fbpx
ಮನೋರಂಜನೆ

ಮೆಟ್ಟಿಲುಗಳನ್ನು ಹತ್ತಿ ಅಧಿದೇವತೆ ಚಾಮುಂಡಿ ತಾಯಿಯ ದರ್ಶನ ಪಡೆದ ಸ್ಯಾಂಡಲ್ ವುಡ್ ನ ಸಿಂಪಲ್ ಬ್ಯೂಟಿ ಹರಿಪ್ರಿಯಾ

ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಉಗ್ರಂ ಖ್ಯಾತಿಯ ಸ್ಯಾಂಡಲ್ ವುಡ್ ನಟಿ ಹರಿಪ್ರಿಯ ಸದ್ಯ ‘ಡಾಟರ್​ ಆಫ್​ ಪಾರ್ವತಮ್ಮ’ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಹಿರಿಯ ನಟಿ ಸುಮಲತಾ ಅಂಬರೀಶ್ ಪಾರ್ವತಮ್ಮ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ ಇನ್ನು ಹರಿಪ್ರಿಯ ಅವರ ಮಗಳ ಪಾತ್ರ ಮಾಡುತ್ತಿದ್ದಾರೆ. ಸಿನಿಮಾ ನಟ ನಟಿಯರು ಇಂಥದ್ದೇ ಸಣ್ಣ ಪುಟ್ಟ ಕೆಲಸ ಮಾಡಿದರೂ ಅದು ಸುದ್ದಿಯಾಗುತ್ತದೆ ಎನ್ನುವ ಮಾತಿಗೆ ಬಹುಷಃ ಇದಕ್ಕಿಂತ ಒಳ್ಳೆಯ ನಿದರ್ಶನ ಬೇಕಾಗಿಲ್ಲ ಅನಿಸುತ್ತದೆ. ಹೌದು ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಹರಿಪ್ರಿಯಾ ಇಮೇಜುಗಳಾಚೆಗೆ ಪಾತ್ರವನ್ನು ಪಾತ್ರದಂತೆಯೇ ಪರಿಗಣಿಸಿ ನಟಿಸೋ ನಟಿ. ಆಕೆಯ ವೃತ್ತಿಪರತೆಗೆ ನೀರ್‌ದೋಸೆ ಚಿತ್ರದ ಪಾತ್ರಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಇಂಥಾ ಹರಿಪ್ರಿಯಾ ಕೇವಲ ನಟನೆಯಲ್ಲಿ ಮಾತ್ರವಲ್ಲದೇ ಸಾಕಷ್ಟು ವಿಚಾರಗಳಲ್ಲೂ ಆಗಾಗ್ಗೆ ಸುದ್ದಿಗೆ ಬರುತ್ತಿರುತ್ತಾರೆ.

 

 

 

ಸೋಮವಾರ ವಿಶ್ವವಿಖ್ಯಾತ ನಾಡಹಬ್ಬ ದಸರಾ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಯುವ ದಸರಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ಹರಿಪ್ರಿಯ, ಇಂದು ಬೆಳಗ್ಗೆ 1,001 ಮೆಟ್ಟಿಲುಗಳನ್ನ ಹತ್ತಿ ಚಾಮುಂಡೇಶ್ವರಿ ದರ್ಶನ ಪಡೆದರು,ಈ ನಡುವೆ ಮಾತನಾಡಿದ ಹರಿಪ್ರಿಯಾ ಮೈಸೂರೆಂದರೆ ನನಗೆ ಇಷ್ಟದ ಊರು. ಬೆಟ್ಟ ಹತ್ತವುದು ನನಗೆ ಇಷ್ಟ ಎಂದು ಹೇಳಿದರು ನಂತರ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ರಾತ್ರಿ ನಡೆದ ನಾಲ್ಕನೇ ದಿನದ ಯುವ ದಸರಾ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟಿಯರಾದ ಹರಿಪ್ರಿಯಾ, ಶುಭಾಪುಂಜಾ, ಸೋನುಗೌಡ ಹಾಗೂ ಇನ್ನಿತರ ನಟಿಯರ ಡ್ಯಾನ್ಸ್ ಯುವ ದಸರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top