ದೇವರು

ಧನಲಾಭ,ಯಶಸ್ಸು ಪ್ರಾಪ್ತಿಯಾಗಬೇಕಾದ್ರೆ ವಿಜಯದಶಮಿಯ ದಿನ ತಪ್ಪದೇ ಈ 5 ಕೆಲಸಗಳನ್ನು ಮಾಡಿ.

ನವರಾತ್ರಿಯ ಕಡೆಯ ದಿನ ವಿಜಯದಶಮಿ. ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಆಶ್ವಯುಜ ಮಾಸ, ಶುಕ್ಲ ಪಕ್ಷದ, ಹತ್ತನೆಯ ದಿನದಂದು ದಶಮಿಯನ್ನು ವಿಜಯದಶಮಿಯೆಂದು ಆಚರಿಸಲಾಗುತ್ತದೆ. ಶ್ರೀ ರಾಮನು ರಾವಣನನ್ನು ಸಂಹರಿಸಿದ ಶುಭ ದಿನವೆಂದು ಸಹ ಹೇಳಲಾಗುತ್ತದೆ. ಹಾಗಾಗಿ ಇಂದು ಆರಂಭಿಸಿದ ಯಾವುದೇ ಕೆಲಸದಲ್ಲಿಯಾದರೂ ಕೂಡ ಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಸಾಂಸಾರಿಕ ಸಮಸ್ಯೆಯನ್ನು ದೂರ ಮಾಡುವಂತಹ ಯಾವುದೇ ಕೆಲಸವು ವಿಫಲವಾಗುವುದಿಲ್ಲ.

 

 

 

ವಿಜಯದಶಮಿಯಂದು ಯಾತ್ರೆ ಮಾಡುವುದು ಬಹಳ ಒಳ್ಳೆಯದು. ದೂರದ ಊರಿಗೆ ಹೋಗಬೇಕೆಂದೇನು ಇಲ್ಲ. ಚಿಕ್ಕ ಪ್ರವಾಸವನ್ನು ಮಾಡಿದರೂ ಸಾಕು.ಶಮಿ ಮರದ ಪೂಜೆ ಮಾಡಿ, ಅದರ ಎಲೆಯನ್ನು ನಿಮ್ಮ ಮನೆಯ ಕಪಾಟಿನಲ್ಲಿ ಇಡುವುದರಿಂದ, ಆರ್ಥಿಕ ಸಮಸ್ಯೆಗಳು ಮತ್ತು ಆರ್ಥಿಕ ಮುಗ್ಗಟ್ಟು ದೂರವಾಗುತ್ತವೆ .ಮನೆಯಲ್ಲಿ ಕಳಶವನ್ನು ಸ್ವಲ್ಪ ಸಮಯದವರೆಗೂ ತಲೆಯ ಮೇಲೆ ಹೊತ್ತು ಕೊಳ್ಳುವುದರಿಂದ ಭಗವತಿ ದೇವಿಯ ಆಶೀರ್ವಾದ ಲಭಿಸುತ್ತದೆ. ಮನೆಯಲ್ಲಿ ಹತ್ತು ವರ್ಷ ಕಡಿಮೆ ವಯಸ್ಸಿನ ಕನ್ಯೆಯಿದ್ದರೆ, ಆಕೆಗೆ ಇಷ್ಟವಾದ ಅಥವಾ ಪ್ರೀತಿಯ ಉಡುಗೊರೆ ಅಥವಾ ಬಟ್ಟೆಯನ್ನು ದಾನ ಮಾಡಿ ನಂತರ ಆಕೆಯ ಕೈಯಿಂದ ಹಣವನ್ನು ತಿಜೋರಿಯಲ್ಲಿ ಇಡಿಸಿ.

ದುರ್ಗಾ ದೇವಿಯ ದೇವಸ್ಥಾನಕ್ಕೆ ಹೋಗಿ, ಈ ದೇವಿಯ ಹಣೆಗೆ ಹಚ್ಚುವ ತಿಲಕವನ್ನು ಪ್ರಸಾದವಾಗಿ ಸ್ವೀಕರಿಸಿ ನಂತರ ಸ್ವಲ್ಪ ಕುಂಕುಮವನ್ನು ಮನೆಗೆ ತಂದು ಇಟ್ಟುಕೊಳ್ಳಿ, ಆಗ ಮನೆಯಲ್ಲಿ ಸೌಭಾಗ್ಯ ಸಮೃದ್ಧಿಯಾಗಿ ನೆಲೆಸುತ್ತದೆ.ವಿಜಯದಶಮಿಯ ದಿನ ಕುಬೇರ ದೇವ, ಹಳದಿ ಕವಡೆಗಳು, ಪಾದರಸದಿಂದ ಮಾಡಿದ ಲಕ್ಷ್ಮೀದೇವಿಯ ಚಿತ್ರಗಳು, ಸಣ್ಣ ತೆಂಗಿನಕಾಯಿ, ಬೆಳ್ಳಿಯ ಲಕ್ಷ್ಮೀ ಮತ್ತು ಗಣೇಶನ ವಿಗ್ರಹಗಳು,ಲಕ್ಷ್ಮೀ ದೇವಿಯ ಬೆಳ್ಳಿಯ ಪಾದಗಳು,ಬೆಳ್ಳಿಯ ಖಡ್ಗಗಳು, ಶ್ರೀ ಯಂತ್ರ,ಕಮಲದ ಹೂವಿನ ಬೀಜ, ಒಂದು ಕಣ್ಣಿನ ತೆಂಗಿನಕಾಯಿ, ದಕ್ಷಿಣಾವರ್ತಿ ಶಂಖ, ಇವುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ವಿಜಯದಶಮಿಯ ತಂದು ನಿಮ್ಮ ಮನೆಯ ದೇವರ ಮನೆಯಲ್ಲಿಟ್ಟು ಪೂಜಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top