ಹೆಚ್ಚಿನ

ವಿಶ್ವಪ್ರಸಿದ್ದ ಮೈಸೂರು ಪಾಕ್ ಹುಟ್ಟಿದ್ದೇಗೆ,ಈ ‘ಪಾಕ’ಕ್ಕೂ ಮೈಸೂರಿಗೂ ಇರುವ ಸಂಬಂಧವೇನು ಗೊತ್ತಾ

ಸಾಂಸ್ಕತಿಕ ನಗರಿ ಮೈಸೂರು ಅಂದ್ರೆ ನಮಗೆ ಮೊದಲಿಗೆ ನೆನಪಿಗೆ ಬರೋದು ಕಲೆ, ಸಂಸ್ಕತಿ, ಶಿಕ್ಷಣ ಹಾಗೂ ಇನ್ನು ಹಲವು ಕ್ಷೇತ್ರಗಳಲ್ಲಿ ತುಂಬಾ ಫೇಮಸ್ ಮೈಸೂರು .ಮುಖ್ಯವಾಗಿ ಸಿಹಿ ತಿಂಡಿ ಮೈಸೂರು ಪಾಕ್ ಅಲ್ಲಿ ಮೈಸೂರ್ ಇದೆ ,ಮೈಸೂರಿಗೂ ಮೈಸೂರು ಪಾಕ್ ಗೂ ಇರುವ ಸಂಬಂಧವೇನು ಗೊತ್ತಾ?

ಮೈಸೂರು ಹೆಸರನ್ನು ಅನೇಕ ವಸ್ತುಗಳ ಜೊತೆ ನಾವು ಕೇಳಿರುತ್ತಿವೆ ,ಉದಾಹರಣೆಗೆ ಮೈಸೂರು ಪಾಕ್​, ಮೈಸೂರು ಪೇಟ, ಮೈಸೂರು ಸಿಲ್ಕ್, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ.ಅದರಲ್ಲಿ ಮೈಸೂರು ಪಾಕ್​ ಅಂದ ತಕ್ಷಣ ಹಲವರ ಬಾಯಲ್ಲಿ ನೀರೂರುತ್ತದೆ. ಅಂತಹ ವಿಶೇಷ ಸಿಹಿತಿಂಡಿಯ ಇತಿಹಾಸವನ್ನು ನಾವು ನಿಮಗೆ ಹೇಳುತ್ತಿರಿಮೈಸೂರು ಪಾಕ್​, ಕನ್ನಡನಾಡಿನ ಜನಪ್ರಿಯ ಸಿಹಿ ತಿಂಡಿ. ದೇಶ-ವಿದೇಶಗಳಲ್ಲಿ ಇದರ ಖ್ಯಾತಿ ಹಬ್ಬಿದೆ. ಅಂದ ಹಾಗೆ, ಈ ಸಿಹಿ ತಿಂಡಿ ತಯಾರಿಸಲು ಆರಂಭಿಸಿದ ಇತಿಹಾಸವು ಕೂಡ ತುಂಬಾನೇ ಕುತೂಹಲಕಾರಿಯಾಗಿದೆ.

 

 

 

1935ರಲ್ಲಿ ಮೈಸೂರು ಅರಮನೆಯ ಮುಖ್ಯ ಅಡುಗೆ ಭಟ್ಟನ ಹೆಸರು ಕಾಕಸುರ ಮಾದಪ್ಪ,ಈತನೇ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಊಟ ತಯಾರಿಸುತ್ತಿದ್ದ ವ್ಯಕ್ತಿ.ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹೊರಗಡೆ ಸುತ್ತಾಡಿ ಬರುವ ಮುನ್ನ ಏನಾದರೂ ವಿಶೇಷ ತಿಂಡಿ ಸಿದ್ಧಪಡಿಸಬೇಕು ಎಂಬ ಚಟಪಟಿಕೆ ಕಾಕಸುರ ಮಾದಪ್ಪನದು.ಒಂದು ದಿನ ಯಾವ ಸಿಹಿತಿಂಡಿ ಮಾಡಬೇಕು ಎಂದು ಚಿಂತೆಗೀಡಾಗಿದ ಭಟ್ಟರು ಏನು ಮಾಡುವುದು ತಿಳಿಯದೆ ಕಡಲೆ ಹಿಟ್ಟು, ತುಪ್ಪ, ಸಕ್ಕರೆ ಸೇರಿಸಿ ಒಂದು ಪಾಕ ತಯಾರಿಸುತ್ತಾನೆ ,ಅದನ್ನು ತಿಂದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಆ ಪಾಕವನ್ನು ಸವೆದು ತುಂಬಾ ಇಷ್ಟಪಟ್ಟರು ನಂತರ ಭಟರನ್ನು ಸಿಹಿತಿಂಡಿಯ ಹೆಸರು ಏನು ಎಂದರು ತಬ್ಬಿಬ್ಬಾದ ಮಾದಪ್ಪನವರು ಸಿಹಿ ತಿಂಡಿಯ ಹೆಸರು ನನಗೂ ಕೂಡ ತಿಳಿದಿಲ್ಲವೆಂದು ತಲೆ ಅಲ್ಲಾಡಿಸಿದರಂತೆ. ಈ ತಿಂಡಿಯನ್ನು ಹೇಗೆ ಮಾಡಿದೆ ಎಂದು ಮತ್ತೆ ಮಹಾರಾಜರು ಪ್ರಶ್ನೆ ಮಾಡಿದ್ದರಂತೆ.ಅದಕ್ಕೆ ಭಟ್ಟರು ‘ಪಾಕ’ದಿಂದ ಮಾಡಿದ್ದು ಎಂದು ಹೇಳಿದರಂತೆ ಅದಕ್ಕೆ ಮಹಾರಾಜರು ಓ ಪಾಕದಿಂದ ಮಾಡಿದ್ದ, ಇದಕ್ಕೆ ಮೈಸೂರು ಎಂದು ಹೆಸರು ಸೇರಿಸೋಣ” ಎಂದರಂತೆ. ಮಹಾರಾಜರು ಇಟ್ಟ ಮೈಸೂರು ಪಾಕ ಇಂದು ಮೈಸೂರು ಪಾಕ್ ಆಗಿ ವಿಶ್ವಪ್ರಸಿದ್ದವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top