fbpx
ಮನೋರಂಜನೆ

ಬ್ರೇಕಿಂಗ್ ನ್ಯೂಸ್: ಡಿಸೆಂಬರ್’ನಲ್ಲಿ ತೆರೆಕಾಣಲಿದೆಯಂತೆ ‘ಮುನಿರತ್ನ ಕುರುಕ್ಷೇತ್ರ’

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಯಾವಾಗಲೋ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಲೇ ಇದೆ.. ಚಿತ್ರ ತಡವಾಗುತ್ತಿರುವುದಕ್ಕೆ ಕಾರಣವೇನು? ಕುರುಕ್ಷತ್ರದಲ್ಲಿ ಶೀತಲ ಸಮರವೊಂದು ಶುರುವಾಗಿದೆಯಾ? ಅಷ್ಟಕ್ಕೂ ಈ ಚಿತ್ರದ ಹೀರೋ ಯಾರು? ಚಿತ್ರದ ವಿರುದ್ಧ ದರ್ಶನ್ ಮುನಿಸಿಕೊಂಡಿದ್ದಾರಾ? ಎಂಬಂಥಾ ಬಗೆಬಗೆಯ ಪ್ರಶ್ನೆಗಳು, ನಾನಾ ವೆರೈಟಿಯ ರೂಮರುಗಳು ಎಲ್ಲೆಂದರಲ್ಲಿ ಯಾರಿಂದ ಹರಿದಾಡುತ್ತಿದೆಯೋ ಗೊತ್ತಿಲ್ಲ. ಆದರೆ ಇಂಥಾ ವಿದ್ಯಮಾನಗಳು ಸ್ವತಃ ದರ್ಶನ್ ಅಭಿಮಾನಿಗಳಲ್ಲಿ ಅಸಹನೆ ಮೂಡಿಸಿರುವುದು ಸುಳ್ಳಲ್ಲ!

ದರ್ಶನ್ ಅವರಿಗೂ ಮುನಿರತ್ನ ಅವರಿಗೂ ಭಿನ್ನಾಭಿಪ್ರಾಯವುಂಟಾಗಿದೆ, ದರ್ಶನ್ ಅವರು ನಿಖಿಲ್ ಕುಮಾರ್ ಅವರ ಅಭಿಮನ್ಯು ಪಾತ್ರದ ವಿರುದ್ಧ ಬೇಸರ ಗೊಂಡಿದ್ದಾರೆ, ಮಹಾಭಾರತದಲ್ಲಿ ಅಭಿಮನ್ಯು ಪಾತ್ರವಿರುದು ಒಂದು ಸ್ವಲ್ಪವೇ ಆಗಿದ್ದರೂ ಕುರುಕ್ಷೇತ್ರ ಸಿನಿಮಾದಲ್ಲಿ ಹೆಚ್ಚು ಬಿಲ್ಡಪ್ ಕೊಟ್ಟು ಚಿತ್ರೀಸಿದ್ದಾರೆ ಎಂದು ದಚ್ಚು ಮುನಿಸಿಕೊಂಡಿದ್ದಾರೆ” ಎಂಬಂತ ನಾನಾ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಈ ಸುದ್ದಿಗಳನ್ನ ಮುನಿರತ್ನ ಸಾರಾಸಗಟಾಗಿ ತಳ್ಳಿ ಹಾಕಿದ್ದರು.. ಅಲ್ಲದೇ ಚಿತ್ರ ತಡವಾಗುತ್ತಿರುವುದಕ್ಕೆ ಅಸಲಿ ಕಾರಣವೇನು ಎಂಬುದನ್ನ ಮುನಿರತ್ನ ಬಿಚ್ಚಿಟ್ಟಿದ್ದರು.

ತಡವಾಗಲು ಕಾರಣವೇನು?
“ಕುರುಕ್ಷೇತ್ರ ದೊಡ್ಡ ಸಿನಿಮಾ. ಇಲ್ಲಿ ಕೆಲಸ ಮಾಡಿರುವವರೆಲ್ಲಾ ತುಂಬಾ ದೊಡ್ಡವರು. ಇಡೀ ಚಿತ್ರಕ್ಕೆ ನಾವು ಅಂದುಕೊಂಡಂತೆ ಗ್ರಾಫಿಕ್ಸ್ ವರ್ಕ್ ಬರುತ್ತಿಲ್ಲ. ಪದೇ ಪದೇ ರೀ ವರ್ಕ್ ಮಾಡುತ್ತಿದ್ದೇವೆ. ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ಸಿಜಿ ಕೆಲಸ ನಡೆಯುತ್ತಿಲ್ಲ.. ಈಗ ಮಾಡಿರುವ ಸಿಜಿ ಕೆಲಸ ನನಗೆ ಇಷ್ಟವಾಗುತ್ತಿಲ್ಲ. ಕುರುಕ್ಷೇತ್ರ ತಡವಾಗುತ್ತಿರುವುದಕ್ಕೆ ಇದೇ ಮುಖ್ಯ ಕಾರಣ. ಒಬ್ಬ ನಿರ್ಮಾಪಕನಾಗಿ ನನಗೇ ಖುಷಿ ಕೊಡುವಷ್ಟು ಕೆಲಸ ಮಾಡುವವರೆಗೂ ಈ ಚಿತ್ರವನ್ನು ನಾನು ತೆರೆಗೆ ತರಲ್ಲ. ಇದರ ನಡುವೆ ಬೇರೆ ಯಾವ ಚಿತ್ರಗಳು ತೆರೆಗೆ ಬಂದರೂ ನಾನು ಆ ಬಗ್ಗೆ ಯೋಚಿಸಲ್ಲ. ಅದನ್ನು ಯಾವ ಕ್ವಾಲಿಟಿಯಲ್ಲಿ ತೋರಿಸಬೇಕೋ ಎನ್ನುವ ಕನಸು ನನಗಿದೆ. ಅದು ಈಡೇರುವ ತನಕ ಕುರುಕ್ಷೇತ್ರ ತೆರೆ ಮೇಲೆ ಬರಲ್ಲ. ” ಎನ್ನುತ್ತಾರೆ ನಿರ್ಮಾಪಕ ಮುನಿರತ್ನ.

ನವೆಂಬರ್ 10ರಂದು ಕುರುಕ್ಷೇತ್ರ ನೋಡಲಿದ್ದಾರೆ:
ಕುರುಕ್ಷೇತ್ರ ಚಿತ್ರಕ್ಕೆ ಮುಂಬೈ, ಹೈದರಾಬಾದ್, ಚೆನ್ನೈ ಬೆಂಗಳೂರಿನಲ್ಲಿ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿವೆಯಂತೆ.. ನವೆಂಬರ್ 05ರ ವೇಳೆಗೆಲ್ಲಾ ಅದು ಕಂಪ್ಲೀಟ್ ಆಗಲಿದೆಯಂತೆ. ಇನ್ನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿದಿರುವ ಕಾರಣ ಮುನಿರತ್ನ ಅವರು ನವೆಂಬರ್ 10 ರಂದು 2ಡಿ ವರ್ಷನ್ ನಲ್ಲಿ ಕುರುಕ್ಷೇತ್ರ ನೋಡಲಿದ್ದಾರಂತೆ. ನೋಡಿದಾಗ ಅವರಿಗೆ ತೃಪ್ತಿಯಾದ್ರೆ, ತಕ್ಷಣವೇ ರಿಲೀಸ್ ಡೇಟ್ ಫಿಕ್ಸ್ ಮಾಡ್ತಾರಂತೆ. ಇಲ್ಲವಾದಲ್ಲಿ, ಮತ್ತಷ್ಟು ಹೆಚ್ಚುವರಿ ಕೆಲಸಕ್ಕೆ ಸೂಚಿಸುತ್ತಾರಂತೆ. ” ನನ್ನ ಸಿನಿಮಾ ಬಗ್ಗೆ ಮೊದಲು ನಾನು ತೃಪ್ತಿಯಾಗಬೇಕು, ನಂತರ ಅಭಿಮಾನಿಗಳ ಮುಂದೆ ಸಿನಿಮಾ ತರಬೇಕು., ನನಗೆ ಇಷ್ಟವಾಗಿಲ್ಲ ಅಂದ್ರೆ, ಇನ್ನು ಫ್ಯಾನ್ಸ್ ಒಪ್ಪಿಕೊಳ್ತಾರಾ” ಎನ್ನುತ್ತಾರೆ ನಿರ್ಮಾಪಕ ಮುನಿರತ್ನ.

ಡಿಸೆಂಬರ್ ವೇಳೆಗೆ ರಿಲೀಸ್:
ನವೆಂಬರ್ ಹತ್ತರಂದು ‘ಕುರುಕ್ಷೇತ್ರ’ ಸಿನಿಮಾ ನೋಡುವ ಮುನಿರತ್ನ ಅವರಿಗೆ ಚಿತ್ರದ ಗ್ರಾಫಿಕ್ಸ್ ಹಾಗೊಮ್ಮೆ ತೃಪ್ತಿ ತಂದರೆ ಕುರುಕ್ಷೇತ್ರ ಸಿನಿಮಾವನ್ನು ಡಿಸೆಂಬರ್ ತಿಂಗಳಿನಲ್ಲೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರಂತೆ. ಹೀಗಂತ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ, ಆದರೆ ಈ ಸುದ್ದಿ ನಿಜವೋ? ಅಥವಾ ಸುಳ್ಳೋ? ಎಂದು ನಿರ್ಮಾಪಕ ಮುನಿರತ್ನ ಸ್ಪಷ್ಟನೆ ನೀಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top