ಮನೋರಂಜನೆ

ಚಾಲೆಂಜಿಂಗ್ ದರ್ಶನ್ ಮುಂದಿನ ಚಿತ್ರಕ್ಕೆ ಟೈಟಲ್ ಫಿಕ್ಸ್.

ಒಂದು ಸಿನಿಮಾವಿನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ ಮುಂದಿನ ಚಿತ್ರಗಳ ಬಗ್ಗೆ ಕುತೂಹಲ ಸೃಷ್ಟಿಸೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಶೇಷತೆ. ಸದ್ಯ ಅವರ 50ನೇ ಚಿತ್ರವಾದ ಕುರುಕ್ಷೇತ್ರ ಇನ್ನೂ ತೆರೆಕಂಡಿಲ್ಲ, 51ನೇ ಸಿನಿಮಾವಾದ ಯಜಮಾನ ಚಿತ್ರ ಶೂಟಿಂಗ್ ಹಂತದಲ್ಲಿದೆ ಉಳಿದಂತೆ 52ನೇ ಚಿತ್ರವಾಗಿರುವ ‘ಒಡೆಯರ್’ ಚಿತ್ರ ಮೊನ್ನೆ ತಾನೇ ಶುರುವಾಗಿದೆ. ಹೀಗೆ ಕೈತುಂಬಾ ಮಣಗಟ್ಟಲೆ ಚಿತ್ರಗಳನ್ನು ಇಟ್ಟುಕೊಂಡಿರುವ ದರ್ಶನ್ ಅವರ 53ನೇ ಚಿತ್ರದ ಬಗ್ಗೆ ಅದಾಗಲೇ ನಾನಾ ಸುದ್ದಿಗಳು ಹರಿದಾಡತೊಡಗಿದೆ…

 

 

ತರುಣ್ ಸುದೀರ್ ಅವರ ನಿರ್ದೇಶನದಲ್ಲಿ ದರ್ಶನ್ ಸಿನಿಮಾ ಮಾಡುತ್ತಾರೆ, ಆ ಚಿತ್ರಕ್ಕೆ ಹೆಬ್ಬುಲಿ ಖ್ಯಾತಿ ಉಮಾಪತಿ ಬಂಡವಾಳ ಹೂಡುತ್ತಾರೆ ಎಂಬ ಸುದ್ದಿ ಹರಡಿತ್ತಲ್ಲಾ, ಆ ಚಿತ್ರದ ಸ್ಕ್ರಿಪ್ಟ್ ಪೂಜಾ ಕಾರ್ಯ ಮೊನ್ನೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನೆರೆವೇರಿದ್ದು ಅದಾಗಲೇ ಚಿತ್ರದ ಬಗೆಗಿನ ಕುತೂಹಲ ಹುಟ್ಟುಕೊಂಡಿದೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ D53 ಅನ್ನೋ ಹೆಸರಿನಲ್ಲಿ ಪೂಜೆ ನೆರವೇರಿಸಲಾಗಿದೆ. ನಗರದ ಮಲ್ಲೇಶ್ವರಂನ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ನೆರವೇರಿದೆ.

ಚಿತ್ರಕ್ಕೆ ನಿದೇಶಕ ತರುಣ್ ಸುಧಿರ್ ‘ವಜ್ರಮುನಿ’ ಮತ್ತು ‘ರಾಬರ್ಟ್” ಎಂಬ ಟೈಟಲ್‌ನ್ನ ರಿಜಿಸ್ಟ್ರಾರ್ ಮಾಡಿಸಿದ್ದು ಅದರಲ್ಲಿ ‘ರಾಬರ್ಟ್’ ಹೆಸರನ್ನು ಫೈನಲ್ ಮಾಡಲಾಗಿದೆಯಂತೆ.. ಇದು ಪಕ್ಕಾ ಔಟ್‌ ಅಂಡ್‌ ಔಟ್‌ ಕಾಮಿಡಿ ಕಥಾವಸ್ತುವನ್ನು ಒಳಗೊಂಡ ಚಿತ್ರವಂತೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ದರ್ಶನ್‌ ಆರಂಭದಿಂದ ಕೊನೆವರೆಗೂ ನಗಿಸುತ್ತಾರಂತೆ. ಇದೊಂಥರ ಕಾಮಿಡಿ ಡ್ರಾಮಾ ಶೈಲಿಯ ಸಿನಿಮಾವಂತೆ.. ತರುಣ್‌ ಸುಧೀರ್‌ ವಿಶಿಷ್ಟವಾದ ಕಥೆಯನ್ನ ಸಿದ್ಧಪಡಿಸಿದ್ದು, ತೆರೆಮೇಲೆ ತರೋದಕ್ಕೆ ರೆಡಿಯಾಗಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top