ದೇವರು

ನವರಾತ್ರಿಯ ಸಮಯದಲ್ಲಿ ಈ ಮಂತ್ರವನ್ನು ಪಠಿಸಿದರೆ ಮಾಟ ,ಮಂತ್ರ, ಋಣಬಾಧೆ ಹಾಗೂ ಜೀವನದಲ್ಲಿ ಯಾವುದೇ ಅಡೆತಡೆಗಳು ಬರುವುದಿಲ್ಲವಂತೆ

ನವರಾತ್ರಿಯಲ್ಲಿ ಈ ಮಂತ್ರ ಪಠಿಸುವವರಿಗೆ ಮಾಟ ,ಮಂತ್ರ, ಋಣಬಾಧೆ ಮತ್ತು ಜೀವನದಲ್ಲಿ ಅಡೆತಡೆಗಳು ಇರುವುದಿಲ್ಲ.
ದುರ್ಗಾದೇವಿ ಸೃಷ್ಟಿಯಲ್ಲಿರುವ ಸಮಸ್ತ ಶಕ್ತಿಗಳಿಗೆ ಮೂಲ ದೇವಿ, ಶಕ್ತಿ ಸ್ವರೂಪಿಣಿಯಿಂದ ಒಂದು ಶಕ್ತಿ ಸೃಷ್ಟಿಯಾಗಬೇಕು ಎಂದರೂ ಅಥವಾ ನಾಶವಾಗಬೇಕೆಂದರೂ ಈ ದೇವಿಯೇ ಕಾರಣ. ದುರ್ಗಾ ದೇವಿಯ ಅವತಾರ ತಾಳಿರುವುದು ದುಷ್ಟರನ್ನು ಸಂಹಾರ ಮಾಡಲು, ಶಿಷ್ಟರನ್ನು ಕಾಪಾಡಲು, ಹಾಗೆಯೇ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವ ಆದಿದೇವತೆ ದುರ್ಗಾದೇವಿ.ಈ ದೇವಿಯನ್ನು ಆರಾಧಿಸುವುದರಿಂದ ನಮಗೆ ಗ್ರಹಗಳ ಕ್ರೂರ ದೃಷ್ಟಿ, ಶತ್ರು ಬಾಧೆ ಇರುವುದಿಲ್ಲ, ಕಷ್ಟದಿಂದ ಹೊರಬರಲು ದೇವಿಯ ಶಕ್ತಿಶಾಲಿ ಮಂತ್ರವಿದೆ. ಅದು ಏನು ಎಂಬುದನ್ನು ಈಗ ನಾವು ತಿಳಿದುಕೊಳ್ಳೋಣ.

 

 

 

ಈ ಮಂತ್ರ ಪಠಿಸುವವರಿಗೆ ಕ್ರೂರ ಮತ್ತು ದುಷ್ಟ ಶಕ್ತಿಗಳು ಬಾದೆ, ಮಾಟ, ಮಂತ್ರ, ಋಣಬಾಧೆ ಜೀವನದಲ್ಲಿ ಅಡೆತಡೆಗಳು, ಯಾವುದೇ ದುಷ್ಟ ಶಕ್ತಿಗಳ ಕಾಟ ಇರುವುದಿಲ್ಲ.ಈ ಮಂತ್ರವನ್ನು ಮಂಗಳವಾರ, ಶುಕ್ರವಾರ, ನವರಾತ್ರಿಯ ಸಮಯದಲ್ಲಿ, ಅಷ್ಟಮಿ, ಅಮಾವಾಸ್ಯೆ , ಹುಣ್ಣಿಮೆಯ ದಿನಗಳಲ್ಲಿ ಪೂಜಿಸಿದರೆ ಶೀಘ್ರವಾಗಿ ಫಲಗಳನ್ನು ಕಾಣಬಹುದು.ಆ ಮಂತ್ರ ಹೀಗಿದೆ,“ಓಂ ಹ್ರೀಂ ದುಂ ಉತ್ತಿಷ್ಠ ಪುರುಷಿ ಕಿಂ ಸ್ವಪಿಷಿ ಭಯಂ ಮೇ ಸಂ ಉಪಸ್ಥಿತಂ ಯದಿ ಶಕ್ಯಮಶಕ್ಯo ವಾ ತನ್ಮೇ ಭಗವತೀ ಶಮಯ ಸ್ವಾಹಾ”,ಈ ಬೀಜ ಮಂತ್ರವನ್ನು 108 ಬಾರಿ ಅಥವಾ 1008 ಬಾರಿ ಪಠಿಸಬೇಕು. ಜಪಮಾಲೆಯನ್ನು ಉಪಯೋಗಿಸಿದರೆ ಒಳ್ಳೆಯದು, ಈ ಮಂತ್ರವನ್ನು ಬೆಳಗ್ಗೆ ಆರರಿಂದ ಏಳು ಗಂಟೆಯೊಳಗೆ ಅಥವಾ ಸಂಜೆ ಆರರಿಂದ ಏಳು ಗಂಟೆಯೊಳಗೆ ಈ ಬೀಜ ಮಂತ್ರವನ್ನು ಪಠಿಸಿದರೆ ದೇವಿಯ ಕೃಪೆ ದೊರೆತು ಎಲ್ಲ ಸಮಸ್ಯೆಗಳು ದೂರವಾಗುತ್ತವೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top