ಮನೋರಂಜನೆ

ಕೋಟ್ಯಧಿಪತಿ’ ಕುರ್ಚಿಯಲ್ಲಿ ಮತ್ತೆ ಕೂರಲಿದ್ದಾರೆ ಪುನೀತ್ ರಾಜಕುಮಾರ್?

ಕನ್ನಡ ಕಿರುತೆರೆಯ ದಿಕ್ಕನ್ನೇ ಹೊಸ ದಾರಿಯತ್ತ ಕೊಂಡೋಯ್ದಿದ್ದ ಕೋಟ್ಯಧಿಪತಿ ಕಾರ್ಯಕ್ರಮ ಎಂಬ ಕಾರ್ಯಕ್ರಮ ಯಾವ ಮಟ್ಟಿಗೆ ಜನಮಾನಸದಲ್ಲಿ ಹೆಸರು ಮಾಡಿತ್ತು ಅಂತ ಬಿಡಿಸಿ ಹೇಳಬೇಕಾಗಿಲ್ಲ, ಎರಡು ಸೀಸನ್ ಗಳನ್ನೂ ಯಶಸ್ವಿಯಾಗಿ ನಡೆದಿದ್ದ ಈ ಕಾರ್ಯಕ್ರಮ ಅದ್ಯಾಕೋ ಗೊತ್ತಿಲ್ಲ ಮುಂದಿನ ಸೀಸನ್’ಗಳು ಪ್ರಾರಂಭವಾಗಿರಲಿಲ್ಲ. ಇತ್ತೀಚಿಗೆ ಮೂರನೇ ಸೀಸನ್ ‘ರಮೇಶ್ ಅರವಿಂದ್’ ಸಾರಥ್ಯದಲ್ಲಿ ನಡೆದಿತ್ತು ಆದರೆ ಷೋ ಮಾತ್ರ ಹೇಳಿಕೊಳ್ಳುವಷ್ಟರ ಮಟ್ಟಿಗೆ ಹಿಟ್ ಆಗಿರಲಿಲ್ಲ..

‘ನಟ ಸಾರ್ವಭೌಮ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕಾರಣಕ್ಕೆ ಪುನೀತ್ ರಾಜಕುಮಾರ್ ಅವರು ಮೂರನೇ ಸೀಸನ್ ಅನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನಟ ರಮೇಶ್ ಅರವಿಂದ್ ಮೂರನೇ ಸೀಸನ್ ನಡೆಸಿಕೊಟ್ಟಿದ್ದರು. ಅದು ಮುಗಿದು ಸ್ವಲ್ಪ ದಿನಗಳೇ ಆಗಿದ್ದರೂ ಅದಾಗಲೇ ಮುಂದಿನ ಸೀಸನ್ ಅನ್ನು ಶುರುಮಾಡಲು ತೆರೆ ಮರೆಯಲ್ಲಿ ಸಿದ್ದತೆಗಳು ಜೋರಾಗಿ ನಡೆಯುತ್ತಿವೆಯಂತೆ.

 

 

ನೂತನ ವಿನೂತನವಾಗಿ ಆದಷ್ಟು ಬೇಗ ನಿಮ್ಮ ಮುಂದೆ ಬರಲು ಸಜ್ಜಾಗಿದೆ. ಮೂಲಗಳ ಪ್ರಕಾರ ನಾಲ್ಕನೇ ಸೀಸನ್‌ನಲ್ಲಿ ಮತ್ತೆ ಪುನೀತ್ ಅವರೇ ನಿರೂಪಣೆ ಮಾಡಲಿದ್ದಾರಂತೆ. ಅಷ್ಟೇ ಅಲ್ಲ, ಮುಂದಿನ ಸೀಸನ್‌ ‘ಕೋಟ್ಯಧಿಪತಿ’ ಪ್ರಸಾರವಾಗುವ ಚಾನೆಲ್ ಕೂಡ ಬದಲಾಗಲಿದೆಯಂತೆ. ‘ಕೋಟ್ಯಧಿಪತಿ’ಯ ಮುಂದಿನ ಸೀಸನ್‌ ಅನ್ನು ವಯಕಾಮ್ 18 ಬಳಗ ಕೊಂಡುಕೊಂಡಿದ್ದು, ಕಾರ್ಯಕ್ರಮ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ’’ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಈ ಕುರಿತು ಸ್ವಾರ್‌ ಸುವರ್ಣ ಆಗಲಿ, ಕಲರ್ಸ್‌ ವಾಹಿನಿಯಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top