ಮನೋರಂಜನೆ

ಈ ದಾಖಲೆಯನ್ನು ನಿರ್ಮಿಸಿದ ಕನ್ನಡದ ಮೊದಲ ಸಿನಿಮಾ ‘ದಿ ವಿಲನ್’

ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿರುವ ‘ದಿ ವಿಲನ್’ ಚಿತ್ರ ಇನ್ನೇನು ದಿನದೊಪ್ಪತ್ತಿನಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಅಕ್ಟೋಬರ್ ಹದಿನೆಂಟನೇ ತಾರೀಕಿನಂದು ಪ್ರಪಂಚದಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿಲನ್ ತೆರೆಕಾಣುತ್ತಿದೆ. ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿರುವುದರಿಂದ ಈ ಪಾಟಿ ಸಂಚಲನ ಸೃಷ್ಟಿಸುತ್ತಿದೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಹಾಡುಗಳ ಅಬ್ಬರವನ್ನು ಕಂಡು ಇಡೀ ಗಾಂಧಿನಗರವೇ ಬೆಚ್ಚಿಬಿದಿದೆ.

 

 

ಇಂಥಾ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಳನ್ನ ಸ್ಥಾಪಿಸಿದೆ.. ಹೌದು ಬಿಡುಗಡೆಗೂ ಮುಂಚೆಯೇ ಈ ಚಿತ್ರದ ಹಾಡುಗಳ ಜ್ಯುಕ್ ಬಾಕ್ಸ್​ ಯೂಟ್ಯೂಬ್ ನಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆಯಾಗಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಹೊಸ ದಾಖಲೆಯಾಗಿದೆ.. ಬಿಡುಗಡೆಗೂ ಮುನ್ನವೇ ಇದುವರೆಗೆ ಯಾವ ಕನ್ನಡದ ಚಿತ್ರದ ಹಾಡುಗಳು ಕೂಡ ಹತ್ತು ಲಕ್ಷ ವೀಕ್ಷಣೆಗಳನ್ನು ಪಡೆದ ಈ ದಾಖಲೆ ಮಾಡಿಲ್ಲ. ಇದೇ ಮೊದಲು​ ಇಂತಹ ದಾಖಲೆಗೆ ಪಾತ್ರವಾಗಿರುವ ಏಕೈಕ ಚಿತ್ರ ದಿ ವಿಲನ್​.

 

 

 

ಅಂದಹಾಗೆ ಚಿತ್ರ ಬಿಡುಗಡೆಯಾಗಲು ಇನ್ನೂ 4 ದಿನ ಬಾಕಿ ಇದ್ದರೂ ಕೂಡಾ ಅಭಿಮಾನಿಗಳೆಲ್ಲ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ‘ದಿ ವಿಲನ್’ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಭಾರೀಗಾತ್ರದ ಕಟೌಟುಗಳೂ ಸೇರಿದಂತೆ ಡಿಫರೆಂಟಾದ ಬ್ಯಾನರುಗಳೂ ಸಿದ್ಧಗೊಳ್ಳುತ್ತಿವೆ.

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top