fbpx
ಮನೋರಂಜನೆ

ಹೆಣ್ಣಿನ ಬಗ್ಗೆ ಖಡಕ್ ಮಾತುಗಳನ್ನು ಆಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪತ್ನಿ ವಿಜಯಲಕ್ಷ್ಮಿಯವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ ,ಒಂದು ವಿಷಯಕ್ಕೆ ಸಂಬಂಧ ಪಟ್ಟಂತೆ ಅವರ ಅಭಿಪ್ರಾಯ ತಿಳಿಸುವುದು ಇವರಿಗೆ ರೂಢಿ.ಸಧ್ಯ ತುಂಬಾ ಸುದ್ದಿಯಲ್ಲಿ ಇರುವ ವಿಷಯ ಏನು ಅಂದ್ರೆ ” ಮೀಟೂ”ಈಗ ಮೀಟೂ ಒಂದೊಳ್ಳೆ ವೇದಿಕೆಯಾಗಿದೆ ಅಂತ ಬಹುತೇಕ ಎಲ್ಲಾ ಕ್ಷೇತ್ರಗಳ ಮಹಿಳೆಯರು ತಮಗಾದ ಲೈಂಗಿಕ ಶೋಷಣೆಯ ಅಳಲು ತೋಡಿಕೊಂಡಿದ್ದಾರೆ. ಈಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ವೀಟ್ ಮಾಡಿರುವುದು ಮೀಟೂ ಅಭಿಯಾನದಲ್ಲಿ ಮಹಿಳೆಯರ ಪರವಾಗಿದ್ದೇನೆ ಎಂಬಂತಿದೆ.

ವಿಜಯಲಕ್ಷ್ಮಿ ಅವರು ನೇರವಾಗಿ ಮೀಟೂ ಅಭಿಯಾನದ ಕುರಿತು ಮಾತನಾಡಿಲ್ಲ. ಬದಲಾಗಿ ನವರಾತ್ರಿಗೆ ಎಲ್ಲಾ ಮಹಿಳೆಯರಿಗೆ ಶುಭಾಶಯವನ್ನು ತಿಳಿಸಿದ್ದಾರೆ ಜೊತೆಗೆ ಹೀಗೆ ಅವರ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ “ಪ್ರತಿಯೊಬ್ಬ ಮಹಿಳೆಯಲ್ಲೂ ದುರ್ಗ ದೇವಿ ಇರುತ್ತಾಳೆ. ದೇಗುಲದಲ್ಲಿರುವ ದೇವಿಯನ್ನು ಪೂಜಿಸುವ ಮೊದಲು ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಯಿರಿ”

 

 

 

ಈ ಹಿಂದೆ ಕಿಡಿಗೇಡಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿ ಕಿರುಕುಳ ನೀಡುತ್ತಿದ್ದರು. ವಿಜಯಲಕ್ಷ್ಮಿ ಜೊತೆಯಿರುವ ಫೋಟೋಗೆ `ಮೈ ಲೈಫ್’ ಎಂದು ಕಿಡಿಗೇಡಿಯೊಬ್ಬ ಟ್ಯಾಗ್ ಮಾಡಿದ್ದನು. ಅಲ್ಲದೇ ಫೋಟೋ ಟ್ಯಾಗ್ ಮಾಡಿ ಕೀಳುಮಟ್ಟದ ಅಶ್ಲೀಲ ಪದವನ್ನು ಕೂಡ ಬಳಸಿದ್ದನು.ಈ ಬಗ್ಗೆ ನಕಲಿ ಖಾತೆ ಮೂಲಕ ನನ್ನ ಹಾಗೂ ಕುಟುಂಬಸ್ಥರ ಫೋಟೋಗಳನ್ನು ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿ ವಿಜಯಲಕ್ಷ್ಮಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಿಡಿಗೇಡಿ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 354(ಆ),354ಂ(1)(iv),(505)(507)(420)ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top