ದೇವರು

ನವರಾತ್ರಿಯ ಸಮಯದಲ್ಲಿ ಈ 2 ಪೂಜೆಯನ್ನು ಮಾಡಿದ್ರೆ ಸಾಕಂತೆ ಧನ ಪ್ರಾಪ್ತಿಯಾಗುತ್ತಂತೆ 

ನವರಾತ್ರಿಯ ಈ ಸುಸಂದರ್ಭದಲ್ಲಿ ದುರ್ಗಾ ದೇವಿಯ 9 ದಿನ 9 ರೂಪಗಳನ್ನಿ ಭಕ್ತಿ,ಶ್ರದ್ಧೆಯಿಂದ ಆರಾಧಿಸಿದರೆ ದೇವಿ ಪ್ರಸನ್ನಳಾಗಿ  ಅವಳ ಕೃಪಾ ಕಟಾಕ್ಷ ನಮಗೆ ಲಭಿಸುತ್ತದೆ . ದೇವಿಗೆ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಸಮರ್ಪಿಸಿ ಪ್ರತಿದಿನ ಎರಡು ಬಾರಿ ಲಲಿತ ಸಹಸ್ರನಾಮವನ್ನು ಪಠಿಸಬೇಕು.ಈ ಒಂಬತ್ತು ದಿನಗಳಲ್ಲಿ ಮುತ್ತೈದೆಯರನ್ನು ದೇವಿಯ ಸ್ವರೂಪವೆಂದು ಭಾವಿಸಿ, ಅವರನ್ನು ಮನೆಗೆ ಕರೆದು ತಾಂಬೂಲವನ್ನು ಮತ್ತು ಮಂಗಳಕರ ವಸ್ತುಗಳನ್ನು ನೀಡಿ ಅವರ ಆಶೀರ್ವಾದವನ್ನು ತೆಗೆದುಕೊಳ್ಳಬೇಕು.

 

 

 

ಈ ಪೂಜೆ ಮಾಡುವುದನ್ನು ಸುಹಾಸಿನಿ ಪೂಜೆ ಎನ್ನುತ್ತಾರೆ. ಹೀಗೆ ಸುಹಾಸಿನಿ ಪೂಜೆ ಮಾಡುವುದರಿಂದ ದೇವಿಯ ಅನುಗ್ರಹ ಲಭಿಸುತ್ತದೆ.ಇದರ ಜೊತೆ ಕುಮಾರಿ ಪೂಜೆಯನ್ನು ಸಹ ನೀವು ಮಾಡುವುದರಿಂದ ದೇವಿಯ ಸಂಪೂರ್ಣ ಅನುಗ್ರಹ ಲಭಿಸುತ್ತದೆ.ಕುಮಾರಿ ಪೂಜೆಯೆಂದರೆ 9 ವರ್ಷದ ಒಳಗಿನ ಚಿಕ್ಕ ಹುಡುಗಿಯರನ್ನು ಮನೆಗೆ ಕರೆದು ಅವರಿಗೆ ದುರ್ಗಾದೇವಿಯ ಅಲಂಕಾರ ಮಾಡಿ, ಅವರಿಗೆ ಪೂಜೆಯನ್ನು ಮಾಡಿ, ಅವರ ಆಶೀರ್ವಾದವನ್ನು ತೆಗೆದುಕೊಳ್ಳಬೇಕು.ಹೀಗೆ 2 ಪೂಜೆಯನ್ನು ಮಾಡಿದರೆ ಸಾಕು, ದೇವಿಯ ಕೃಪಾಕಟಾಕ್ಷ ನಿಮಗೆ ತಪ್ಪದೆ ಸಿಗುತ್ತದೆ. ಈ ಪೂಜೆಯನ್ನು ಮೂರು ದಿನ ಅಥವಾ ಒಂಬತ್ತು ದಿನಗಳವರೆಗೆ ನವರಾತ್ರಿಯ ಸಮಯದಲ್ಲಿ ಮಾಡಬಹುದು.

ಹೀಗೆ ಒಂಬತ್ತು ದಿನಗಳ ಪೂಜೆ ಮಾಡಲು ಸಮಯ ಇಲ್ಲವೆಂದರೆ ಸುಹಾಸಿನಿ ಪೂಜೆಯನ್ನು ಮಹಾನವಮಿಯ ದಿನ , ಕುಮಾರಿ ಪೂಜೆಯನ್ನು ದುರ್ಗಾಷ್ಟಮಿಯ ದಿನ ಮಾಡಬಹುದು.ಈ ಒಂಬತ್ತು ದಿನಗಳಲ್ಲಿ ದೇವಿಯನ್ನು ಬಾಲ ತ್ರಿಪುರ ಸುಂದರಿ ಗಾಯತ್ರಿ ದೇವಿ, ಅನ್ನಪೂರ್ಣೆ, ಲಲಿತಾ, ತ್ರಿಪುರ ಸುಂದರಿ, ಶ್ರೀ ಮಹಾಲಕ್ಷ್ಮಿ, ಸರಸ್ವತಿ, ದುರ್ಗಾದೇವಿ, ಮಹಿಷಾಸುರ ಮರ್ದಿನಿ, ರಾಜರಾಜೇಶ್ವರಿ ಹೀಗೆ ಒಂಭತ್ತು ರೂಪದಲ್ಲಿ ದೇವಿಯನ್ನು ಅಲಂಕರಿಸಿ ಪೂಜಿಸಲಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top