ಸಮಾಚಾರ

“ಗೌಡರು ಇಲ್ಲಿ ಬಂದು ರಾಜಕಾರಣ ಮಾಡಿದರೇ ಅಡ್ರೆಸ್ಸ್ ಇಲ್ಲದೇ ಹೋಗ್ತಾರೆ” ಡಿಕೆಶಿ ವಿರುದ್ಧ ಶ್ರೀರಾಮುಲು ವಾಗ್ದಾಳಿ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಶ್ರೀರಾಮುಲು ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧದ ವಾಕ್ಸಮರ ಮತ್ತಷ್ಟು ಹೆಚ್ಚಾಗುತ್ತಿದೆ. ಇತ್ತೀಚಿಗೆ ‘‘ಡಿಕೆಶಿಗೆ ಎರಡು ಕೊಂಬಗಳು ಇವೆಯಾ, ಡಿಕೆಶಿ ತಾಕತ್ತಿದ್ದರೆ ಬಳ್ಳಾರಿಗೆ ಬರಲಿ, ಬಳ್ಳಾರಿ ಮಗಳು ಶಾಂತಾ ಗೆಲ್ಲುತ್ತಾಳಾ? ರಾಮನಗರದ ಡಿಕೆಶಿದು ನಡೆಯುತ್ತಾ? ನೋಡೇ ಬಿಡುತ್ತೇವೆ’’ ಎನ್ನುವ ಮೂಲಕ ಲೋಕಸಭೆ ಉಪಸಮರಕ್ಕೆ ಕಾಂಗ್ರೆಸ್ ನಾಯಕರಿಗೆ ಪಂಥಾಹ್ವಾನ ನೀಡಿದ್ದ ಶ್ರೀರಾಮುಲು ಇಂದು ಡಿಕಿಷಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ..

ಬಳ್ಳಾರಿಯಲ್ಲಿ ಇಂದು ಮಾತನಾಡಿದ ಶ್ರೀರಾಮುಲು “ಗೌಡ್ರು ಬಂದು ರಾಜಕೀಯ ಮಾಡಿದ್ರೆ ಅಡ್ರೆಸ್‌ ಇಲ್ದೆ ಹೋಗ್ತಾರೆ,, ಸ್ಥಳೀಯ ಅಡ್ರೆಸ್ ಇರುವ ಜೆ ಶಾಂತಾ ಅವರನ್ನು ಜನ ಗೆಲ್ಲಿಸಲಿದ್ದಾರೆ. ಅಡ್ರೆಸ್ ಇರಲಾರದ ಉಗ್ರಪ್ಪ ಸೋಲುತ್ತಾರೆ ” ಎಂದು ಹೇಳುವ ಮೂಲಕ ಅಧಿಕೃತವಾಗಿ ಜಾತಿ ರಾಜಕಾರಣಕ್ಕೆ ಚಾಲನೆ ನೀಡಿದ್ದಾರೆ..

ಡಿಕೆಶಿ ವಿರುದ್ಧ ಶಾಸಕ ಶ್ರೀರಾಮುಲು ಏಕವಚನದಲ್ಲಿ ವಾಗ್ದಾಳಿ ನಡೆಸಿದ ರಾಮುಲು “ಅವನ ಹಾಗೆ ಮೈತ್ರಿ ಮಾಡಿಕೊಂಡು ರಾಜಕಾರಣ ನಾನು ಮಾಡಿಲ್ಲ, ನಾನೇನಿದ್ದರೂ ನೇರವಾಗಿ ಮಾತನಾಡಿ ರಾಜಕೀಯ ಮಾಡಿರುವವನು. ಭ್ರಷ್ಟಾಚಾರದಲ್ಲಿ ಈ ಸರಕಾರ ನಂಬರ್ 1 ಸ್ಥಾನದಲ್ಲಿದೆ.. ನಾವು ಶೋಷಿತ ಸಮುದಾಯದವರು. ಗೌಡ್ರು ಇಲ್ಲಿ ಬಂದು ನಮ್ಮ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಗೌಡ್ರು ಬಂದು ಇಲ್ಲಿ ರಾಜಕೀಯ ಮಾಡಿದ್ರೆ ಅಡ್ರೆಸ್‌ ಇಲ್ದೆ ಹೋಗ್ತಾರೆ ಎನ್ನೋದು ಅವರಿಗೆ ಗೊತ್ತಿಲ್ಲ” ಎಂದು ರಾಮುಲು ಟೀಕಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top