ಮನೋರಂಜನೆ

ಇಡೀ ಥಿಯೇಟರ್ ಅನ್ನೇ ಬುಕ್ ಮಾಡಿದ ಡಾ||ವಿಷ್ಣು ಸೇನಾ ಸಮಿತಿ ಮತ್ತು ಸುದೀಪ್ ಸಾಂಸ್ಕೃತಿಕ ಪರಿಷತ್ತು.

ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿರುವ ‘ದಿ ವಿಲನ್’ ಚಿತ್ರ ಇನ್ನೇನು ದಿನದೊಪ್ಪತ್ತಿನಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಅಕ್ಟೋಬರ್ ಹದಿನೆಂಟನೇ ತಾರೀಕಿನಂದು ಪ್ರಪಂಚದಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿಲನ್ ತೆರೆಕಾಣುತ್ತಿದೆ. ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿರುವುದರಿಂದ ಈ ಪಾಟಿ ಸಂಚಲನ ಸೃಷ್ಟಿಸುತ್ತಿದೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಹಾಡುಗಳ ಅಬ್ಬರವನ್ನು ಕಂಡು ಇಡೀ ಗಾಂಧಿನಗರವೇ ಬೆಚ್ಚಿಬಿದಿದೆ.

 

 

ಇಂಥಾ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಒಪನ್‌ ಆಗಿದ್ದು ಮೊದಲ ದಿನದ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ. ಆದ ಕಾರಣ ಮಧ್ಯರಾತ್ರಿಯಲ್ಲಿ ಶೋಗಳನ್ನ ಹಾಕಿ ಎಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.. ಕೆಲವಡೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಥಿಯೇಟರ್ ಮಾಲೀಕರು ಬೆಳಗಿನ ಜಾವದ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ಇನ್ನೂ ಕೆಲವು ಕಡೆ ಮಧ್ಯರಾತ್ರಿಯೇ ‘ವಿಲನ್’ ಶೋ ಮಾಡಲು ಮುಂದಾಗಿದ್ದಾರೆ.

ಇಡೀ ಥಿಯೇಟರ್ ಅನ್ನೇ ಬುಕ್ ಮಾಡಿದ ವಿಷ್ಣು ಅಂಡ್ ಕಿಚ್ಚ ಫ್ಯಾನ್ಸ್.
ಸದ್ಯ ದಿ ವಿಲನ್ ಟಿಕೆಟ್ ಗಳಿಗೆ ಎಲ್ಲೆಡೆ ಸಕತ್ ಬೇಡಿಕೆ ಇರುವುದರಿಂದ ವಿಷ್ಣುದಾದ ಮತ್ತು ಕಿಚ್ಚನ ಅಭಿಮಾನಿಗಳು ತಾವೇ ಒಂದು ಷೋ ಪೂರ್ತಿ ಖರೀಧಿಸಿದ್ದಾರೆ. ಹೌದು, ಬೆಂಗಳೂರಿನ BTM ಲೇಔಟ್ ನಲ್ಲಿರುವ ಲಕ್ಷ್ಮಿ ಚಿತ್ರಮಂದಿರದ ಮುಂಜಾನೆ ಶೋವನ್ನು ಸಂಪೂರ್ಣವಾಗಿ ಅಭಿಮಾನಿಗಳೇ ಬುಕ್ ಮಾಡಲಾಗಿದ್ದು, ಇದು ಅಭಿಮಾನಿಗಳಿಗೆ ಮಾತ್ರ ಮೀಸಲಾಗಿದೆ. ಡಾ||ವಿಷ್ಣು ಸೇನಾ ಸಮಿತಿ ಮತ್ತು ಸುದೀಪ್ ಸಾಂಸ್ಕೃತಿಕ ವೇದಿಕೆಯ ಸಹಭಾಗಿತ್ವದಲ್ಲಿ ಈ ಪ್ರದರ್ಶನದ ಸಂಪೂರ್ಣ ಟಿಕೆಟ್ ಗಳನ್ನ ಕೊಂಡುಕೊಳ್ಳಲಾಗಿದೆ.. ಈ ಷೋ ಗುರುವಾರ ಬೆಳ್ಳಂ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಲಿದೆ..

 


 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top