ಮನೋರಂಜನೆ

ಮೆಗಾಸ್ಟಾರ್ ಜೊತೆ ಅಭಿನಯ ಚಕ್ರವತಿ ಫ್ಯಾಮಿಲಿ ಕಂಡದ್ದು ಹೀಗೆ,ಫೋಟೋ ಒಳಗಿದೆ

ಥರ ಥರದ ಪಾತ್ರಗಳ ಮನೋಜ್ಞ ಅಭಿನಯದ ಮೂಲಕ ಕರ್ನಾಟಕದಾಚೆಗೂ ಪ್ರೇಕ್ಷಕರ ಮನದಲ್ಲಿ ಅಚ್ಚರಿಯ ಮುದ್ರೆ ಒತ್ತಿರುವವರು ಕನ್ನಡ ನಟ ಕಿಚ್ಚ ಸುದೀಪ್. ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳನ್ನು ಕೊಡುತ್ತಾ ಸಾಗಿರುವ ಕಿಚ್ಚ ಕನ್ನಡದಲ್ಲಿ ಬ್ಯುಸಿಯಾಗಿದ್ದರೂ ಆಗ್ಗಾಗ್ಗೆ ಹೊರ ರಾಜ್ಯಗಳಲ್ಲೂ ಮೋಡಿ ಮಾಡುತ್ತಾ ಬಂದಿದ್ದಾರೆ.. ಸದ್ಯ ಅವರು ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅವರ 151ನೇ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ ,ಅಂದಹಾಗೆ ಸೈರಾ ಚಿತ್ರವನ್ನು ಚಿರಂಜೀವಿ ಅವರ ಮಗ ರಾಮ್ ಚರಣ್ ಅವರೇ ನಿರ್ಮಾಣ ಮಾಡುತ್ತಿದ್ದು ಖ್ಯಾತ ನಿರ್ದೇಶಕ ಸುರೇಂದರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ,ಸೈರಾ ರೆಡ್ಡಿ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚುತ್ತಿರುವ ಸುದೀಪ್ ‘ಅವುಕು’ ಪ್ರಾಂತ್ಯದ ರಾಜನಾಗಿ ಸುದೀಪ್ ಕಾಣಿಸಿಕೊಳ್ಳಲಿದ್ದಾರಂತೆ.

 

 

 

ಈ ಹಿಂದೆ ಸಿನಿಮಾದಲ್ಲಿ ನಟಿಸಿರುವ ಕಿಚ್ಚ ಸುದೀಪ್ ಚಿರಂಜೀವಿ ಜೊತೆ ಫೊಟೋ ತೆಗೆಸಿಕೊಂಡು ಚಿತ್ರದ ನಿರ್ದೇಶಕ, ನಿರ್ಮಾಪಕ ರಾಮ್​ಚರಣ್​ ತೇಜಗೆ ಧನ್ಯವಾದ ಹೇಳಿ ಟ್ವಿಟ್ಟರ್​​​​ ಪೋಸ್ಟ್ ಮಾಡಿದ್ದರು.ಆದ್ರೆ ಈ ಸಲ ತಾವು ಒಬ್ಬರೇ ಅಲ್ಲ ತಮ್ಮ ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಅವರಿಗೂ ಕೂಡಾ ಚಿರಂಜೀವಿಯನ್ನು ಭೇಟಿ ಮಾಡಿಸಿದ್ದಾರೆ,ಕಿಚ್ಚ ತಮ್ಮ ಪತ್ನಿ ಹಾಗೂ ಮಗಳನ್ನು ಹೈದರಾಬಾದ್​​​ಗೆ ಕರೆಸಿಕೊಂಡು ಮೆಗಾಸ್ಟಾರ್ ಜೊತೆ ಸ್ವಲ್ಪ ಹೊತ್ತು ಕಾಲ ಕಳೆದಿದ್ದಾರೆ ಜೊತೆಗೆ ಮೆಗಾ ಸ್ಟಾರ್ ಚಿರಂಜೀವಿಯವರ ಜೊತೆ ತಮ್ಮ ಫ್ಯಾಮಿಲಿ ಫೋಟೋ ಕ್ಲಿಕಿಸಿಕೊಂಡಿದ್ದಾರೆ ,ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅವರ ಖುಷಿಯನ್ನು ಹಂಚಿಕೊಂಡಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top