ಅರೋಗ್ಯ

ಮಜ್ಜಿಗೆ ಕುಡಿಯೋದ್ರಿಂದ ಯಾವ್ಯಾವ ಪ್ರಯೋಜನಗಳನ್ನು ಪಡ್ಕೋಬೋದು ಗೊತ್ತಾ

ಸಾಮಾನ್ಯವಾಗಿ ದಾಹವನ್ನು ನೀಗಿಸಿಕೊಳ್ಳಲು ಜನರು ಮಜ್ಜಿಯನ್ನು ಕುಡಿಯುತ್ತಾರೆ. ಮಜ್ಜಿಗೆ ಕುಡಿಯುವುದರಿಂದ ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.ಮಜ್ಜಿಗೆ ಕುಡಿಯೋದ್ರಿಂದ ಯಾವ್ಯಾವ ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳಿಯೋಣ ಬನ್ನಿ.

 

 

.

ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ:ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ.ಅಧಿಕ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆ ಕುಡಿದರೆ ತಿಂದ ಆಹಾರ ಬಹಳ ವೇಗವಾಗಿ ಜೀರ್ಣವಾಗುತ್ತದೆ. ಹುಳಿತೇಗು ಗ್ಯಾಸ್ಟ್ರಿಕ್ ,ಎದೆಉರಿಗಳಂಥ ಜೀರ್ಣಕ್ರಿಯೆಗೆ ಸಂಬಂದಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ.

ವಾಂತಿ ಕಡಿಮೆಮಾಡುತ್ತದೆ:ಮಜ್ಜಿಗೆಗೆ ಸ್ವಲ್ಪ ಉಪ್ಪು ಮತ್ತು ಹಸಿಶುಂಠಿಯ ರಸವನ್ನು ಸೇರಿಸಿ ಕುಡಿಯುದರಿಂದ ವಾಂತಿ ಮತ್ತು ವಾಕರಿಕೆ ಸಮಸ್ಯೆಗಳು ಕಡಿಮೆಯಾಗುತ್ತದೆ.

ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆ:ಮಜ್ಜಿಗೆಗೆ ಅರ್ಧಚಮಚ ಶುಂಠಿರಸ ಮತ್ತು ಜೀರಿಗೆಪುಡಿಯನ್ನು ಸೇರಿಸಿ ಸೇವಿಸಿದರೆ ಆ್ಯಸಿಡಿಟಿ,ಮಲಬದ್ಧತೆ ಹಾಗೂ ಮೂಲವ್ಯಾಧಿ ಸಮಸ್ಯೆಗಳು ಬಗೆಹರಿಯುತ್ತದೆ.ಇದು ಅಗತ್ಯ ನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ.

ಹೊಟ್ಟೆಹುಣ್ಣಿಗೆ ದಿವ್ಯಔಷಧ:ಹೊಟ್ಟೆ ಹುಣ್ಣಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರೆ ಹೆಚ್ಚಾಗಿ ಮಜ್ಜಿಯನ್ನು ಉಪಯೋಗಿಸಿ ಹೊಟ್ಟೆ ಹುಣ್ಣನ್ನು ವಾಸಿ ಮಾಡಿಕೊಳ್ಳಬಹುದು.ಹೆಚ್ಚು ಖಾರ ಪದಾರ್ಥ ಸೇವನೆ ಮಾಡಿದ್ದರೆ, ಅದರ ಉರಿಯನ್ನು ನಿವಾರಿಸಲು ಮಜ್ಜಿಗೆ ಸಹಾಯ ಮಾಡುತ್ತದೆ

ದೇಹವನ್ನು ತಂಪಾಗಿಸುತ್ತದೆ:

 

 

 

ದೇಹದ ಅತಿಯಾದ ಉಷ್ಣತೆಯ ಸಮಸ್ಯೆಯಿಂದ ಬಳಲುತ್ತಿರುವವರು ಮಜ್ಜಿಗೆಯನ್ನು ಕುಡಿಯುವುದರಿಂದ ದೇಹವು ತಂಪಾಗಿ ತಾಜಮಯವಾಗುತ್ತದೆ.ಕಣ್ಣುರಿ. ಮೂಗಿನ ಉರಿ, ಉರಿಮೂತ್ರ ಸಮಸ್ಯೆಗೂ ಮಜ್ಜಿಗೆ ತುಂಬಾ ಒಳ್ಳೆಯದು.

ಬಾಯಿ ಹುಣ್ಣಿಗೆ ಪರಿಹಾರ:ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ನಾಲಿಗೆಯ ಮೇಲೆ ಆಗುವ ಸಣ್ಣ ಸಣ್ಣ ಗುಳ್ಳೆಗಳನ್ನು ಹೋಗಲಾಡಿಸಲು ಸಹ ಮಜ್ಜಿಗೆ ಸಹಕಾರಿಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top