ಮನೋರಂಜನೆ

ಸ್ಯಾಂಡಲ್‍ವುಡ್ ನಟಿ ಹುಬ್ಬಳ್ಳಿ ಹುಡುಗಿ ನೇಹಾ ಪಾಟೀಲ್‍ಗೆ ಕೂಡಿ ಬಂದ ಕಂಕಣ ಭಾಗ್ಯ

ಮೂಲ ಹುಬ್ಬಳ್ಳಿಯಾವರಾದ ನೇಹಾ ಪಾಟೀಲ್ ಕನ್ನಡದ ಸಂಕ್ರಾಂತಿ, ಸಂಯುಕ್ತ, ಸಿತಾರಾ, ವರ್ಧನ, ಟೈಟ್ಲು ಬೇಕಾ, ಚಿತ್ರಗಳಲ್ಲಿ ನಟಿಸಿದ್ದಾರೆ.ಮಾಡಿದ ಚಿತ್ರಗಳು ಕಡಿಮೆಯಾದರು ಅವರು ಗಳಿಸಿರುವ ಫೇಮ್ ಹಾಗೂ ಹೆಸರು ತುಂಬಾ ದೊಡ್ಡದು,ಸಿನಿಮಾದಲ್ಲಿ ನಟಿಸುವ ಪ್ರತಿಭೆ ಇರುವ ಈ ನಟಿ ಡಾನ್ಸ್ ಕೂಡ ಅಷ್ಟೇ ಸಲೀಸಾಗಿ ಸೂಪರ್ ಆಗಿ ಮಾಡುತ್ತಾರೆ .ಕೆಲವು ತಿಂಗಳ ಹಿಂದೆ ನೇಹಾ ಡಾನ್ಸ್ ಡಾನ್ಸ್ ಎನ್ನುವ ಒಂದು ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ರನ್ನರ್ ಆಗಿ ಆ ಕಾರ್ಯಕ್ರಮದಿಂದ ಹೊರಬಂದರು ,ಸಿನಿಮಾದ ನಂತರ ಅದೃಷ್ಟ ಪರೀಕ್ಷೆ ನಡೆಸಿ ಅನೇಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ನೇಹಾ ಸಾಕಷ್ಟು ಪ್ರಶಂಸೆ ಗಳಿಸಿದ್ದರು,ಇದುವರೆಗೂ ನೇಹಾ ಅವರು ಆಯ್ಕೆ ಮಾಡಿಕೊಂಡಿರುವ ಚಿತ್ರದ ಪಾತ್ರಗಳು ಸಾಕಷ್ಟು ಭಿನ್ನವಾಗಿದ್ದು, ಸವಾಲಿನಿಂದ ಕೂಡಿತ್ತು, ಈಗ ಮದುವೆಯಾಗಲು ರೆಡಿಯಾಗಿದ್ದಾರೆ ನೇಹಾ ಪಾಟೀಲ್.

 

 

 

ಇದೇ ತಿಂಗಳು 19 ನೇ ತಾರೀಖು ನೇಹಾ ಪಟೇಲ್ ಬೆಂಗಳೂರಿನಲ್ಲಿ ಎಂಜಿನಿಯರ್ ಪ್ರಣವ್ ಜೊತೆ ನೇಹಾ ಪಾಟೀಲ್ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.ಸದ್ಯ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ನೇಹಾ ಮುಂದಿನ ವರ್ಷ ಪ್ರಣವ್ ಜೊತೆ ಫೆಬ್ರವರಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಹಿರಿಯರ ನಿಶ್ಚಯದ ಮೇರೆಗೆ ನೇಹಾ ಈ ಮದುವೆಗೆ ಒಪ್ಪಿಕೊಂಡಿದ್ದಾರೆ. ಇದೀಗ ನೇಹಾ ನಾಲ್ಕು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಮದುವೆಯ ಬಳಿಕವೂ ಅಭಿನಯ ಮುಂದುವರಿಸಲು ನೇಹಾ ನಿರ್ಧರಿಸಿದ್ದಾರೆ. ಅಭಿನಯಕ್ಕೆ ಪತಿ ಮನೆ ಕಡೆಯಿಂದ ಅಡ್ಡಿ ಇಲ್ಲದಿರೋದಾಗಿ ನೇಹಾ ಕುಟುಂಬ ತಿಳಿಸಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top