ಮನೋರಂಜನೆ

‘ಬಿಗ್​ಬಾಸ್ ಸೀಸನ್ 6 ನಲ್ಲಿ ಸ್ಪರ್ಧಿಯಾಗಲು ಅರ್ಜಿ ಸಲ್ಲಿಸಿದ ‘ಕಾಮನ್​ ಮ್ಯಾನ್​’ ಸಂಖ್ಯೆ ಎಷ್ಟು ಗೊತ್ತಾ?

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ನನ್ನು ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬಿಗ್ ಬಾಸ್ ಮತ್ತೆ ಶುರುವಾಗುತ್ತೆ ಎಂಬ ಸುದ್ದಿ ಹೊರಬಿದ್ದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ 6ನೇ ಸೀಸನ್ ಅವತ್ತು ಸ್ಟಾರ್ಟ್ ಆಗುತ್ತಂತೆ, ಇವತ್ತು ಸ್ಟಾರ್ಟ್ ಆಗುತ್ತಂತೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ವಾಹಿನಿಯವರೇ ಬಿಗ್ ಬಾಸ್ ಅಕ್ಟೋಬರ್ 21ಕ್ಕೆ ಸ್ಟಾರ್ಟ್ ಆಗುತ್ತೆ ಎಂದು ಘೋಷಿಸಿದ್ದರು.

ಬಹು ನಿರೀಕ್ಷೆಯ ಬಿಗ್ ಬಾಸ್ 6ನೇ ಆವೃತ್ತಿ ಅಕ್ಟೋಬರ್ 21ರಂದು ಆರಂಭವಾಗಲಿದೆ. ಕಳೆದ ಐದು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್ ಬಾಸ್ ಆಗಲು ರೆಡಿಯಾಗಿದ್ದಾರೆ.. ಈ ಸೀಸನ್ನಿನ ಪ್ರೊಮೊಗಳು ಅದಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದೆ.

ಇಂಥಾ ಬಿಗ್ ಬಾಸ್ ಮನೆಗೆ ಈ ಭಾರಿ ಅವರು ಹೋಗ್ತಾರಂತೆ, ಇವರು ಹೋಗ್ತಾರಂತೆ ಎಂಬಂತ ರೂಮರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ಹರಿದಾಡುತ್ತಿದ್ದಾವೆ. ಆದರೆ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳ ಪಟ್ಟಿ ಗೊತ್ತಾಗಿದ್ದು ಆ EXCLUSIVE ಡೀಟೈಲ್ಸ್ ಇಲ್ಲಿದೆ. ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಕಳೆದ ವರ್ಷ​ ಸಾಮಾನ್ಯ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ರಿಯಾಜ್, ದಿವಾಕರ್​ರಂತಹ ಸಾಮಾನ್ಯರು ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟದ್ದರು. ಅಷ್ಟೇ ಅಲ್ಲದೆ ಅತ್ಯಂತ ಹೆಚ್ಚು ಗಮನ ಸೆಳೆದಿರೋರು ಸಹ ಇದೇ ಸಾಮಾನ್ಯರೆ. ಈ ಕಾರಣದಿಂದಲೇ ಈ ಬಾರಿ ಹೆಚ್ಚು ಸಾಮಾನ್ಯ ಜನರಿಗೆ ಅವಕಾಶ ನೀಡಲಾಗಿದೆಯಂತೆ. ಈ ಬಾರಿಯ ಬಿಗ್‍ಬಾಸ್ ಮನೆಗೆ 15 ಜನರ ಬದಲು 18 ಸ್ಪರ್ಧಿಗಳು ಎಂಟ್ರಿಕೊಡಲಿದ್ದಾರಂತೆ. ಮತ್ತೊಂದು ವಿಶೇಷ ಅಂದ್ರೆ ಸೆಲೆಬ್ರಿಟಿಗಳಿಗಿಂತ ಸಾಮಾನ್ಯ ಜನರೇ ಹೆಚ್ಚು ಆಗಮಿಸಲಿದ್ದಾರೆ.

ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಾಮಾನ್ಯ ಜನರ ಕೋಟಾದಿಂದ ಬಂದಿದ್ದು, ಒಂದು ಲಕ್ಷ ಜನರಲ್ಲಿ ಕಲರ್ಸ್ ಬಿಗ್‍ಬಾಸ್ ಟೀಂ 10 ಜನರನ್ನು ಆಯ್ಕೆ ಮಾಡಿಕೊಳ್ಳಲಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top