ಮನೋರಂಜನೆ

ನಂದಿ ಚಿತ್ರದ ಕಿಚ್ಚನ ಹೀರೋಯಿನ್ ಮುದ್ದು ಮೊಗದ ಚೆಲುವೆ ಸಿಂಧು ಮೆನನ್ ಈಗ ಹೇಗಿದ್ದಾರೆ,ಏನ್ ಮಾಡ್ಕೊಂಡಿದ್ದಾರೆ ಗೊತ್ತಾ

“ಸಿಂಧು ಮೆನನ್” ಈಗ ಎಲ್ಲಿದ್ದಾರೆ ,ಹೇಗಿದ್ದಾರೆ ?
ದಕ್ಷಿಣ ಭಾರತ ಕಂಡ ಪ್ರತಿಭಾವಂತ ನಟಿ ಸಿಂಧು ಮೆನನ್ ,ಇವರು ಕನ್ನಡ ಸೇರಿದಂತೆ ತೆಲುಗು ,ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಚಪಾಳೆ ಗಿಟ್ಟಿಸಿಕೊಂಡವರು, ಸಿಂಧು ಮೆನನ್ ರವರು  21 ಜೂನ್ 1985 ,ಬೆಂಗಳೂರಿನಲ್ಲಿ ಒಂದು ಮಲಯಾಳಂ ಕುಟುಂಬದಲ್ಲಿ ಹುಟ್ಟಿದರು .ಸಿಂಧು ಮೆನನ್ ರವರು ಅವರ ಬಾಲ್ಯದಲ್ಲಿ ಭರತನಾಟ್ಯ ವ್ಯಾಸಂಗ ಮಾಡುವ ಸಂದರ್ಭದಲ್ಲಿ 1994 ರಲ್ಲಿ  ಇವರಿಗೆ ಕನ್ನಡದ ರಶ್ಮಿ ಎಂಬ ಸಿನಿಮಾಗೆ ಬಾಲನಟಿಯಾಗಿ ಅವಕಾಶ ಬರುತ್ತದೆ ಈಗೆ ಅವರ ಸಿನಿಮಾ ಜರ್ನಿ ಶುರುವಾಗುತ್ತದೆ .

 

 

 

ನಂತರ 1999 ನೇ ಇಸವಿಯಲ್ಲಿ ಪ್ರೇಮಪ್ರೇಮಪ್ರೇಮ ಎಂಬ ಚಿತ್ರದಲ್ಲಿ ನಾಯಕ ನಟಿಯಾಗಿ ಅವಕಾಶ ಸಿಗುತ್ತದೆ ಈ ಸಿನಿಮಾ ಮಾಡುವಾಗ ಇವರು ವಯಸ್ಸು ಕೇವಲ 13 ವರ್ಷನಂತರ ಇವರು ವಯಸ್ಸು 15 ಇರುವಾಗ ತೆಲುಗು ,ತಮಿಳು ಸಿನಿಮಾಗಳಲ್ಲೂ ತುಂಬಾ ಅವಕಾಶಗಳು ಬರಲು ಆರಂಭ ವಾಗುತ್ತದೆ .ಇವರು 100  ಕ್ಕೂ  ಹೆಚ್ಚು ಸಿನಿಮಾಗಲ್ಲಿ ನಟಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಿ,ಹಲವು ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ .ಇವರು ಮಾಡಿರುವಂತ ಕನ್ನಡ ಸಿನಿಮಾಗಳು ರಶ್ಮಿ ,ಪ್ರೇಮ ಪ್ರೇಮ ಪ್ರೇಮ ,ನಂದಿ ,ವಿಕ್ರಂ,ಖುಷಿ , ಜ್ಯೇಷ್ಠ,  ಯಾರೇ ನೀ ಹುಡುಗಿ ಇನ್ನು ಅನೇಕ.

ಅಷ್ಟು ತಮ್ಮ ನಟನೆ ಯಿಂದ ಜನರನ್ನು ರಂಜಿಸಿದ ಈ ನಟಿ ಕೆಲವು ವರ್ಷಗಳಿಂದ ಚಿತ್ರರಂಗದಿಂದ ಹೊರಗಿದ್ದಾರೆ ,ಇದಕ್ಕೆ ಕಾರಣ ?

 

 

 

2010 ರಲ್ಲಿ ಸಿಂಧೂ ಮೆನನ್ ರವರಿಗೆ ಪ್ರಭು ಎಂಬುವವರ ಜೊತೆ ಮದುವೆಯಾಗುತ್ತದೆ ,ಆ ನಂತರದಿಂದ ಅವರು ಸಿನಿಮಾದಿಂದ ಹೊರ ಉಳಿದಿದ್ದಾರೆ.ಮದುವೆಯಾದ ಮೇಲೆ ಅವರು ಅವರ ಗಂಡನ ಜೊತೆ ಲಂಡನ್ ನಲ್ಲಿ ನೆಲೆಸಿದ್ದಾರೆ .ಇವರಿಗೆ ಒಂದು ಹೆಣ್ಣು ಮಗು ಕೂಡ ಉಂಟು ಆ ಮಗುವಿನ ಹೆಸರು ಸ್ವೆಟ್ಲಾನಾ.ಚಿತ್ರರಂಗದಿಂದ ಹೊರಗೆ ಇರುವುದಕ್ಕೆ ಕಾರಣ ಅವರಿಗೆ ಅವರ ಸಿನಿಮಾ ಜೀವನಕ್ಕಿಂತ ಅವರ ವೈಯಕ್ತಿಕ ಜೀವನ ತುಂಬಾ ಬಹಳ ಮುಖ್ಯ ,ಅವರ ಸಂಸಾರವನ್ನು ನೋಡಿಕೊಳ್ಳುವ ಕರ್ತವ್ಯ  ಅವರ ಮೇಲೆ ಇದೆ ಮತ್ತು ಇವರಿಗೆ ಲಂಡನ್ನಲ್ಲಿ ಅನೇಕ ವ್ಯಾಪಾರಗಳು ಇದ್ದು ಅವನ್ನು ನೋಡಿಕೊಳ್ಳುವ ಹೊಣೆ ಕೂಡ ಇವರ ಮೇಲೆ ಇರುವುದರಿಂದ ಇವರು ಚಿತ್ರರಂಗದಿಂದ ಹೊರ ಉಳಿದು ತಮ್ಮ ಸಂಸಾರದ ಜೊತೆ ಲಂಡನ್ನಲ್ಲಿ ಸಂತೋಷದ ಜೀವನ ನಡೆಸುತ್ತಿದ್ದಾರೆ .ಇವರ  ಜೀವನ ಹೀಗೆ ನೂರು ಕಾಲ ಸಂತೋಷವಾಗಿ ಇರಲಿ ಎಂದು ನಾವು ಶುಭ ಹಾರೈಕೆ ಮಾಡೋಣ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top