fbpx
ದೇವರು

ಸಕಲ ಸೃಷ್ಟಿಯನ್ನು ಕಾಪಾಡುತ್ತಿರುವ ವೆಂಕಟರಮಣನಿಗೂ ಶತ್ರುಗಳಿದರಂತೆ,ಭಕ್ತರೇ ಭಗವಂತನಿಗೆ ವೈರಿಗಳಾದ ಈ ರೋಚಕ ಕಥೆ ನಿಮ್ಗ್ ಗೊತ್ತಾ

ಏಳುಕುಂಡಲವಾಡ ವೆಂಕಟರಮಣನಿಗೆ ಶತ್ರುಗಳಿದ್ದರು, ಭಕ್ತರೇ ಭಗವಂತನಿಗೆ ವೈರಿಗಳಾದ ಒಂದು ರೋಚಕ ಕಥೆ.
ಶ್ರೀನಿವಾಸನ ಪರಮಭಕ್ತರ ಒಂದೊಮ್ಮೆ ಭಗವಂತನನ್ನು ಬದ್ಧ ವೈರಿಗಳಂತೆ ಕಾಡಿದ್ದರು. ಒಂದಲ್ಲ ಎರಡಲ್ಲ ಸತತ ಮೂರು ಜನ್ಮಗಳಲ್ಲಿ ಮಹಾವಿಷ್ಣುವನ್ನು ಸತಾಯಿಸಿದ್ದರು. ಶ್ರೀನಿವಾಸ ಎಂದರೆ ಸಾಕು ಎದೆಯೊಳಗೆ ಭಕ್ತಿಯ ತರಂಗಗಳು ಮೂಡುತ್ತವೆ. ಕಲಿಯುಗದ ಪ್ರತ್ಯಕ್ಷ ದೈವ ಎಂದೆನಿಸಿರುವ ವೆಂಕಟೇಶ್ವರನ ದರ್ಶನ ಮಾಡುವುದೇ ಒಂದು ದೊಡ್ಡ ಸುಯೋಗ , ಶ್ರೀನಿವಾಸ ಎಂದ ಕೂಡಲೇ ಜಗತ್ತಿನಲ್ಲಿರುವ ಜನರಿಗೆ ಥಟ್ಟಂತ ನೆನಪಾಗುವುದು ತಿರುಪತಿ, ಯಾಕೆಂದರೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ಶ್ರೀ ಮಹಾವಿಷ್ಣು ವೆಂಕಟೇಶ್ವರನಾಗಿ ತಿರುಮಲದಲ್ಲಿ ನೆಲೆಸಿದ್ದಾನೆ, ತಿರುಪತಿ ತಿರುಮಲ ಬೆಟ್ಟದಲ್ಲಿ ನೆಲೆಗೊಂಡು ತಿಮ್ಮಪ್ಪ ನಾಗಿದ್ದಾನೆ. ಶ್ರೀನಿವಾಸನ ಈ ಪವಿತ್ರ ತಾಣದಲ್ಲಿ ಜಾತಿ ಧರ್ಮದ ಭೇದವಿಲ್ಲ, ಶುದ್ಧ ಮನಸ್ಸಿನಿಂದ ಭಕ್ತಿಭಾವದಿಂದ ನಮಿಸಿದರೆ ಸಾಕು ಎಲ್ಲರಿಗೂ ಒಲಿದು ಬಿಡುತ್ತಾನೆ ತಿಮ್ಮಪ್ಪ, ಅದಕ್ಕಾಗಿಯೇ ಇಲ್ಲಿ ಎಲ್ಲಾ ಧರ್ಮದವರು ಮತ್ತು ಎಲ್ಲಾ ಜಾತಿಯವರು ಬರುತ್ತಾರೆ. ತಿಮ್ಮಪ್ಪನ ಪಾದಕ್ಕೆ ಬಿದ್ದು ಆಶೀರ್ವಾದ ಪಡೆಯುತ್ತಾರೆ.

 

 

 

ಪ್ರಪಂಚದಲ್ಲಿ ಯಾವುದೇ ವಿಷ್ಣು ಕ್ಷೇತ್ರಕ್ಕೆ ಹೋದರೂ ಈ ಇಬ್ಬರು ಭಕ್ತರ ದರ್ಶನ ಮಾಡಿಯೇ ವೆಂಕಟೇಶ್ವರನ ದರ್ಶನ ಮಾಡಬೇಕು. ಈ ಇಬ್ಬರನ್ನು ದಾಟಿಯೇ ವೆಂಕಟೇಶ್ವರನ ದರ್ಶನ ಸಾಧ್ಯ. ಆ ಪರಮ ಭಕ್ತರು ಬೇರೆ ಯಾರೂ ಅಲ್ಲ ಅವರೇ ಜಯ ವಿಜಯರು. ಇವರು ವೈಕುಂಠದ ದ್ವಾರ ಪಾಲಕರಾಗಿದ್ದರು. ಈ ಜಯ-ವಿಜಯರು ಸ್ವಾಮಿಯ ಪರಮ ಭಕ್ತರು, ಸದಾ ವೈಕುಂಠದಲ್ಲಿ ದ್ವಾರದ ಬಳಿ ಇದ್ದು ಶ್ರೀನಿವಾಸನನ್ನು ಕಾಯುವವರು, ಜಯ ವಿಜಯರಿಗೆ ಶ್ರೀನಿವಾಸನ ಮೇಲೆ ಎಷ್ಟು ಭಕ್ತಿಯೆಂದರೆ ವೆಂಕಟೇಶ್ವರನಿಗೆ ಇವರಿಬ್ಬರ ಎಂದರೆ ಅಷ್ಟೇ ಪ್ರೀತಿ.ಇಂತಹ ಜಯವಿಜಯರು ಒಮ್ಮೆ ಘೋರವಾದ ಶಾಪಕ್ಕೆ ಒಳಗಾಗುತ್ತಾರೆ. ಒಮ್ಮೆ ವಿಷ್ಣುವಿನ ಪ್ರಿಯ ದ್ವಾರಪಾಲಕರಾದ ಜಯ-ವಿಜಯರಿಗೆ ಎದುರಾಗಿತ್ತು ಒಂದು ಘೋರ ಶಾಪ .ವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರಿಗೆ ಶಾಪ ನೀಡಿದ್ದು ಯಾರು ? ಇಷ್ಟಕ್ಕೂ ಶಾಪಕ್ಕೆ ಕಾರಣವಾದ ಅಂಶಗಳನ್ನು ಜಯ-ವಿಜಯರು ವೈಕುಂಠದ ದ್ವಾರ ಪಾಲಕರು. ಅವರ ಮರ್ಯಾದೆ ಗೌರವಕ್ಕೆ ಯಾವುದೇ ಕೊರತೆ ಇರಲಿಲ್ಲ. ಇದೇ ಕಾರಣಕ್ಕೆ ಇವರಿಬ್ಬರಲ್ಲಿ ಅಹಂಕಾರ ಬೆಳೆಯಿತು ಮತ್ತು ಇದೇ ಅಹಂಕಾರದ ಕಾರಣಕ್ಕೆ ಶ್ರೀನಿವಾಸನಿಂದಲೇ ದೂರವಾಗುವ ಪರಿಸ್ಥಿತಿ ಎದುರಾಗಿತ್ತು.

ಇಷ್ಟಕ್ಕೂ ಜಯ-ವಿಜಯರಿಗೆ ಶಾಪ ಕೊಟ್ಟವರು ಯಾರು ? ಈ ಶಾಪಕ್ಕೂ ಶ್ರೀನಿವಾಸನಿಂದ ಜಯ-ವಿಜಯರು ದೂರವಾಗುವುದಕ್ಕೆ ಏನು ಕಾರಣ ?
ಈ ಶಾಪದ ಕಥೆ ನಿಜಕ್ಕೂ ರೋಚಕವಾಗಿದೆ. ಒಮ್ಮೆ ಮಹಾವಿಷ್ಣುವನ್ನು ಬೇಟಿ ಮಾಡಲು ಒಮ್ಮೆ ವೈಕುಂಠಕ್ಕೆ ಸನಕ, ಸನತ್ಕುಮಾರ, ಸನತ್ಸುಜಾತ, ಸನಂದನ ಎಂಬ ಬಾಲ ಯೋಗಿಗಳು ಬರುತ್ತಾರೆ. ಇವರು ಬ್ರಹ್ಮ ಮಾನಸಪುತ್ರರು. ಅತ್ಯಂತ ತೇಜೋಮಯಿಗಳಾದ ಇವರು ಅತ್ಯಂತ ಮಹಿಮೆ ಉಳ್ಳವರಾಗಿರುತ್ತಾರೆ. ಈ ಬಾಲ ಯೋಗಿಗಳು ಬಗ್ಗೆ ಏಳು ಲೋಕಗಳಿಗೂ ಗೊತ್ತಿರುತ್ತದೆ. ಈ ಬಾಲ ಯೋಗಿಗಳು ವೈಕುಂಠದ 6 ದ್ವಾರಗಳನ್ನು ದಾಟಿ ಏಳನೇ ದ್ವಾರದ ಬಳಿ ಬರುತ್ತಾರೆ. ಆಗ ಈ ಮಹಾನ್ ಸಾಧಕರಿಗೆ ಜಯ ವಿಜಯರ ಬಗ್ಗೆ ಅರಿವು ಇರುವುದಿಲ್ಲ. ಅಹಂಕಾರದ ಅಂಧಕಾರ ಅವರನ್ನು ಕವಿದಿರುತ್ತದೆ. ಹೀಗಾಗಿ ಶ್ರೀಹರಿಯ ದರ್ಶನಕ್ಕಾಗಿ ಬಂದ ಬಾಲ ಯೋಗಿಗಳನ್ನು ವೈಕುಂಠ ದ್ವಾರದ ಬಳಿ ತಡೆಯುತ್ತದೆ. ಅಲ್ಲದೆ ನಗ್ನ ರೂಪದಲ್ಲಿದ್ದ ಬ್ರಹ್ಮ ಮಾನಸಪುತ್ರರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಅಲ್ಲದೆ ಅವರೊಂದಿಗೆ ದುರಹಂಕಾರದಿಂದ ವರ್ತಿಸುತ್ತಾರೆ. ಇದರಿಂದ ಕುಪಿತರಾದ ಬಾಲ ಯೋಗಿಗಳು ಘೋರವಾದ ಶಾಪ ನೀಡುತ್ತಾರೆ. ಭೂಲೋಕದಲ್ಲಿ ಜನ್ಮವೆತ್ತಿ ಎಂಬ ಶಾಪ ನೀಡುತ್ತಾರೆ.

 

ಬಾಲ ಯೋಗಿಗಳ ಘೋರ ಶಾಪದಿಂದ ಜಯ ವಿಜಯರು ಕಂಗಾಲಾಗಿ ಬಿಡುತ್ತಾರೆ. ಶಾಪಗ್ರಸ್ಥರಾದ ಜಯ-ವಿಜಯರು ಮುನಿಗಳ ಕಾಲಿಗೆ ಬೀಳುತ್ತಾರೆ. ತಮ್ಮ ಅಜ್ಞಾನದಿಂದ ಆದ ತಪ್ಪನ್ನು ಕ್ಷಮಿಸಬೇಕು ಎಂದು ಕೇಳಿಕೊಳ್ಳುತ್ತಾರೆ. ಶಾಪ ವಿಮೋಚನೆಗಾಗಿ ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ವಿಷ್ಣು ಮಹಾನ್ ಮುನಿಗಳ ಶಾಪವನ್ನು ತಡೆಯಲು ಸಾಧ್ಯವಿಲ್ಲ, ಆದರೆ ಶಾಪ ನಿವಾರಣೆ ನಿಮಿತ್ತ ನೀವಿಬ್ಬರೂ ನನ್ನ ಮಿತ್ರರಾಗಿ ಭೂಮಿಯಲ್ಲಿ ಏಳು ಜನ್ಮ ಎತ್ತುವಿರೇ ಅಥವಾ ನನ್ನ ಶತ್ರುಗಳಾಗಿ ಮೂರು ಜನ್ಮ ಎತ್ತಲು ಇಚ್ಛೆ ಪಡುತ್ತೀರಿ ಎಂದು ಕೇಳುತ್ತಾನೆ . ಆಗ ಜಯ-ವಿಜಯರು ವೈಕುಂಟಕ್ಕೆ ಬೇಗ ಮರಳುವ ಆತುರದಲ್ಲಿ ನಿನಗೆ ಶತ್ರುಗಳಾಗಿ ಮೂರು ಜನ್ಮಗಳಲ್ಲಿ ಹುಟ್ಟುತ್ತೇವೆ ಎಂದು ಹೇಳುತ್ತಾರೆ. ವಿಷ್ಣು ತಥಾಸ್ತು ಎಂದು ಹೇಳುತ್ತಾನೆ. ಬಾಲ ಯೋಗಿಗಳ ಶಾಪದ ಪರಿಣಾಮ ಜಯ ವಿಜಯರು ವಿಷ್ಣುವಿನ ಶತ್ರುಗಳಾದರು. ವಿಷ್ಣುವಿನ ಶತ್ರುಗಳಾದ್ದರಿಂದ ಭೂಮಿಯಲ್ಲಿ ಜಯವಿಜಯರು ಹಿರಣ್ಯಾಕ್ಷ ಮತ್ತು ಹಿರಣ್ಯಕ್ಷ- ಹಿರಣ್ಯಕಶಿಪುವಾಗಿ, ರಾವಣ- ಕುಂಭಕರ್ಣರಾಗಿ ಹಾಗೂ ಮೂರನೆಯ ಜನ್ಮದಲ್ಲಿ ಶಿಶುಪಾಲ ಮತ್ತು ದಂತವಕ್ತ್ರರಾಗಿ, ವಿಷ್ಣುವಿನ ಬದ್ಧ ವೈರಿಗಳಾಗಿ ಜನಿಸುತ್ತಾರೆ.
ನಿಮಗೆಲ್ಲ ಗೊತ್ತಿರುವ ಹಾಗೆ ಬ್ರಹ್ಮ ಸೃಷ್ಟಿಕರ್ತನಾದರೆ, ವಿಷ್ಣು ಸ್ಥಿತಿಕಾರಕ, ಶಿವ ಲಯಕಾರಕ, ಸ್ಥಿತಿ ಸ್ಥಾಪಕನಾದ ಶ್ರೀಮನ್ನಾರಾಯಣ ,ದುಷ್ಟರನ್ನು ಸಂಹರಿಸಲು, ಶಿಷ್ಟರನ್ನು ಸಂರಕ್ಷಿಸುವ ಸಲುವಾಗಿ ಹತ್ತು ಅವತಾರಗಳನ್ನು ತಳೆತ್ತಿದ್ದಾನೆ. ಲೋಕ ಕಲ್ಯಾಣಾರ್ಥವಾಗಿ ವಿಷ್ಣು ಎತ್ತಿದ ಅವತಾರಗಳೆ ದಶಾವತಾರಗಳು. ಈ ವಿಶಿಷ್ಟ ಅವತಾರಗಳ ಮೂಲಕವೇ ಜಯ ವಿಜಯರ ಶಾಪ ವಿಮೋಚನೆಯಾಗುತ್ತದೆ.ಮೊದಲ ಜನ್ಮದಲ್ಲಿ ಹಿರಣ್ಯಾಕ್ಷ ಹಿರಣ್ಯಕಶಿಪುವಾಗಿ ಜನ್ಮವೆತ್ತಿದ ಜಯ ವಿಜಯರು.

 

 

 

ಹಿರಣ್ಯಾಕ್ಷನಾಗಿ ಜನಿಸಿದ ಜಯ ವಿಷ್ಣುವಿನ ಸಾನಿಧ್ಯವನ್ನು ಬೇಗ ಸೇರಬೇಕು ಎನ್ನುವ ಕಾರಣಕ್ಕಾಗಿ ಜಯ-ವಿಜಯರು ವಿಷ್ಣುವಿನ ಶತ್ರುಗಳಾಗಿ ಮೂರು ಜನ್ಮಗಳನ್ನು ತಳೆಯುತ್ತಾರೆ. ಮೊದಲ ಜನ್ಮದಲ್ಲಿ ದಾನವನಾಗಿ ಹುಟ್ಟುವ ಹಿರಣ್ಯಾಕ್ಷ ತನ್ನ ಶಕ್ತಿಗಳ ವರ ಬಲದಿಂದ ಮೆರೆಯುತ್ತಿದ್ದ, ಅಹಂಕಾರದಿಂದ ಒಮ್ಮೆ ಭೂದೇವಿಯನ್ನು ಸಮುದ್ರದಲ್ಲಿ ಬಚ್ಚಿಡುತ್ತಾನೆ. ದಾನವನಾದ ಹಿರಣ್ಯಾಕ್ಷನಿಂದ ಭೂದೇವಿಯನ್ನು ರಕ್ಷಿಸುವ ಸಲುವಾಗಿ,ದುಷ್ಟನಾಗಿದ್ದ ಹಿರಣ್ಯಾಕ್ಷನನ್ನು ಸಂಹರಿಸುವ ಸಲುವಾಗಿ , ವಿಷ್ಣು ಹತ್ತು ಅವತಾರವನ್ನು ತಳೆಯುವುದು. ಈ ವಿಶಿಷ್ಟ ಅವತಾರದ ಮೂಲಕ ಹಿರಣ್ಯಾಕ್ಷನನ್ನು ಸಂಹಾರ ಮಾಡುತ್ತಾನೆ. ಆ ಮೂಲಕ ಹಿರಣ್ಯಾಕ್ಷನಾಗಿ ಜನಿಸಿದ ವಿಷ್ಣುವಿನ ದ್ವಾರಪಾಲಕನಾದ ಜಯನ ಮೊದಲ ಜನ್ಮವನ್ನು ಕೊನೆಗಾಣಿಸುತ್ತಾನೆ.

ಮೊದಲ ಜನ್ಮದಲ್ಲಿ ಹಿರಣ್ಯಕಶ್ಯಪುವಾಗಿ ಜನಿಸಿದ ವಿಜಯ:ಹಿರಣ್ಯಾಕ್ಷನ ಸೋದರನೇ ಹಿರಣ್ಯಕಶ್ಯಪು. ಇವನು ಅಪರೂಪವಾದ ವರವನ್ನು ಪಡೆದಿದ್ದ, ಆ ವರ ಬಲದಿಂದ ಹಾಗೂ ಭುಜ ಬಲದಿಂದ ಮನುಷ್ಯರನ್ನು ಅಪಾರವಾಗಿ ಕಾಡುತ್ತಿದ್ದ , ಮಹಾ ಗರ್ವಿಷ್ಠನಾಗಿ ಧರ್ಮವನ್ನೇ ಮರೆತು ದುರಾಚಾರಿಯಾಗಿದ್ದ ಹಿರಣ್ಯ ಕಶ್ಯಪುವಿನ ಮಗನೇ ಪ್ರಹಲ್ಲಾದ. ಪರಮ ವಿಷ್ಣು ಭಕ್ತನಾಗಿದ್ದ ಬಾಲ ಪ್ರಹ್ಲಾದ, ಸದಾ ಹರಿ ಧ್ಯಾನ ಮಾಡುತ್ತಿದ್ದ, ಪ್ರಹ್ಲಾದನ ಭಕ್ತಿಗೆ ಕೋಪೋದ್ರಿಕ್ತನಾದ ಹಿರಣ್ಯ ಕಶಿಪು ಮಗನಿಗೆ ನಿನ್ನ ಹರಿಯನ್ನು ಕಂಬದಲ್ಲಿ ತೋರಿಸು ಎಂದ ಈ ಸಂದರ್ಭದಲ್ಲಿ ಕಂಬದಿಂದ ಅವತರಿಸಿದ ವಿಷ್ಣುವಿನ ಘೋರ ರೂಪವೇ ನರಸಿಂಹ ಅವತಾರ. ಹಿರಣ್ಯ ಕಶ್ಯಪು ಪಡೆದ ವರದ ಅನುಸಾರವಾಗಿಯೇ ಕಂಬದಲ್ಲಿ ಉದಯಿಸುವ ಭಗವಂತ ಮಹಾನ್ ದಾನವನಾಗಿದ್ದ, ಹಿರಣ್ಯ ಕಶ್ಯಪುವನ್ನು ಸಂಹರಿಸುತ್ತಾನೆ.ಆ ಮೂಲಕ ವಿಜಯನ ಮೊದಲ ಜನ್ಮವನ್ನು ಪೂರ್ತಿ ಮಾಡುತ್ತಾನೆ.
ಎರಡನೇ ಜನ್ಮದಲ್ಲಿ ರಾವಣ ಕುಂಭಕರ್ಣರಾಗಿ ಜನಿಸಿದ ಜಯ-ವಿಜಯರು:ರಾವಣನಾಗಿ ಜಯ, ಕುಂಭಕರ್ಣನಾಗಿ ವಿಜಯ. ಏಕಪತ್ನೀವ್ರತಸ್ಥ, ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನು ಸೀತೆಯನ್ನು ಅಪಹರಿಸಿದ ದುಷ್ಟನೇ ರಾವಣ. ಸೀತೆಯನ್ನು ಅಪಹರಿಸಿದ ರಾವಣ ಹಾಗೂ ಅವನ ಸಹೋದರ ಕುಂಭಕರ್ಣನ ಸಂಹಾರ ಮಾಡಲು ವಿಷ್ಣು ರಾಮಾವತಾರ ಧಾರಣೆ ಮಾಡುತ್ತಾನೆ. ರಾವಣ ಕುಂಭಕರ್ಣರ ಸಂಹಾರದ ಮೂಲಕ ಇಡೀ ಭೂಮಂಡಲವನ್ನು ಶ್ರೀರಾಮ ಸಂರಕ್ಷಣೆ ಮಾಡುತ್ತಾನೆ. ಆ ಮುಖಾಂತರ ಜಯವಿಜಯರ ರಾವಣ ಮತ್ತು ಕುಂಭಕರ್ಣರ ಎರಡನೇ ಜನ್ಮವನ್ನು ಸಮಾಪ್ತಿ ಮಾಡುತ್ತಾನೆ.

ಕೊನೆಯ ಜನ್ಮದಲ್ಲಿ ಶಿಶುಪಾಲ ದಂತವಕ್ತ್ರನಾಗಿ ವಿಷ್ಣುವಿನ ಬದ್ಧ ವೈರಿಗಳಾಗಿ ಜನಿಸಿದ ಜಯ-ವಿಜಯರು:ಶಿಶು ಪಾಲನಾಗಿ ಜಯ, ದಂತವಕ್ತ್ರನಾಗಿ ವಿಜಯ. ಧರ್ಮ ಸಂಸ್ಥಾಪನೆಯ ನಿಟ್ಟಿನಲ್ಲಿ ಈ ಧರೆಯಲ್ಲಿ ಅವತರಿಸಿದ ಶ್ರೀಮನ್ನಾರಾಯಣನ ವಿಶಿಷ್ಟ ರೂಪವೇ ಕೃಷ್ಣಾವತಾರ.ಪರಮಾತ್ಮ ಶ್ರೀಕೃಷ್ಣನ ಪರಮ ಉದ್ದೇಶವೇ ಶಿಶುಪಾಲ ಮತ್ತು ದಂತವಕ್ತ್ರನ ಸಂಹಾರ . ಈ ಉದ್ದೇಶ ಪ್ರಮುಖವಾದರೂ ಕೃಷ್ಣಾವತಾರದ ಮೂಲಕ ಜರಾಸಂಧ, ಕೌರವರು ಸೇರಿದಂತೆ ಮೊದಲಾದ ಲೋಕ ಕಂಟಕರನ್ನು ಶ್ರೀಕೃಷ್ಣ ವದೆ ಮಾಡುತ್ತಾನೆ. ಮಹಾಭಾರತದ ಯುದ್ಧದ ವೇಳೆ ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸುತ್ತಾನೆ. ಆ ಮೂಲಕ ಶ್ರೀಕೃಷ್ಣ ಭಗವದ್ಗೀತೆ ಎನ್ನುವ ಮಹಾನ್ ಗ್ರಂಥವನ್ನು ಇಡೀ ಜಗತ್ತಿಗೆ ನೀಡಿದ್ದಾನೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top