ಮನೋರಂಜನೆ

ಆಸ್ತಿಗಾಗಿ ವಿಕಲಚೇತನೆ ಚಿಕ್ಕಮ್ಮನ ಮೇಲೆ ಹಲ್ಲೆ ಆರೊಪ- ನಟ ರಿಷಿ ವಿರುದ್ಧ ಎಫ್​ಐಆರ್​​​ ದಾಖಲು.

ಆಪರೇಷನ್​ ಅಲಮೇಲಮ್ಮ ಚಿತ್ರದ ನಾಯಕ ‘ರಿಷಿ’ ವಿರುದ್ಧ ಗಂಭೀರವಾದೊಂದು ಆರೋಪ ಕೇಳಿಬಂದಿತ್ತು.. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮ್ಮನ ಮೇಲೆ ರಿಷಿ ಹಲ್ಲೆ ಮಾಡಿದ್ದಾರೆ, ವಿಕಲಚೇತನ ಚಿಕ್ಕಮ್ಮನ ಕುತ್ತಿಗೆ ಹಿಸುಕಿ, ಮಚ್ಚು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ರಿಷಿ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಏನಿದು ಪ್ರಕರಣ?
ನಟ ರಿಷಿ ಸದ್ಯ ತನ್ನ ಅಮ್ಮ ಅನಲ ಅವರ ತಂದೆಯ ಮನೆ ಅಂದರೆ ತಾತನ ಮನೆಯಲ್ಲಿಯೇ ವಾಸವಾಗಿದ್ದಾರೆ. ಅವರ ಜೊತೆಗೆ ರಿಷಿಯ ಅಪ್ಪ ನಾಗರಾಜು ಕೂಡ ಅಲ್ಲಿಯೇ ಇದ್ದಾರೆ.. ಅನಲ ಅವರ ತಂಗಿ ಅಂದ್ರೆ ರಿಷಿಯ ಚಿಕ್ಕಮ್ಮ ‘ಶಾಲಿನಿ ಗುರುಮೂರ್ತಿ’ ವಿಕಲಚೇತನರಾಗಿದ್ದು, ತಮ್ಮ ತಂದೆಯನ್ನು(ರಿಷಿ ತಾತ) ನೋಡಲು ಬಸವೇಶ್ವರದಲ್ಲಿರುವ ಮನೆಗೆ ಬಂದಿದ್ದಾರೆ. ಆದರೆ, ಆಕೆಯನ್ನು ಒಳಗೆ ಬರಲು ಬಿಡದ ರಿಷಿ ಸ್ಟಾಂಪ್​ ಪೇಪರ್​ ಮೇಲೆ ಸಹಿ ಹಾಕಿ ಒಳಗೆ ಬಾ ಎಂದು ಹೆದರಿಸಿದ್ದಾರೆ.. ಸ್ಟಾಂಪ್​ ಪೇಪರ್​ ಮೇಲೆ ಸಹಿ ಹಾಕಲು ಶಾಲಿನಿ ಒಪ್ಪದ ಕಾರಣ ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿಲಾಗಿದೆ.

ರಿಷಿ ಹೇಳೋದೇನು?
ಇನ್ನು ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರಿಷಿ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. “ನಮ್ಮ ಚಿಕ್ಕಮ್ಮ ಮೊದಲಿನಿಂದಲೂ ತಾತನ ಹತ್ತಿರ ದುಡ್ಡಿಗಾಗಿ ಪೀಡಿಸುತ್ತಿದ್ದರು. ಆದರೆ ಈಗ ತಾತ ಸ್ಟ್ರೋಕ್ ಆಗಿ ಹಾಸಿಗೆ ಹಿಡಿದಿದ್ದರಿಂದ ಚಿಕ್ಕಮ್ಮನಿಗೆ ಹಣ ಕೊಡಲು ಯಾರು ಇಲ್ಲ . ಆದ ಕಾರಣ ನನ್ನ ಹಿಂದೆ ಬಿದ್ದಿದ್ದಾರೆ. ನಾನು ಸಿನಿಮಾಗಳಲ್ಲಿ ನಟಿಸಿದ್ದೇನೆ, ನನ್ನ ಬಳಿ ದುಡ್ಡು ಇರುತ್ತೆ ಎಂದು ಭಾವಿಸಿದ್ದಾರೆ, ಅವರು ದುಡ್ಡು ಕೇಳಿದಾಗ ಕೊಡುವುದಿಲ್ಲ ಎಂದಿದ್ದಕ್ಕೆ ನನ್ನ ವಿರುದ್ಧ ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ತುಂಬಾ ಕ್ರಿಮಿನಲ್ ಬುದ್ಧಿಯವರು” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top