ.ನವರಾತ್ರಿಯಲ್ಲಿ ದುರ್ಗೆಯ ಶಕ್ತಿಶಾಲಿ ಚಂಡಿಕಾ ಹೋಮಕ್ಕೆ ವಿಶೇಷ ಮಹತ್ವ ಇದೆ. ಚಂಡಿಕಾ ಹೋಮ ಮಾಡಿದರೆ ಅಥವಾ ಹೋಮದಲ್ಲಿ ಪಾಲ್ಗೊಂಡರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ.

ಚಂಡಿಕಾ ಹೋಮದ ಫಲಗಳು:ದುರ್ಗೆಯ ಶಕ್ತಿ ಶಾಲಿ ಹೋಮ ಚಂಡಿಕಾ ಹೋಮ ಮಾಡಿಸಿದರೆ, ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಸರ್ವ ದೋಷಗಳು ಪರಿಹಾರವಾಗುತ್ತವೆ. ಶತ್ರು ದಮನವಾಗುತ್ತದೆ, ಕಛೇರಿಗಳಲ್ಲಿ ಜಯ ಲಭಿಸುತ್ತದೆ, ರೋಗಗಳಿಂದ ಮುಕ್ತಿ ಸಿಗುತ್ತದೆ , ಗ್ರಹ ದೋಷಗಳು ದೂರವಾಗುತ್ತವೆ,ದೇವಿಯ ಸಂಪೂರ್ಣ ಆಶೀರ್ವಾದ ಸಿಗುತ್ತದೆ, ನವರಾತ್ರಿಯಲ್ಲಿ ಮಾಡುವ ದೇವಿ ಪೂಜೆಯಿಂದ ದೇವಿಯ ಸಂಪೂರ್ಣ ಕೃಪಾಕಟಾಕ್ಷ ಸಿಗುತ್ತದೆ . ಅದರಲ್ಲೂ ದೇವಿ ಭಾಗವತ, ದುರ್ಗಾ ಸಪ್ತಶತಿ ಪಾರಾಯಣ, ಚಂಡಿಕಾ ಹೋಮಗಳಿಂದ ನಮ್ಮ ಕಷ್ಟಗಳು ದೂರವಾಗಿ ಜೀವನದಲ್ಲಿ ಶಾಶ್ವತ ಶಾಂತಿ ಲಭಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top