ಮನೋರಂಜನೆ

ಚಂದನ್-ನಿವೇದಿತಾಗೆ ‘ಅಕ್ಟೋಬರ್ 15’ ಮರೆಯಲಾಗದ ದಿನ ಅಂತೇ.

ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮುದ್ದಾದ ಗೆಳೆತನ ಎಲ್ಲರ ಮನ ಗೆದ್ದಿತ್ತು. ಚಂದನ್​​ ಹಾಗೂ ನಿವೇದಿತಾ ಇಬ್ಬರೂ ಒಳ್ಳೆಯ ಸ್ನೇಹಿತರು ಎನ್ನುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಅದಕ್ಕೆ ಸಾಕ್ಷಿಯಾಗಿ ಈಗಾಗಲೇ ಇವರಿಬ್ಬರೂ ಒಟ್ಟಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.. ಅಲ್ಲದೇ ಒಟ್ಟಿಗೆ ಒಂದು ಹಾಡನ್ನು ಕೂಡ ಹಾಡಿದ್ದಾರೆ.. ಇದೀಗ ಇವರಿಬ್ಬರ ಸ್ನೇಹಕ್ಕೆ ಒಂದು ವರ್ಷ ತುಂಬಿದೆ. ಅಕ್ಟೋಬರ್ 15 ನೇ ತಾರೀಖು ಇವರಿಬ್ಬರ ಜೀವನದಲ್ಲಿ ಮರೆಯಲಾಗದ ದಿನವಾಗಿದೆ.

ಹೌದು ಅವರಿಬ್ಬರ ಸ್ನೇಹಕ್ಕೆ ಅಕ್ಟೋಬರ್ 15ರಂದು ಒಂದು ವರ್ಷ ತುಂಬಿದೆ. ಕಳೆದ ವರ್ಷ ಇದೇ ದಿನಾಂಕದಂದು ಬಿಗ್ ಬಾಸ್ ಮನೆಯಲ್ಲಿ ಮೊದಲ ಭಾರಿ ಭೇಟಿಯಾಗಿದ್ದರು. ಇಬ್ಬರ ಸ್ನೇಹ 1 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ಇಬ್ಬರು ಕೂಡ ಇನ್‍ಸ್ಟಾಗ್ರಾಮ್‍ನಲ್ಲಿ ಸ್ನೇಹದ ಸಂಭ್ರಮಾಚರಣೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

 

View this post on Instagram

Its been a year I met you in Bigg Boss… And our friendship, the bond which we share is just increasing day by day.. No matter what the whole world says… I know about u and u know about me… And that's what is important ♥ #biggboss5kannada 💕❤ @chandanshettyofficial 😊😊

A post shared by Niveditha Gowda 👑 (@niveditha__gowda) on

 

“ನಾನು ನಿನ್ನನ್ನು ಭೇಟಿಯಾಗಿ ಇಂದಿಗೆ ಒಂದು ವರ್ಷ ಆಯ್ತು. ಬಿಗ್​​ಬಾಸ್​​ನಲ್ಲಿ ನಾನು ನಿನ್ನನ್ನು ಭೇಟಿಯಾಗಿದ್ದು, ದಿನದಿಂದ ದಿನಕ್ಕೆ ನಮ್ಮ ಸ್ನೇಹ ಹೆಚ್ಚಾಗುತ್ತಲೇ ಇದೆ. ನಮ್ಮ ಸಂಬಂಧದ ಬಗ್ಗೆ ಪ್ರಪಂಚ ಏನೇ ಹೇಳಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾವೇನು ಎನ್ನುವುದು ನಮಗೆ ಗೊತ್ತು” ಎಂದು ನಿವ್ವಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾಳೆ.

 

 

ಇನ್ನು ಚಂದನ್ ಕೂಡ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ”ನಿಜವಾದ ಸ್ನೇಹಿತರು ಯಾವತ್ತಿಗೂ ದೂರವಾಗುವುದಿಲ್ಲ. ನೀನು ಎಷ್ಟೇ ದೂರದಲ್ಲಿದ್ದರೂ ನನ್ನ ಹೃದಯದಲ್ಲಿ ಯಾವಾಗಲೂ ಇರುತ್ತೀಯಾ. ನನ್ನ ಜೀವನದಲ್ಲೇ ನೀನು ನನ್ನ ಅತ್ಯುತ್ತಮ ಗೆಳತಿ ಎಂದು ಹೇಳಲು ನನಗೆ ತುಂಬಾ ಸಂತೋಷವಾಗುತ್ತದೆ. ಇಂದಿಗೆ ನಮ್ಮ ಸ್ನೇಹ ಒಂದು ವರ್ಷದ ಸಂಭ್ರಮ ಆಚರಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top